ETV Bharat / bharat

ಚೀನಾ ಗಡಿ ಬಳಿ ಹೆಲಿಕಾಪ್ಟರ್​​ ತುರ್ತು ಭೂ ಸ್ಪರ್ಶ: 16 ಗಂಟೆಗಳ ಬಳಿಕ ಸುರಕ್ಷಿತವಾಗಿ ಮುನ್ಸಿಯಾರಿ​ ತಲುಪಿದ ಸಿಇಸಿ ರಾಜೀವ್​ ಕುಮಾರ್​

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಿದ್ದ ಹೆಲಿಕಾಪ್ಟರ್​ ಪ್ರತಿಕೂಲ ಹವಾಮಾನದ ಪರಿಣಾಮ ಚೀನಾ ಗಡಿಯ ಪಿಥೋರಗಢನ ಕುಗ್ರಾಮ ರಾಲಮ್​ ಗ್ರಾಮದ ಬಳಿ ಭೂ ಸ್ಪರ್ಶ ಮಾಡಿತ್ತು.

author img

By ETV Bharat Karnataka Team

Published : 2 hours ago

cec-rajiv-kumar-reached-munsiyari-after-emergency-landing-in-ralam-village-in-pithoragarh
ಮುನ್ಸಿಯಾರಿಗೆ ಬಂದಿಳಿದ ಸಿಇಸಿ (ಕೃಪೆ ಪಿಥೋರಗಢ ಜಿಲ್ಲಾಡಳಿತ ಫೋಟೋ)

ಪಿಥೋರ್​ಗಢ, ಉತ್ತರಾಖಂಡ್​​: ಭಾರತದ ಮುಖ್ಯ ಚುನಾವಣಾ ಆಯುಕ್ತರು ಪ್ರಯಾಣಿಸುತ್ತಿದ್ದ ಹೆಲಿಕ್ಟಾಪ್ಟರ್​ ಉತ್ತರಾಖಂಡ್​​ನ ಪಿಥೋರಗಢ ಜಿಲ್ಲೆಯಲ್ಲಿ ಚೀನಿ ಆಕ್ರಮಿತ ಟಿಬೆಟ್​ ಗಡಿಯಲ್ಲಿ ತುರ್ತು ಭೂ ಸ್ಪರ್ಶ ಮಾಡಿತ್ತು. ಹೆಲಿಕಾಪ್ಟರ್​​ನಲ್ಲಿ ಸಿಇಸಿ ರಾಜೀವ್​​ ಕುಮಾರ್​ ಸೇರಿದಂತೆ ಐದು ಮಂದಿ ಪ್ರಯಾಣಿಸುತ್ತಿದ್ದು, ಹೆಲಿಕಾಪ್ಟರ್​ 16 ಗಂಟೆಗಳ ಬಳಿಕ ಮುನ್ಸಿಯಾರಿನಲ್ಲಿ ಸುರಕ್ಷಿತವಾಗಿ ಇಳಿದಿದೆ.

ಮುಖ್ಯ ಚುನಾವಣಾ ಅಧಿಕಾರಿಗಳಾದ ರಾಜೀವ್​ ಕುಮಾರ್​ ಬುಧವಾರ ಮಿಲಾಮ್​ ಕಡೆಗೆ ಪ್ರಯಾಣ ಬೆಳೆಸಿದ್ದರು. ಆದರೆ, ಪ್ರತಿಕೂಲ ಹವಾಮಾನದ ಪರಿಣಾಮ ಹೆಲಿಕಾಪ್ಟರ್​​ ಪಿಥೋರಗಢನ ಕುಗ್ರಾಮ ರಾಲಮ್​ ಗ್ರಾಮದಲ್ಲಿ ಭೂ ಸ್ಪರ್ಶ ಮಾಡಿತ್ತು. ಗುರುವಾರ ಬೆಳಗ್ಗೆ ಪ್ರಯಾಣಕ್ಕೆ ವಾತಾವರಣ ಸೂಕ್ತವಾಗಿರುವ ಹಿನ್ನಲೆ ಮತ್ತೆ ಪ್ರಯಾಣವನ್ನು ಅವರು ಮುಂದುವರೆಸಿದ್ದರು.

ರಾತ್ರಿಪೂರ್ತಿ ಗ್ರಾಮದಲ್ಲೇ ಕಳೆದ ಅಧಿಕಾರಿಗಳು: ರಾಜೀವ್​ ಕುಮಾರ್​ ಅವರ ಜೊತೆಗೆ ಉತ್ತರಾಖಂಡ್​ನ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ವಿಜಯ್​ ಕುಮಾರ್​ ಮತ್ತು ಸಿಇಸಿ ಪಿಎಸ್​ಒ ನವೀನ್​ ಕುಮಾರ್​ ಅವರು ಜೊತೆ ಪ್ರಯಾಣ ಬೆಳೆಸಿದ್ದರು. ಬುಧವಾರ ಸಂಜೆ ಪಿಥೋರಗಢದಲ್ಲಿ ಹೆಲಿಕಾಪ್ಟರ್​ ತುರ್ತು ಭೂ ಸ್ಪರ್ಶ ಮಾಡಿದ ಹಿನ್ನೆಲೆಯಲ್ಲಿ ಹಿಮಾಲಯ ತಪ್ಪಿಲಿನಲ್ಲಿರುವ ರಾಲಮ್​ ಗ್ರಾಮದಲ್ಲಿ ರಾತ್ರಿ ಕಳೆದರು. ಗುರುವಾರ 6.30ಕ್ಕೆ ಹೆಲಿಕಾಪ್ಟರ್​ ಹಾರಾಟಕ್ಕೆ ವಾತಾವರಣ ಪೂರಕವಾಗಿದ್ದ ಹಿನ್ನೆಲೆ ಹಾರಾಟ ನಡೆಸಿದ್ದು, ಬಳಿಕ ಮುನ್ಸಿಯಾರಿ ಹೆಲಿಪ್ಯಾಡ್​ನಲ್ಲಿ ಲ್ಯಾಂಡ್​ ಮಾಡಲಾಗಿದೆ. ಅಧಿಕಾರಿಗಳ ಜೊತೆಗೆ ಐಟಿಬಿಪಿ ಮತ್ತು ಬಿಆರ್​ಒ ಸೇರಿದಂತೆ ಪಿಥೋರ್​ಗಢ್​​ನ ಆಡಳಿತಾತ್ಮಕ ಅಧಿಕಾರಿಗಳು ಹೆಲಿಪ್ಯಾಡ್​ನಲ್ಲಿ ಹಾಜರಿದ್ದರು. ಮುನ್ಸಿಯರಿಯಿಂದ ಮುಖ್ಯ ಚುನಾವಣಾ ಆಯುಕ್ತರು ಐಟಿಬಿಪಿ ಕ್ಯಾಂಪ್​​ಗೆ ತೆರಳಿದರು.

5 ಡಿಗ್ರಿ ಉಷ್ಣಾಂಶದ ವಾತವಾರಣ: ಕೆಟ್ಟ ಹವಾಮಾನದಿಂದಾಗಿ ಮೊದಲು ವಿಮಾನ ರಾಲಮ್​ ಗ್ರಾಮದಲ್ಲಿ ತುರ್ತು ಭೂ ಸ್ಪರ್ಶ ಮಾಡಿತು. ಇದಾದ ಕೆಲವೇ ಹೊತ್ತಿನಲ್ಲಿ ಸಂಜೆ ಗ್ರಾಮದಲ್ಲಿ ಜೋರು ಮಳೆಯಾಗಿದ್ದು, ಪ್ರಯಾಣ ಬೆಳೆಸುವುದು ಕಷ್ಟವಾಯಿತು. ಹಿಮಾಲಯದ ತಪ್ಪಲಿನ ಈ ಪ್ರದೇಶದಲ್ಲಿ ತಾಪಮಾನ ಐದು ಡಿಗ್ರಿ ಸೆಲ್ಸಿಯಸ್​​ಗೆ ಜಾರಿದ್ದು, ಈ ಚಳಿಯಲ್ಲಿಯೇ ಅಧಿಕಾರಿಗಳು ರಾತ್ರಿ ಕಳೆಯಬೇಕಾಯಿತು. ಕುಗ್ರಾಮ ಮತ್ತು ಸಂಜೆಯಾದ ಕಾರಣ ಇಲ್ಲಿ ವಿದ್ಯುತ್​ ಮತ್ತು ಫೋನ್​ನ ವ್ಯವಸ್ಥೆ ಕೂಡ ಇರಲಿಲ್ಲ.ಹೀಗಾಗಿ ಸಂಪರ್ಕವೂ ಸಾಧ್ಯವಾಗಿರಲಿಲ್ಲ. ರಾಲಮ್​ ಗ್ರಾಮವೂ ಚೀನಾ ಆಕ್ರಮಿತ ಟಿಬೆಟ್​​ನ ಗಡಿಯಲ್ಲಿದೆ. ಈ ಗ್ರಾಮದ ಜನರು ಇಂದಿಗೂ ವಿದ್ಯತ್​ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಟ್ಟ ಹವಮಾನದ ಪರಿಣಾಮ ಮುಖ್ಯ ಚುನಾವಣಾ ಆಯುಕ್ತರು ಈ ಸಮಸ್ಯೆ ಎದುರಿಸಬೇಕಾಯಿತು.

ಘಟನೆ ಕುರಿತು ತಕ್ಷಣಕ್ಕೆ ಮುನ್ಸಿಯಾರಿಯಲ್ಲಿನ ಆಡಳಿತಾತ್ಮಕ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಗುರುವಾರ ಬೆಳಗ್ಗೆ ಚುನಾವಣಾ ಆಯುಕ್ತರು ಗ್ರಾಮದಿಂದ 30 ಕಿ.ಮೀ ದೂರವಿದ್ದ ಮುನ್ಸಿಯರ್​ಗೆ ತಲುಪಿದರು. ಮುಖ್ಯ ಅಭಿವೃದ್ಧಿ ಅಧಿಕಾರಿ ಡಾ.ದೀಪಕ್ ಸೈನಿ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಮತ್ತು ಐಟಿಬಿಪಿ ಸಿಬ್ಬಂದಿ ಹೆಲಿಪ್ಯಾಡ್‌ಗೆ ಆಗಮಿಸಿ, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರ ಯೋಗಕ್ಷೇಮ ವಿಚಾರಿಸಿದರು. ಬಳಿಕ ಮಾತನಾಡಿದ ಅಧಿಕಾರಿಗಳು ಎಲ್ಲರೂ ಸುರಕ್ಷಿತವಾಗಿದ್ದು, ಆರೋಗ್ಯವಾಗಿರುವುದಾಗಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಇಂದು ರಾತ್ರಿ ಭೂಮಿಗೆ ತೀರಾ ಹತ್ತಿರದಲ್ಲಿ ಕಾಣಿಸಿಕೊಳ್ಳಲಿದ್ದಾನೆ ಸೂಪರ್​​​​​​​​ಮೂನ್​ : ಏನಿದು ಸೂಪರ್​​​ ಹಂಟರ್​​​​​​​​​​ ಚಂದಿರನ​ ಮಹತ್ವ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.