ETV Bharat / bharat

ಸಹೋದರಿ ಮೇಲೆ ಅತ್ಯಾಚಾರವೆಸಗಿದ ಕೀಚಕ; ವಿಷ್ಯ ಬಹಿರಂಗಾಗುವ ಭಯದಲ್ಲಿ ಕತ್ತುಹಿಸುಕಿ ಕೊಂದ ಪಾಪಿ - brother raped minor sister

ಕಾಸ್‌ಗಂಜ್‌ನಲ್ಲಿ ಸಹೋದರನೊಬ್ಬ ಅಪ್ರಾಪ್ತ ಸಹೋದರಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ಇದು ಬಹಿರಂಗವಾಗುತ್ತದೆ ಎಂಬ ಭಯದಿಂದ ತಂಗಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕಾಸ್ಗಂಜ್
ಕಾಸ್ಗಂಜ್
author img

By ETV Bharat Karnataka Team

Published : Feb 7, 2024, 7:21 PM IST

ಕಾಸ್ಗಂಜ್ (ಉತ್ತರ ಪ್ರದೇಶ) : ಜಿಲ್ಲೆಯಲ್ಲಿ ಸಂಬಂಧಗಳಿಗೆ ಮುಜುಗರವನ್ನುಂಟು ಮಾಡುವಂತ ಪ್ರಕರಣವೊಂದು ಬೆಳಕಿಗೆ ಬಂದಿದೆ. ಒಡಹುಟ್ಟಿದ ಅಣ್ಣನೇ ಅಪ್ರಾಪ್ತ ವಯಸ್ಸಿನ ಸಹೋದರಿಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ, ರಹಸ್ಯವನ್ನು ಆಕೆ ಬಹಿರಂಗಪಡಿಸುತ್ತಾಳೆ ಎಂಬ ಭಯದಿಂದ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಇದೇ ಫೆಬ್ರವರಿ 3 ರಂದು, 19 ವರ್ಷದ ಸಹೋದರ ತನ್ನ 17 ವರ್ಷದ ಸಹೋದರಿ ಮನೆಯಲ್ಲಿ ಮಲಗಿದ್ದಾಗ ಅತ್ಯಾಚಾರವೆಸಗಿದ್ದಾನೆ. ಈ ವಿಚಾರ ಗೊತ್ತಾದರೆ ಸಿಕ್ಕಿಬೀಳುತ್ತೇನೆ ಎಂದು ಹೆದರಿ ತಂಗಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಂಧನದ ಬಳಿಕ ಪೊಲೀಸರ ವಿಚಾರಣೆ ವೇಳೆ ಆರೋಪಿ ಈ ವಿಷಯವನ್ನು ಬಾಯ್ಬಿಟ್ಟಿದ್ದಾನೆ.

ಈ ಘಟನೆಗೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಗೋವಿಂದ್ ಬಲ್ಲಭ್ ಶರ್ಮಾ ಅವರು ಪ್ರತಿಕ್ರಿಯಿಸಿದ್ದು, ''ಹುಡುಗಿಯ ಚಿಕ್ಕಪ್ಪ ಈತನ ವಿರುದ್ಧ ಫೆಬ್ರವರಿ 4 ರಂದು ದೂರು ದಾಖಲಿಸಿದ್ದಾರೆ. ಅಂದಿನಿಂದ ಪೊಲೀಸರು ಆರೋಪಿಯ ಹುಡುಕಾಟದಲ್ಲಿ ನಿರತರಾಗಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನನ್ನು ವಿಚಾರಣೆಗೆ ಒಳಪಡಿಸಿದಾಗ, ತನ್ನ ತಂದೆ ಒಂದು ವರ್ಷದ ಹಿಂದೆ ಸಾವನ್ನಪ್ಪಿದ್ದಾಗಿ ತಿಳಿಸಿದ್ದಾನೆ. ಗ್ರಾಮದ ಇನ್ನೊಂದು ಮನೆಯಲ್ಲಿ ತಾಯಿ, ತಂಗಿಯೊಂದಿಗೆ ವಾಸವಾಗಿದ್ದಾನೆ. ಫೆಬ್ರವರಿ 3 ರಂದು ತಾಯಿ ತನ್ನ ಚಿಕ್ಕಪ್ಪನ ಮನೆಗೆ ಹೋಗಿದ್ದಳು ಎಂದು ಆರೋಪಿ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾನೆ. ಅವನು ಮತ್ತು ಅವನ ಸಹೋದರಿ ಅಷ್ಟೇ ಮನೆಯಲ್ಲಿದ್ದರು. ಆಗ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ನೋಡಿ ತಂಗಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ತಂಗಿ ಯಾರಿಗಾದರೂ ಹೇಳಬಹುದೆಂಬ ಭಯದಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆರೋಪಿಯಿಂದ ಪೊಲೀಸರು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಮೊಬೈಲ್‌ನಿಂದ ಅಶ್ಲೀಲ ವಿಡಿಯೋಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ'' ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪಂಜಾಬ್: ಯುವತಿಯ ಕತ್ತು ಹಿಸುಕಿ ಕೊಂದು ಅತ್ಯಾಚಾರ ಎಸಗಿದ ದುರುಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.