ETV Bharat / bharat

ಲೋಕಸಭೆ ಚುನಾವಣೆ: 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ; ವಾರಾಣಸಿಯಲ್ಲೇ ಮೋದಿ ಸ್ಪರ್ಧೆ

ಲೋಕಸಭೆ ಚುನಾವಣೆಗಾಗಿ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಲೋಕಸಭೆ ಚುನಾವಣೆ: 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ; ವಾರಾಣಸಿಯಲ್ಲೇ ಮೋದಿ ಸ್ಪರ್ಧೆ
ಲೋಕಸಭೆ ಚುನಾವಣೆ: 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ; ವಾರಾಣಸಿಯಲ್ಲೇ ಮೋದಿ ಸ್ಪರ್ಧೆ
author img

By ETV Bharat Karnataka Team

Published : Mar 2, 2024, 6:51 PM IST

Updated : Mar 3, 2024, 3:58 PM IST

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗಾಗಿ ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ರಾಷ್ಟ್ರ ರಾಜಧಾನಿಯ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ, 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದರು. ಬಳಿಕ ಮಾತನಾಡಿದ ಅವರು, ಫೆ.29 ರಂದು ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ 16 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಲೋಕಸಭೆ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿತ್ತು ಎಂದು ತಿಳಿಸಿದ್ದಾರೆ. ಅಲ್ಲದೇ ಈ ಬಾರಿಯೂ ಪ್ರಧಾನಿ ಮೋದಿ ವಾರಾಣಸಿಯಿಂದಲೇ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಮೊದಲ ಪಟ್ಟಿಯಲ್ಲಿ 34 ಕೇಂದ್ರ ಮತ್ತು ರಾಜ್ಯ ಸಚಿವರು: ಬಿಜೆಪಿ ಪ್ರಕಟಿಸಿದ ಮೊದಲ ಪಟ್ಟಿಯಲ್ಲಿ 34 ಕೇಂದ್ರ ಮತ್ತು ರಾಜ್ಯ ಸಚಿವರು, ಲೋಕಸಭೆ ಸ್ಪೀಕರ್ ಮತ್ತು ಇಬ್ಬರು ಮಾಜಿ ಸಿಎಂಗಳು ಸೇರಿ 28 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್​ ಘೋಷಣೆ ಮಾಡಲಾಗಿದೆ. 50 ವರ್ಷಕ್ಕಿಂತ ಕಡಿಮೆ ವಯಸ್ಸಿನ 47 ಅಭ್ಯರ್ಥಿಗಳು, 27 ಎಸ್‌ಸಿ ಅಭ್ಯರ್ಥಿಗಳು, 18 ಎಸ್‌ಟಿ ಅಭ್ಯರ್ಥಿಗಳು ಮತ್ತು 57 ಒಬಿಸಿ ಅಭ್ಯರ್ಥಿಗಳೂ ಈ ಪಟ್ಟಿಯಲ್ಲಿದ್ದಾರೆ.

ದೆಹಲಿಯ ನಾಲ್ವರು ಹಾಲಿ ಸಂಸದರಿಗೆ ಕೋಕ್​: ದೆಹಲಿ ನಾಲ್ವರು ಹಾಲಿ ಸಂಸದರಾದ ರಮೇಶ್ ಬಿಧುರಿ, ಮೀನಾಕ್ಷಿ ಲೇಖಿ, ಪರ್ವೇಶ್ ವರ್ಮಾ ಮತ್ತು ಹರ್ಷವರ್ಧನ್ ಅವರನ್ನು ಬಿಜೆಪಿ ಪಟ್ಟಿಯಿಂದ ಕೈಬಿಟ್ಟಿದೆ. ಉಳಿದಂತೆ ಈಶಾನ್ಯ ದೆಹಲಿಯಲ್ಲಿ ಮನೋಜ್ ತಿವಾರಿ, ನವದೆಹಲಿಯಲ್ಲಿ ಬಾನ್ಸುರಿ ಸ್ವರಾ, ಪಶ್ಚಿಮ ದೆಹಲಿಯಲ್ಲಿ ಕಮಲಜೀತ್ ಸೆಹ್ರಾವತ್, ದಕ್ಷಿಣ ದೆಹಲಿಯಲ್ಲಿ ರಾಮ್ವೀರ್ ಸಿಂಗ್ ಬಿಧುರಿ ಮತ್ತು ದೆಹಲಿ ಚಾಂದಿನಿ ಚೌಕ್‌ನಲ್ಲಿ ಪ್ರವೀಣ್ ಖಂಡೇಲ್ವಾಲ್ ಅವರನ್ನು ಕಣಕ್ಕಿಳಿಸುತ್ತದೆ. ಅಲೋಕ್ ಶರ್ಮಾ ಸ್ಪರ್ಧಿಸಲಿರುವ ಭೋಪಾಲ್‌ನಿಂದ ಸಾಧ್ವಿ ಸಿಂಗ್​ ಪ್ರಜ್ಞಾ ಠಾಕೂರ್ ಅವರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ.

ಹಾಲಿ ಸಚಿವರು ಸ್ಪರ್ಧೆ

  • ಶಿವರಾಜ್ ಸಿಂಗ್ ಚೌಹಾಣ್ - ವಿದಿಶಾ
  • ಸ್ಮೃತಿ ಇರಾನಿ - ಅಮೇಥಿ
  • ನಿತಿನ್ ಗಡ್ಕರಿ - ನಾಗ್ಪುರ
  • ಕಿರಣ್ ರಿಜಿಜು - ಅರುಣಾಚಲ ಪಶ್ಚಿಮ
  • ವಿ. ಮುರಳೀಧರನ್ - ಅಟ್ಟಿಂಗಲ್
  • ಮನ್ಸುಖ್ ಮಾಂಡವಿಯಾ - ಪೋರಬಂದರ್
  • ಜ್ಯೋತಿರಾದಿತ್ಯ ಸಿಂಧಿಯಾ - ಗುಣ
  • ಅರ್ಜುನ್ ರಾಮ್ ಮೇಘವಾಲ್ - ಬಿಕಾನೇರ್
  • ವಿಜಯ್ ಬಾಘೆಲ್ - ದುರ್ಗ್
  • ಸೊರ್ಬಾನಂದ ಸೋನೊವಾಲ್ - ದಿಬ್ರುಗಢ

ಯಾವ ರಾಜ್ಯದಿಂದ ಎಷ್ಟು ಸ್ಥಾನ

  • ರಾಜಸ್ಥಾನ 15
  • ಕೇರಳ 12
  • ತೆಲಂಗಾಣ 9
  • ಅಸ್ಸಾಂ 11
  • ಜಾರ್ಖಂಡ್​ 11
  • ಛತ್ತೀಸ್‌ಗಢ 11
  • ದೆಹಲಿ 5
  • ಜಮ್ಮು ಕಾಶ್ಮೀರ 2
  • ಆಂಧ್ರಪ್ರದೇಶ 2
  • ಗೋವಾ - ತ್ರಿಪುರಾ ತಲಾ 1
  • ಅಂಡಮಾನ್ ನಿಕೋಬಾರ್ 1
  • ದಮನ್ 1

ಇದನ್ನೂ ಓದಿ: ಒಂದು ವಾರದ ಬಿಡುವಿನ ನಂತರ ಭಾರತ್ ಜೋಡೋ ನ್ಯಾಯ್ ಯಾತ್ರೆ ಶುರು: ಮಧ್ಯಪ್ರದೇಶಕ್ಕೆ ಪ್ರವೇಶ

Last Updated : Mar 3, 2024, 3:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.