ETV Bharat / bharat

ಲೋಕಸಭೆ ಚುನಾವಣೆಯಲ್ಲಿ ಆಪ್​ - ಟಿಎಂಸಿ ಏಕಾಂಗಿ ಸ್ಪರ್ಧೆ ಇಂಡಿಯಾ ಕೂಟದ ಮರಣಶಾಸನ: ಬಿಜೆಪಿ - parliament polls

ಲೋಕಸಭೆ ಚುನಾವಣೆಯಲ್ಲಿ ಆಪ್​ ಮತ್ತು ಟಿಎಂಸಿ ಏಕಾಂಗಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿವೆ. ಈ ನಿರ್ಧಾರ ಮೈತ್ರಿಕೂಟದ ಮರಣಶಾಸನ ಎಂದು ಬಿಜೆಪಿ ಹೇಳಿದೆ.

ಇಂಡಿಯಾ ಕೂಟದ ಮರಣಶಾಸನ
ಇಂಡಿಯಾ ಕೂಟದ ಮರಣಶಾಸನ
author img

By ETV Bharat Karnataka Team

Published : Jan 24, 2024, 4:17 PM IST

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಇಂಡಿಯಾ ಕೂಟದ ಪ್ರಮುಖ ಪಕ್ಷಗಳಾದ ಆಮ್​ ಆದ್ಮಿ ಮತ್ತು ತೃಣಮೂಲ ಕಾಂಗ್ರೆಸ್​ ಪಕ್ಷಗಳು ಘೋಷಿಸಿದ್ದು, 'ಮೈತ್ರಿಕೂಟದ ಮರಣಶಾಸನ' ಎಂದು ಬಿಜೆಪಿ ಹೇಳಿದೆ.

  • Mamata Banerjee’s decision to fight alone in West Bengal is a sign of desperation. Unable to hold her political ground, she wants to fight all seats, in the hope that she can still be relevant, after the polls.

    Much against her desire, to emerge as the face of the Opposition…

    — Amit Malviya (@amitmalviya) January 24, 2024 " class="align-text-top noRightClick twitterSection" data=" ">

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ತಮ್ಮ ಪಕ್ಷವನ್ನು ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಕಣಕ್ಕಿಳಿಸುವುದಾಗಿ ಘೋಷಿಸಿದ್ದಾರೆ. ಇತ್ತ ಪಂಜಾಬ್​ನಲ್ಲಿ ಕಾಂಗ್ರೆಸ್​ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅಲ್ಲಿನ ಸಿಎಂ ಭಗವಂತ್​ ಮಾನ್​ ತಿಳಿಸಿದ್ದಾರೆ. ಇದು ಇಂಡಿಯಾ ಕೂಟವು ಛಿದ್ರವಾಗುವ ಲಕ್ಷಣ ಎಂದು ಬಿಜೆಪಿ ಭವಿಷ್ಯ ನುಡಿದಿದೆ.

ಕಾಗದದ ಮೇಲಿನ ಮೈತ್ರಿಕೂಟ: ಈ ಬಗ್ಗೆ ಎಕ್ಸ್​ ಪೋಸ್ಟ್​ನಲ್ಲಿ ಟೀಕಿಸಿರುವ ಪಶ್ಚಿಮ ಬಂಗಾಳದ ಬಿಜೆಪಿ ಸಹ - ಪ್ರಭಾರಿ ಮತ್ತು ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು, ಮಮತಾ ಬ್ಯಾನರ್ಜಿ ಅವರ ನಿರ್ಧಾರವು ಹತಾಶೆಯ ಸಂಕೇತ. ಮೈತ್ರಿಯಲ್ಲಿ ಯಾವುದೇ ಸ್ಥಾನ ಸಿಗದ ಕಾರಣ ಅವರು ಈ ನಿರ್ಣಯಕ್ಕೆ ಬಂದಿದ್ದಾರೆ. ಮುಜುಗರಕ್ಕೊಳಗಾದ ಮಮತಾ ಅವರು ಮಲ್ಲಿಕಾರ್ಜುನ ಖರ್ಗೆಯ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಲು ಸೂಚಿಸಿದ್ದರು ಎಂದಿದ್ದಾರೆ. ಇಷ್ಟೆಲ್ಲಾ ಮಾಡಿದರೂ, ಕೂಟದಲ್ಲಿ ತಮಗೆ ಸೂಕ್ತ ಪ್ರಾಧಾನ್ಯತೆ ದೊರೆಯದ ಕಾರಣ ಮಮತಾ ಅವರು, ರಾಹುಲ್ ಗಾಂಧಿ ನಡೆಸುತ್ತಿರುವ ಸರ್ಕಸ್ (ಯಾತ್ರೆ) ಬಂಗಾಳಕ್ಕೆ ಬರುವ ಮುನ್ನವೇ ಏಕಾಂಗಿ ಹೋರಾಟದ ದೃಢ ನಿರ್ಧಾರ ಘೋಷಿಸಿದ್ದಾರೆ. ಇದು I.N.D.I.A ಕೂಟದ ಮರಣಶಾಸನವಾಗಿದೆ ಅಮಿತ್​ ಹೇಳಿದ್ದಾರೆ.

ಇನ್ನೊಬ್ಬ ಬಿಜೆಪಿ ರಾಷ್ಟ್ರೀಯ ವಕ್ತಾರ ನಳಿನ್ ಕೊಹ್ಲಿ ಅವರು, ಇಂಡಿಯಾ ಕೂಟವನ್ನು ಕಾಗದದ ಮೇಲಿನ ಮೈತ್ರಿ ಎಂದು ಜರಿದರು. ಮಮತಾ ಅವರ ಹೇಳಿಕೆಗಳು ಕೂಟದ ಕಾರ್ಯಸೂಚಿಯಲ್ಲಿ ಯಾವುದೇ ಸ್ಪಷ್ಟತೆ ಮತ್ತು ನಾಯಕತ್ವ ಇರಲಿಲ್ಲ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.

ರಾಮಮಂದಿರ ನಿರ್ಮಾಣ, ಕೂಟ ನಿರ್ನಾಮ: ಬಿಜೆಪಿಯ ಮತ್ತೋರ್ವ ವಕ್ತಾರ ಶೆಹಜಾದ್ ಪೂನವಾಲಾ, ವಿಪಕ್ಷಗಳು ಸೇರಿಕೊಂಡು ಮಾಡಿಕೊಂಡ ಒಲ್ಲದ 'ರಾಜಕೀಯ ವಿವಾಹವು' ತಲಾಖ್​ನಿಂದ ಕೊನೆಗೊಂಡಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಇತ್ತ ಇಂಡಿಯಾ ಕೂಟ ನಿರ್ನಾಮವಾಗಿದೆ ಎಂದು ಹೇಳಿದ್ದಾರೆ.

ಭಾರತೀಯ ಜನತಾ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು, ಇಂಡಿಯಾ ಬಣವನ್ನು ಹಾವು ಮತ್ತು ಮುಂಗುಸಿ ನಡುವಿನ ಅಸ್ವಾಭಾವಿಕ ಮೈತ್ರಿ. ಕೇರಳದಲ್ಲಿ ಎಡಪಕ್ಷಗಳು ಮತ್ತು ಕಾಂಗ್ರೆಸ್ ಜಗಳವಾಸಿದರೆ, ಪಂಜಾಬ್, ದೆಹಲಿಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಕಿತ್ತಾಡುತ್ತಿವೆ. ಇಂತಹ ಅಸಹಜ ಮೈತ್ರಿಯು ನೈಸರ್ಗಿಕವಾಗಿಯೇ ಸಾವನ್ನಪ್ಪುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ನಿದ್ರೆ ಸುಖ ಅರಿಯದ ತಪಸ್ವಿ ಆಡಳಿತಗಾರ,ಸಿದ್ದರಾಮಯ್ಯರದ್ದು ವಿಕೃತ ಆನಂದ: ಬಿಜೆಪಿ ನಾಯಕರ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.