ETV Bharat / bharat

ನೀಟ್​ ಪೇಪರ್ ಲೀಕ್ ಪ್ರಕರಣ: ಲಾತೂರ್ ಪ್ರವೇಶಿಸಿದ ಸಿಬಿಐ ಅಧಿಕಾರಿಗಳು - NEET Paper Leak Case - NEET PAPER LEAK CASE

ನೀಟ್ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಿಬಿಐ ಅಧಿಕಾರಿಗಳು ಶನಿವಾರ ಮಧ್ಯರಾತ್ರಿಯೇ ಲಾತೂರ್​ಗೆ ಬಂದಿದ್ದು,ತನಿಖೆ ಮತ್ತಷ್ಟು ಚುರುಕು ಪಡೆದುಕೊಂಡಿದೆ.

cbi
ಸಿಬಿಐ (ETV Bharat)
author img

By ETV Bharat Karnataka Team

Published : Jul 1, 2024, 7:11 PM IST

ಲಾತೂರ್ (ಮಹಾರಾಷ್ಟ್ರ) : 'ನೀಟ್' ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಲಾತೂರ್‌ನಲ್ಲಿ ಪ್ರಕರಣ ದಾಖಲಾಗಿದ್ದು, ಆರು ದಿನಗಳ ಪೊಲೀಸ್ ತನಿಖೆಯ ನಂತರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ. ಈ ಪ್ರಕರಣ ಸಿಬಿಐಗೆ ವರ್ಗವಾದ ಕೂಡಲೇ ಇಬ್ಬರು ಹಿರಿಯ ಸಿಬಿಐ ಅಧಿಕಾರಿಗಳು ಶನಿವಾರ ಮಧ್ಯರಾತ್ರಿ ಅತ್ಯಂತ ಗೌಪ್ಯವಾಗಿ ಲಾತೂರ್ ಪ್ರವೇಶಿಸಿದ್ದಾರೆ.

ಭಾನುವಾರ ಇಡೀ ದಿನ ಆರೋಪಿಗಳ ವರ್ಗಾವಣೆ ಪ್ರಕ್ರಿಯೆಯನ್ನು ಸಿಬಿಐ ಅಧಿಕಾರಿಗಳು ಪೂರ್ಣಗೊಳಿಸಿದ್ದಾರೆ. ಲಾತೂರ್ ಪೊಲೀಸರ ವಶದಲ್ಲಿರುವ ಇಬ್ಬರು ಆರೋಪಿಗಳಾದ ಜಲೀಲ್ ಪಠಾಣ್ ಮತ್ತು ಸಂಜಯ್ ಜಾಧವ್ ಅವರನ್ನು ಇಂದು (ಜುಲೈ 01) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ನಂತರ ಈ ಇಬ್ಬರು ಆರೋಪಿಗಳ ಕಸ್ಟಡಿಯನ್ನು ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ ವೇಳೆ, ತಲೆಮರೆಸಿಕೊಂಡಿರುವ ಆರೋಪಿ ಗಂಗಾಧರ್‌ ಅವರನ್ನು ಸಿಬಿಐ ಬಂಧಿಸಿದ ಬಳಿಕ ದೆಹಲಿಯಿಂದ ಲಾತೂರ್‌ಗೆ ಕರೆತರಲಾಗುವುದು ಎಂದು ತಿಳಿಸಿದ್ದಾರೆ. ಆದರೆ, ಅವರನ್ನು ಹೊರತುಪಡಿಸಿ ಇಬ್ಬರು ಸಿಬಿಐ ಅಧಿಕಾರಿಗಳ ತಂಡ ಈಗಾಗಲೇ ಲಾತೂರ್ ಪ್ರವೇಶಿಸಿದೆ.

ದೇಶದಲ್ಲಿ ನಡೆದ ‘ನೀಟ್’ ಹಗರಣಕ್ಕೆ ಸಂಬಂಧಿಸಿದಂತೆ ಲಾತೂರ್ ನಂಟು ಬಹಿರಂಗವಾದ ನಂತರ ನಾಂದೇಡ್ ಭಯೋತ್ಪಾದನಾ ನಿಗ್ರಹ ದಳ ದೆಹಲಿಯ ಗಂಗಾಧರ್ ವಿರುದ್ಧ ಮೂವರು ಶಿಕ್ಷಕರೊಂದಿಗೆ ಪ್ರಕರಣ ದಾಖಲಿಸಿತ್ತು. ನಂತರ ಎಟಿಎಸ್ ತನಿಖೆಯನ್ನು ಲಾತೂರ್ ಪೊಲೀಸರಿಗೆ ಹಸ್ತಾಂತರಿಸಿತ್ತು. ಸದ್ಯ ಬಂಧಿತರಾಗಿರುವ ಜಲೀಲ್ ಪಠಾಣ್ ಮತ್ತು ಸಂಜಯ್ ಜಾಧವ್ ಜುಲೈ 2ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪ್ರಕರಣದ ತನಿಖೆಗಾಗಿ ಸಿಬಿಐ ತಂಡ ಶನಿವಾರ ತಡರಾತ್ರಿ ಲಾತೂರ್‌ಗೆ ಧಾವಿಸಿದೆ.

ಆರೋಪಿಗಳ ಕಾರ್ಯವೈಖರಿ ಸಿಬಿಐಗೆ ತಿಳಿದಿದೆ : ಅತ್ಯಂತ ಗೌಪ್ಯವಾಗಿ ನಡೆಯುತ್ತಿರುವ ಈ ಪ್ರಕರಣದ ತನಿಖೆಯನ್ನು ಇದೀಗ ಲಾತೂರ್ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಿದೆ. ಪ್ರಕರಣವನ್ನು ಸಿಬಿಐಗೆ ವಹಿಸಿದ ಕೂಡಲೇ ದೆಹಲಿಯಿಂದ ಇಬ್ಬರು ಹಿರಿಯ ಅಧಿಕಾರಿಗಳು ಶನಿವಾರ ಮಧ್ಯರಾತ್ರಿ ಲಾತೂರ್‌ಗೆ ಬಂದಿದ್ದಾರೆ.

ಭಾನುವಾರ ಅವರು ಲಾತೂರ್ ಪೊಲೀಸ್ ವರಿಷ್ಠಾಧಿಕಾರಿ ಸೋಮಯ್ ಮುಂಡೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಆರೋಪಿಗಳ ಕಾರ್ಯವೈಖರಿ ಹಾಗೂ ತನಿಖೆ ವೇಳೆ ಬೆಳಕಿಗೆ ಬಂದ ಹೊಸ ವಿಷಯಗಳ ಬಗ್ಗೆ ತನಿಖಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದರು. ಈ ತಂಡ ಅತ್ಯಂತ ರಹಸ್ಯವಾಗಿ ನಗರ ಪ್ರವೇಶಿಸಿ ತನ್ನ ಕಾರ್ಯ ಆರಂಭಿಸಿದೆ. ಇದೀಗ ನ್ಯಾಯಾಲಯದಿಂದ ಆರೋಪಿಗಳ ಬಂಧನದ ನಂತರ ಪ್ರಕರಣವನ್ನು ಸಿಬಿಐ ಪ್ರತ್ಯೇಕವಾಗಿ ತನಿಖೆ ನಡೆಸಲಿದೆ.

ಲಾತೂರಿನ ಇಬ್ಬರು ಆರೋಪಿಗಳಾದ ಸಂಜಯ್ ಜಾಧವ್ ಮತ್ತು ಜಲೀಲ್ ಪಠಾಣ್ ಆರೋಪಿ ಈರಣ್ಣ ಕೊಂಗುಲ್ವಾರ್​ಗೆ ಹಣ ಒದಗಿಸುತ್ತಿದ್ದರು. ಆ ಬಳಿಕ ಈರಣ್ಣ ದೆಹಲಿಯಲ್ಲಿರುವ ಗಂಗಾಧರನಿಗೆ ಹಣ ಕಳುಹಿಸುತ್ತಿದ್ದ. ಹಾಗಾದರೆ ಗುಜರಾತ್, ಉತ್ತರಾಖಂಡ, ಕರ್ನಾಟಕ, ರಾಜಸ್ಥಾನದಲ್ಲಿ ಗಂಗಾಧರ್ ಜೊತೆ ಸಂಪರ್ಕದಲ್ಲಿದ್ದವರು ಯಾರು? ಎಂಬ ತನಿಖೆ ನಡೆಯಲಿದೆ. ತನಿಖೆ ಬಳಿಕ ಈ ಮಾಹಿತಿ ಬಹಿರಂಗವಾಗಲಿದೆ.

ಇದನ್ನೂ ಓದಿ : NEET ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಆರೋಪಿ ಜಲೀಲ್ ಪಠಾಣ್​ ಬಳಿ ಇದೆ ದುಬಾರಿ ಬಂಗಲೆ; ನಕಲಿ ಅಂಗವಿಕಲ ಪತ್ರವೂ ಬಯಲು!! - NEET Paper Leak Case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.