ETV Bharat / bharat

ರಾಜ್ಯಸಭೆಯಲ್ಲಿ ಬಿಜೆಪಿ ಸ್ಥಾನ ಇಳಿಕೆ: ಮೇಲ್ಮನೆಯ 11 ಸ್ಥಾನಗಳಿಗೆ ಶೀಘ್ರ ಚುನಾವಣೆ - RAJYA SABHA SEATS - RAJYA SABHA SEATS

ರಾಜ್ಯಸಭೆಯ 11 ಸ್ಥಾನಗಳು ತೆರವಾಗಿದ್ದು, ಅದರಲ್ಲಿ ಬಿಜೆಪಿ ಹಲವು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಹೊಂದಿದೆ. ಸದ್ಯ ಬಿಜೆಪಿ ಮೇಲ್ಮನೆಯಲ್ಲಿ 86 ಸ್ಥಾನಗಳನ್ನು ಹೊಂದಿದೆ.

ರಾಜ್ಯಸಭೆಯಲ್ಲಿ ಬಿಜೆಪಿ ಸ್ಥಾನ ಇಳಿಕೆ
ರಾಜ್ಯಸಭೆಯಲ್ಲಿ ಬಿಜೆಪಿ ಸ್ಥಾನ ಇಳಿಕೆ (ETV Bharat)
author img

By PTI

Published : Jul 15, 2024, 6:51 PM IST

ನವದೆಹಲಿ: ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಬಿಜೆಪಿಯ ಸಂಖ್ಯೆ 86ಕ್ಕೆ ಇಳಿಕೆ ಕಂಡಿದೆ. ಲೋಕಸಭೆ ಚುನಾವಣೆಯಲ್ಲಿ ಹಲವರು ಆಯ್ಕೆಯಾದ ಬಳಿಕ ಮೇಲ್ಮನೆಗೆ ರಾಜೀನಾಮೆ ನೀಡಿದ್ದಾರೆ. ಇದರಿಂದ ರಾಜ್ಯಸಭೆಯಲ್ಲಿ ಪಕ್ಷದ ಬಲ 90 ಸ್ಥಾನಕ್ಕಿಂತ ಕಡಿಮೆಯಾಗಿದೆ.

ರಾಜ್ಯಸಭೆಯ ಪ್ರಸ್ತುತ ಸಂಖ್ಯಾಬಲ 226 ಆಗಿದ್ದು, ಅದರಲ್ಲಿ ಬಿಜೆಪಿ 86, ಕಾಂಗ್ರೆಸ್‌ 26 ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) 13 ಸ್ಥಾನಗಳನ್ನು ಹೊಂದಿವೆ. ಸದ್ಯ 19 ಸ್ಥಾನಗಳು ಖಾಲಿ ಇವೆ. ಇದರಲ್ಲಿ 4 ಜನರನ್ನು ರಾಷ್ಟ್ರಪತಿಗಳು ನೇರವಾಗಿ ಆಯ್ಕೆ ಮಾಡುತ್ತಾರೆ. ಇನ್ನು 4 ಸ್ಥಾನಗಳು ಜಮ್ಮು- ಕಾಶ್ಮೀರಕ್ಕೆ ಸೇರಿದ್ದಾಗಿವೆ. ಕಾಶ್ಮೀರ ಸದ್ಯ ರಾಜ್ಯ ಸ್ಥಾನಮಾನ ಹೊಂದಿಲ್ಲದ ಕಾರಣ, ಚುನಾವಣೆ ನಡೆಯುತ್ತಿಲ್ಲ. ಹೀಗಾಗಿ 11 ಸ್ಥಾನಗಳಿಗೆ ಮಾತ್ರ ಚುನಾವಣಾ ಆಯೋಗ ಶೀಘ್ರವೇ ಚುನಾವಣೆ ನಡೆಸಬೇಕಿದೆ.

ಬಿಜೆಪಿಗೆ ಸೀಟು ಹೆಚ್ಚುವ ಭರವಸೆ: ರಾಜ್ಯಸಭೆಯಲ್ಲಿ ಬಿಜೆಪಿಯ ಸ್ಥಾನಗಳು ಸದ್ಯ ಇಳಿದರೂ, ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ಗೆಲುವು ಸಾಧಿಸುವ ಭರವಸೆ ಇದೆ. ಹಲವು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾರಣ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಬಗ್ಗೆ ಪಕ್ಷ ಯೋಜನೆ ರೂಪಿಸಿದೆ.

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಬಿಹಾರ, ಮಹಾರಾಷ್ಟ್ರ ಮತ್ತು ಅಸ್ಸಾಂನಲ್ಲಿ ತಲಾ ಎರಡು ಮತ್ತು ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತ್ರಿಪುರದಲ್ಲಿ ತಲಾ ಒಂದು ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ. ನಾಲ್ಕು ನಾಮನಿರ್ದೇಶಿತ ಸದಸ್ಯರನ್ನು ಹೊಸದಾಗಿ ನೇಮಿಸಬೇಕಿದೆ. ಸಹಜವಾಗಿ ನಾಮನಿರ್ದೇಶಿತ ಸದಸ್ಯರು ಸದನದಲ್ಲಿ ಸ್ವತಂತ್ರರಾಗಿದ್ದರೂ, ಸಾಂಪ್ರದಾಯಿಕವಾಗಿ ತಮ್ಮನ್ನು ಆಯ್ಕೆ ಮಾಡುವ ಸರ್ಕಾರವನ್ನು ಬೆಂಬಲಿಸುತ್ತಾರೆ. ಹೀಗಾಗಿ ಸರ್ಕಾರಕ್ಕೆ ಮೇಲ್ಮನೆಯಲ್ಲಿ ಸಹಜವಾಗಿ ಬಹುಮತವಿರಲಿದೆ.

ಕಾಂಗ್ರೆಸ್​ಗೆ ಪ್ಲಸ್​-ಮೈನಸ್​: ಕಾಂಗ್ರೆಸ್ ಪಕ್ಷವು ರಾಜಸ್ಥಾನದಲ್ಲಿ ಸ್ಥಾನ ಕಳೆದುಕೊಂಡರೆ, ತೆಲಂಗಾಣದಲ್ಲಿ ಪಡೆದುಕೊಳ್ಳಲಿದೆ. ರಾಜಸ್ಥಾನದಿಂದ ರಾಜ್ಯಸಭೆಗೆ ಪ್ರತಿನಿಧಿಸುತ್ತಿದ್ದ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್​ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಅವರು ಮೇಲ್ಮನೆಗೆ ರಾಜೀನಾಮೆ ನೀಡಿದ್ದಾರೆ. ರಾಜ್ಯದಲ್ಲಿ ಬಹುಮತ ಹೊಂದಿರುವ ಪಕ್ಷವು ಸ್ಥಾನವನ್ನು ತನ್ನದಾಗಿಸಿಕೊಳ್ಳಲಿದೆ.

ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಒಂದು ಸ್ಥಾನವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಇತ್ತ ಹರಿಯಾಣದಲ್ಲಿ ಕಾಂಗ್ರೆಸ್​ ರಾಜ್ಯಸಭಾ ಸಂಸದ ದೀಪೇಂದರ್ ಸಿಂಗ್ ಹೂಡಾ ಲೋಕಸಭೆಗೆ ಆಯ್ಕೆಯಾಗಿದ್ದು, ತೆರವಾದ ಸ್ಥಾನವನ್ನು ಬಿಜೆಪಿ ಗೆಲ್ಲುವ ವಿಶ್ವಾಸದಲ್ಲಿದೆ.

11 ಸ್ಥಾನ ತೆರವು: ಈಚೆಗೆ ಮುಗಿದ ಲೋಕಸಭೆ ಚುನಾವಣೆಯಲ್ಲಿ 10 ರಾಜ್ಯಸಭೆ ಸದಸ್ಯರು ಸ್ಪರ್ಧಿಸಿ ಗೆಲುವು ಸಾಧಿಸಿದ್ದರೆ, ಬಿಆರ್​​ಎಸ್​​ನ ಕೇಶವ್​​ರಾವ್​ ಅವರು ಕಾಂಗ್ರೆಸ್​ ಸೇರಿದ್ದಾರೆ. ಇದರಿಂದ ಒಟ್ಟು 11 ಸ್ಥಾನಗಳು ತೆರವಾಗಿವೆ. ಚುನಾವಣಾ ಆಯೋಗವು ಈ ಸ್ಥಾನಗಳಿಗೆ ಶೀಘ್ರದಲ್ಲೇ ಚುನಾವಣಾ ದಿನಾಂಕ ಘೋಷಿಸಲಿದೆ.

ಇದನ್ನೂ ಓದಿ: ನೂತನ ವಿದೇಶಾಂಗ ಕಾರ್ಯದರ್ಶಿ ಚೀನಾ ಸ್ಪೆಷಲಿಸ್ಟ್ 'ವಿಕ್ರಮ್​ ಮಿಸ್ರಿ' ಬಗ್ಗೆ ನಿಮಗೆಷ್ಟು ಗೊತ್ತು? - Vikram Misri is China Specialist

ETV Bharat Logo

Copyright © 2024 Ushodaya Enterprises Pvt. Ltd., All Rights Reserved.