ETV Bharat / bharat

ಲೋಕಸಭೆ ಚುನಾವಣೆಗೆ ಕಣಕ್ಕಿಳಿದ ಅಭ್ಯರ್ಥಿ ಬಳಿ ಠೇವಣಿ ಇಡಲು ಹಣವಿಲ್ಲ; ಕಂತುಗಳಲ್ಲಿ ಕಟ್ಟುವೆನೆಂದು ಮನವಿ! - Election Security Deposit - ELECTION SECURITY DEPOSIT

ಅಸ್ಸಾಂನ ಸೋನಿತ್​​ಪುರ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದಿದ್ದ ಅಭ್ಯರ್ಥಿ ಠೇವಣಿ ಹಣ ಇಲ್ಲದೇ, ಕಂತುಗಳಲ್ಲಿ ಕಟ್ಟುವುದಾಗಿ ವಿಚಿತ್ರ ಬೇಡಿಕೆ ಇಟ್ಟಿದ್ದಾರೆ. ಇದನ್ನು ಚುನಾವಣಾಧಿಕಾರಿಗಳು ನಿಯಮಾನುಸಾರ ನಿರಾಕರಿಸಿದರು.

ಠೇವಣಿ ಹಣವಿಲ್ಲದೇ ನಾಮಪತ್ರ ಸಲ್ಲಿಸಲು ಬಂದ ಅಭ್ಯರ್ಥಿ

author img

By ETV Bharat Karnataka Team

Published : Mar 28, 2024, 10:52 AM IST

ತೇಜ್‌ಪುರ(ಅಸ್ಸಾಂ): ಯಾವುದಾದರೂ ವಸ್ತು ಖರೀದಿಸಿದಾಗ ಅಥವಾ ಸಾಲ ಪಡೆದುಕೊಂಡಾಗ ಅದನ್ನು ಕಂತುಗಳಲ್ಲಿ ಕಟ್ಟುವುದು ವಾಡಿಕೆ. ಆದರೆ, ಇಲ್ಲೊಬ್ಬ 'ಆಸಾಮಿ' ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಡಬೇಕಿದ್ದ ಭದ್ರತಾ ಠೇವಣಿಯನ್ನು ಕಂತುಗಳಲ್ಲಿ ಪಾವತಿಸಲು ಕೋರಿದ ಘಟನೆ ನಡೆದಿದೆ.

ತೇಜ್​ಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ವಿದ್ಯಮಾನ ಕಂಡುಬಂದಿದೆ. ಅಸ್ಸಾಂನಲ್ಲಿ ಲೋಕಸಭೆ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಮಾರ್ಚ್​ 27 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿತ್ತು. ವೋಟರ್ಸ್ ಪಾರ್ಟಿ ಇಂಟರ್‌ನ್ಯಾಶನಲ್ (ವಿಪಿಐ) ಅಭ್ಯರ್ಥಿ ಮಹೇಂದ್ರ ಒರಾಂಗ್ ಎಂಬವರು ಕೊನೆಯ ಕ್ಷಣಗಳಲ್ಲಿ ನಾಮಪತ್ರ ಸಲ್ಲಿಕೆಗೆ ಸೋನಿತ್​ಪು ಡಿಸಿ ಕಚೇರಿಗೆ ತಮ್ಮ 10 ಮಂದಿ ಬೆಂಬಲಿಗರ ಜೊತೆಗೂಡಿ ಆಗಮಿಸಿದ್ದರು.

ಠೇವಣಿ ಹಣಕ್ಕಾಗಿ ಪರದಾಟ: ತಾವು ಸೋನಿತ್​ಪುರ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಒರಾಂಗ್​ ತಿಳಿಸಿದರು. ಈ ಕುರಿತು ದಾಖಲೆಯನ್ನು ನೀಡಿದ ಬಳಿಕ ಭದ್ರತಾ ಠೇವಣಿ ಇಡಲು ಚುನಾವಣಾಧಿಕಾರಿ ಸೂಚಿಸಿದ್ದಾರೆ. ಈ ವೇಳೆ ಒರಾಂಗ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಠೇವಣಿ ಮೊತ್ತವಾದ 25 ಸಾವಿರ ರೂಪಾಯಿ ಅವರ ಬಳಿ ಇರಲಿಲ್ಲ. ಇದರಿಂದ ಅನಿವಾರ್ಯವಾಗಿ ಒರಾಂಗ್​ ಅವರು ತಮ್ಮ ಸ್ನೇಹಿತರ ಬಳಿಕ ಹಣ ಎರವಲು ಕೇಳಿದ್ದಾರೆ.

ಗಂಟೆಗಳು ಕಳೆದರೂ, ಅವರ ಖಾತೆಗೆ ಹಣ ಬಾರದ ಕಾರಣ ಕೊನೆಯಲ್ಲಿ ಅಭ್ಯರ್ಥಿಯಾಗಲು ಬಯಸಿದ್ದ ಮಹೇಂದ್ರ ಒರಾಂಗ್​, ಭದ್ರತಾ ಠೇವಣಿಯನ್ನು ಕಂತುಗಳಲ್ಲಿ ಭರಿಸುವುದಾಗಿ ತಿಳಿಸಿದ್ದಾರೆ. ಇದರಿಂದ ಅಲ್ಲಿದ್ದ ಚುನಾವಣಾಧಿಕಾರಿ ಸೇರಿದಂತೆ ಇತರ ಅಧಿಕಾರಿಗಳು ಅಚ್ಚರಿಗೊಳಗಾದರು. ಅಷ್ಟೇ ಅಲ್ಲ, ಪಕ್ಷೇತರ ಅಭ್ಯರ್ಥಿಯ ಈ ವಿಚಿತ್ರ ಮನವಿ ಅಧಿಕಾರಿಗಳಲ್ಲಿ ನಗು ತರಿಸಿತು.

ಕಂತುಗಳಲ್ಲಿ ಕಟ್ಟಲು ಮನವಿ: ತಾನು ನಾಮಪತ್ರ ಸಲ್ಲಿಸಲು ದಿಢೀರ್​ ನಿರ್ಧಾರ ಮಾಡಿದ್ದರಿಂದ ಠೇವಣಿ ಹಣ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆಯ ದಿನವಾದ ಕಾರಣ, ಠೇವಣಿ ಹೊರತಾಗಿ ಉಮೇದುವಾರಿಕೆ ಸಲ್ಲಿಸುವೆ. ನಾಳೆ ನಾಮಪತ್ರ ಪರಿಶೀಲನೆಯ ದಿನದಂದು ಹಣವನ್ನು ಠೇವಣಿ ಇಡಲು ಕಾಲಾವಕಾಶ ನೀಡಬೇಕು ಎಂದು ಚುನಾವಣಾಧಿಕಾರಿ ಬಳಿ ಕೋರಿಕೆ ಸಲ್ಲಿಸಿದ್ದಾರೆ. ಆದರೆ, ಚುನಾವಣಾಧಿಕಾರಿ, ಮಹೇಂದ್ರ ಒರಾಂಗ್ ಅವರ ಮನವಿಯನ್ನು ತಿರಸ್ಕರಿಸಿದ್ದಾರೆ. ಅಂತಹ ಯಾವುದೇ ನಿಯಮಗಳಿಲ್ಲ ಎಂದು ಅಧಿಕಾರಿ ಅಭ್ಯರ್ಥಿಗೆ ತಿಳಿ ಹೇಳಿದ್ದಾರೆ.

ಇದರಿಂದ ಮಹೇಂದ್ರ ಒರಾಂಗ್ ಅಂತಿಮವಾಗಿ ನಾಮಪತ್ರ ಸಲ್ಲಿಸಲು ವಿಫಲರಾಗಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದ ಒರಾಂಗ್​ ಅವರು ಭದ್ರತಾ ಠೇವಣಿ ಇಡಲಾಗದೇ ಎಲೆಕ್ಷನ್​ನಿಂದಲೇ ಹೊರಗುಳಿಯುವಂತಾಗಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಏ.19ರಿಂದ 7 ಹಂತದಲ್ಲಿ ಮತದಾನ; ಜೂ.4ಕ್ಕೆ ಮತಎಣಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.