ಪಶ್ಚಿಮ ಬಂಗಾಳ: "2024ರ ಲೋಕಸಭೆ ಚುನಾವಣೆಗೂ ಮುನ್ನವೇ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ಬರಲಿದೆ" ಎಂದು ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್ ತಿಳಿಸಿದ್ದಾರೆ. "ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಗಾಗಲೇ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವುದಾಗಿ ದೇಶದ ಜನರಿಗೆ ಮಾತು ಕೊಟ್ಟಿದ್ದಾರೆ. ಆ ಮಾತಿನಂತೆ ನಡೆದುಕೊಳ್ಳುವ ವಿಶ್ವಾಸವಿದೆ" ಎಂದರು.
"ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಧಿಕಾರ ವ್ಯಾಪ್ತಿಗೆ ಸಿಎಎ ಒಳಪಡುವುದಿಲ್ಲ. ಕೇಂದ್ರ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಒಳಪಡುತ್ತದೆ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ 31 ಡಿಸೆಂಬರ್ 2014ರ ಅಂತ್ಯದವರೆಗೆ ಭಾರತಕ್ಕೆ ವಲಸೆ ಬಂದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ರಾಷ್ಟ್ರೀಯತೆಯನ್ನು ಈ ಕಾಯ್ದೆಯಡಿ ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಿರ್ಮಾನಿಸಿದೆ" ಎಂದು ಹೇಳಿದರು.
-
#WATCH | North 24 Parganas: On CAA implementation, West Bengal BJP President Sukanta Majumdar says, "The CAA will begin before the 2024 elections. We have complete faith in our Union Home Minister... If Amit Shah has said he will implement the CAA, then he will definitely do… pic.twitter.com/0OBYlIXn1G
— ANI (@ANI) January 29, 2024 " class="align-text-top noRightClick twitterSection" data="
">#WATCH | North 24 Parganas: On CAA implementation, West Bengal BJP President Sukanta Majumdar says, "The CAA will begin before the 2024 elections. We have complete faith in our Union Home Minister... If Amit Shah has said he will implement the CAA, then he will definitely do… pic.twitter.com/0OBYlIXn1G
— ANI (@ANI) January 29, 2024#WATCH | North 24 Parganas: On CAA implementation, West Bengal BJP President Sukanta Majumdar says, "The CAA will begin before the 2024 elections. We have complete faith in our Union Home Minister... If Amit Shah has said he will implement the CAA, then he will definitely do… pic.twitter.com/0OBYlIXn1G
— ANI (@ANI) January 29, 2024
ಭಾನುವಾರ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದಲ್ಲಿ ಸಾರ್ವಜನಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ್ದ ಕೇಂದ್ರ ಸಚಿವ ಶಾಂತನು ಠಾಕೂರ್, "ಮುಂದಿನ ಏಳು ದಿನಗಳಲ್ಲಿ ದೇಶಾದ್ಯಂತ ಪೌರತ್ವ (ತಿದ್ದುಪಡಿ) ಕಾಯ್ದೆ/ಸಿಎಎ ಜಾರಿಗೆ ಬರಲಿದೆ. ಇದು ಕೇಂದ್ರ ಸರ್ಕಾರದ ಗ್ಯಾರಂಟಿ. ಕೇವಲ ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲ, ಭಾರತದ ಪ್ರತಿಯೊಂದು ರಾಜ್ಯದಲ್ಲೂ ಸಿಎಎ ಒಂದು ವಾರದೊಳಗೆ ಜಾರಿಗೆ ಬರಲಿದೆ" ಎಂದು ಹೇಳುವ ಮೂಲಕ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಸಚಿವರ ಈ ಹೇಳಿಕೆಯ ಬೆನ್ನಲ್ಲೆ ಮಮತಾ ಬ್ಯಾನರ್ಜಿ ಪ್ರತಿದಾಳಿ ನಡೆಸಿದ್ದು, "ಕೇಂದ್ರ ಸರ್ಕಾರ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಸಲುವಾಗಿ ಮತ್ತೆ ಮತ್ತೆ ಸಿಎಎ, ಸಿಎಎ ಎಂದು ಚೀರುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಎನ್ಆರ್ಸಿ ಬೇಡ ಎಂದು ಬಂಗಾಳದಲ್ಲಿ ಆಂದೋಲನ ಪ್ರಾರಂಭಿಸಿದವರು ಯಾರು? ರಾಜ್‌ಬನ್ಶಿ ಸಮುದಾಯದವರು ಭಾರತೀಯ ನಾಗರಿಕರು. ಈ ರೀತಿಯ ಮಾತುಗಳನ್ನು ಹೇಳುವವರು ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ನೀವೆಲ್ಲರೂ ಈ ದೇಶದ ಪ್ರಜೆಗಳು. ನೀವು ಪಡಿತರ, ವಿದ್ಯಾರ್ಥಿ ವೇತನ, ಕಿಸಾನ್ ಬಂಧು, ಶಿಕ್ಷಾ ಶ್ರೀ ಸೇರಿದಂತೆ ಪಶ್ಚಿಮ ಬಂಗಾಳ ಸರ್ಕಾರದ ಹಲವು ಯೋಜನೆಗಳ ಲಾಭ ಪಡೆಯುತ್ತಿದ್ದೀರಿ. ನೀವು ಈ ದೇಶದ ಪ್ರಜೆಗಳಲ್ಲವಾದರೆ ಈ ಎಲ್ಲ ಸೌಲಭ್ಯಗಳನ್ನೂ ಹೇಗೆ ಪಡೆಯಲು ಸಾಧ್ಯವಿತ್ತು" ಎಂದು ಅವರು ಪ್ರಶ್ನಿಸಿದ್ದಾರೆ.
ಸಿಎಎ ಎಂದರೇನು?: 2014ರ ಡಿ.31ಕ್ಕೆ ಮುನ್ನ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ದೇಶಗಳಿಂದ ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡಲು ಕೇಂದ್ರ ಸರ್ಕಾರ ಸಿಎಎ ತಂದಿದೆ. ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಹಾಗೂ ಕ್ರೈಸ್ತರಿಗೆ ಈ ಕಾಯ್ದೆಯಡಿ ಪೌರತ್ವ ಸಿಗಲಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಸಿಎಎ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ: ಮಮತಾ