ETV Bharat / bharat

ಖಜಾನೆ ಖಾಲಿ ಮಾಡಿಕೊಳ್ಳುವ ರಾಜ್ಯಗಳಿಗೆ ಸಹಾಯ ಮಾಡಲಾಗದು: ಗೃಹ ಸಚಿವ ಅಮಿತ್ ಶಾ

ಜಾರಿಗೊಳಿಸಲಾಗದ ಚುನಾವಣಾ ಭರವಸೆಗಳನ್ನು ನೀಡಿ ಖಜಾನೆ ಖಾಲಿ ಮಾಡಿಕೊಳ್ಳುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಹಾಯ ಮಾಡಲಾಗದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

Centre can't help if state govts empty their coffers through tall poll promises

author img

By PTI

Published : Feb 11, 2024, 1:01 PM IST

ನವದೆಹಲಿ: ಅವಾಸ್ತವಿಕ ಚುನಾವಣಾ ಭರವಸೆಗಳನ್ನು ನೀಡಿ ತಮ್ಮ ಖಜಾನೆಗಳನ್ನು ಖಾಲಿ ಮಾಡಿಕೊಳ್ಳುವ ರಾಜ್ಯಗಳಿಗೆ ಕೇಂದ್ರ ಸರಕಾರ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ. ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಕಲ್ಯಾಣದ ಬದ್ಧತೆಗಳನ್ನು ಗಣನೆಗೆ ತೆಗೆದುಕೊಂಡು ಎಲ್ಲ ರಾಜ್ಯಗಳು ತಮ್ಮ ಬಜೆಟ್ ಅನ್ನು ಸಿದ್ಧಪಡಿಸಬೇಕು ಎಂದು ಅವರು ಹೇಳಿದರು. ನಿಧಿ ಬಿಡುಗಡೆಯಲ್ಲಿ ಕೇಂದ್ರ ಸರ್ಕಾರ ಕೆಲ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ ಎಂಬ ಆರೋಪಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಲೋಕಸಭೆಯಲ್ಲಿ ಮಂಡಿಸಲಾದ ಶ್ವೇತಪತ್ರದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಗಳಿಗೆ ನೀಡಿದ ಹಣದ ಬಗ್ಗೆ ಸಂಪೂರ್ಣ ವಿವರ ನೀಡಿದ್ದಾರೆ ಎಂದು ಶಾ ಹೇಳಿದರು. ಇಟಿ ನೌ ಗ್ಲೋಬಲ್ ಬಿಸಿನೆಸ್ ಶೃಂಗಸಭೆ 2024 ರಲ್ಲಿ ಮಾತನಾಡಿದ ಅವರು, "ನಾವು ರಾಜ್ಯಗಳಿಗೆ ಎಷ್ಟು ಹಣ ನೀಡಿದ್ದೇವೆ ಎಂಬ ಬಗ್ಗೆ ಹಾಗೂ ಕಾಂಗ್ರೆಸ್ ಆಡಳಿವಿದ್ದಾಗ ಪ್ರತಿ ರಾಜ್ಯಕ್ಕೆ ನೀಡುತ್ತಿದ್ದುದಕ್ಕಿಂತ ಎಷ್ಟು ಹೆಚ್ಚಿನ ಹಣ ನೀಡಲಾಗಿದೆ ಎಂಬ ವಿವರಗಳನ್ನು ಶ್ವೇತಪತ್ರದಲ್ಲಿ ತಿಳಿಸಲಾಗಿದೆ" ಎಂದು ಹೇಳಿದರು.

ಕೇಂದ್ರ ಸರ್ಕಾರ ರಾಜ್ಯಗಳಿಗೆ ತಮ್ಮ ಪಾಲಿನ ಹಣವನ್ನು ನೀಡಿಲ್ಲ ಎಂದು ಆರೋಪಿಸಿ ಪಶ್ಚಿಮ ಬಂಗಾಳ, ಕೇರಳ ಮತ್ತು ಕರ್ನಾಟಕದಲ್ಲಿನ ಆಡಳಿತಾರೂಢ ಪಕ್ಷಗಳು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದವು.

"15ನೇ ಹಣಕಾಸು ಆಯೋಗದ ಮೂಲಕ ರಾಜ್ಯಗಳಿಗೆ ಹೆಚ್ಚಿನ ಹಣಕಾಸು ನೀಡಲು ಪ್ರಧಾನಿ ನರೇಂದ್ರ ಮೋದಿ ಕ್ರಮ ಕೈಗೊಂಡಿದ್ದಾರೆ ಮತ್ತು ಅದರ ಬಗ್ಗೆ ಜನರಿಗೆ ತಿಳಿದಿದೆ. ಆದರೆ ಖಜಾನೆಯನ್ನು ಖಾಲಿ ಮಾಡುವಂಥ ಚುನಾವಣಾ ಭರವಸೆಗಳನ್ನು ನೀವು ನೀಡಿರುವಿರಿ. ಇದರ ಪರಿಣಾಮವಾಗಿ, ಸಂಬಳ ಪಾವತಿಸಲು ಸಹ ನಿಮ್ಮ ಬಳಿ ಹಣವಿಲ್ಲ. ಈ ಪರಿಸ್ಥಿತಿಯಲ್ಲಿ ಭಾರತ ಸರ್ಕಾರ ನಿಮಗೆ ಸಹಾಯ ನೀಡಲು ಸಾಧ್ಯವಿಲ್ಲ" ಎಂದು ಅವರು ತಿಳಿಸಿದರು.

'ಒಂದು ರಾಷ್ಟ್ರ, ಒಂದು ಚುನಾವಣೆ' ವಿಷಯದ ಬಗ್ಗೆ ಮಾತನಾಡಿದ ಶಾ, ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಸಮಿತಿಯು ಮಾರ್ಚ್ ವೇಳೆಗೆ ತನ್ನ ವರದಿಯನ್ನು ಸಲ್ಲಿಸುವ ಸಾಧ್ಯತೆಯಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಚುನಾವಣೆ ಮುಗಿದ ನಂತರ ಈ ವಿಷಯವನ್ನು ಜನರ ಮುಂದೆ ಚರ್ಚೆಗೆ ತರಬಹುದು ಎಂದು ಅವರು ಹೇಳಿದರು.

ಇದನ್ನೂ ಓದಿ: ಯುಪಿಎ ಸರ್ಕಾರದ ವೇಳೆ ರಾಷ್ಟ್ರೀಯ ಭದ್ರತೆಯಲ್ಲಿ ರಾಜಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.