ETV Bharat / bharat

ಸಂಪೂರ್ಣವಾಗಿ ಮುಗಿದ ಮತ ಎಣಿಕೆ: ದೆಹಲಿಯಲ್ಲಿ 3ನೇ ಬಾರಿಗೆ ಕ್ಲೀನ್​ ಸ್ವೀಪ್ ಮಾಡಿ ಇತಿಹಾಸ ಬರೆದ ಬಿಜೆಪಿ ​ - lok sabaha elections 2024

author img

By PTI

Published : Jun 5, 2024, 7:48 AM IST

ರಾಜಧಾನಿ ದೆಹಲಿಯಲ್ಲಿ 3ನೇ ಬಾರಿಗೆ ಕ್ಲೀನ್​ ಸ್ವೀಪ್​ ಮಾಡುವ ಮೂಲಕ ಬಿಜೆಪಿ ದಾಖಲೆ ಬರೆದಿದೆ.

ಬಿಜೆಪಿ
ಬಿಜೆಪಿ (ETV Bharat)

ನವದೆಹಲಿ: ದೆಹಲಿಯಲ್ಲಿ ಬಿಜೆಪಿ ಮತ್ತೊಮ್ಮೆ ಎಲ್ಲ ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ 3ನೇ ಬಾರಿಗೆ ಕ್ಲೀನ್​ ಸ್ವೀಪ್​ ಮಾಡಿ ಇತಿಹಾಸ ಸೃಷ್ಟಿಸಿದೆ. ಈ ಹಿಂದೆ 2014 ಮತ್ತು 2019ರ ಚುನಾವಣೆಯಲ್ಲಿಯೂ ಬಿಜೆಪಿ ಎಲ್ಲ ಏಳು ಸ್ಥಾನಗಳನ್ನು ಗೆದ್ದಿತ್ತು.

ಈ ಬಾರಿ ದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿ ಯೋಗೇಂದ್ರ ಚಂದೋಲಿಯಾ ಅವರು ವಾಯುವ್ಯ ಕ್ಷೇತ್ರದಿಂದ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2.90 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರ ನಂತರ, ಮನೋಜ್ ತಿವಾರಿ ಅವರು ಈಶಾನ್ಯ ದೆಹಲಿಯಿಂದ ಚುನಾವಣೆಯಲ್ಲಿ ಕನ್ಹಯ್ಯಾ ಕುಮಾರ್ ಅವರನ್ನು 1.38 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ.

ಮೂವರು ಮಾಜಿ ಮೇಯರ್‌ಗಳು ಮತ್ತು ಹಾಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಯೋಗೇಂದ್ರ ಚಂದೋಲಿಯಾ, ಕಮಲಜಿತ್ ಸೆಹ್ರಾವತ್ ಮತ್ತು ಹರ್ಷ್ ಮಲ್ಹೋತ್ರಾ ಲೋಕ ಸಮರದಲ್ಲಿ ಭರ್ಜರಿ ಗೆಲುವು ಸಾಧಿಸಿ ಸಂಸತ್ತು ಪ್ರವೇಶಿಸಿದ್ದಾರೆ.

ಯೋಗೇಂದ್ರ ಚಂದೋಲಿಯಾ: ಬಿಜೆಪಿ ಅಭ್ಯರ್ಥಿ ಯೋಗೇಂದ್ರ ಚಂದೋಲಿಯಾ ಅವರು ವಾಯುವ್ಯ ದೆಹಲಿ ಕ್ಷೇತ್ರದಿಂದ 2,90,849 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಅವರು ಒಟ್ಟು 8,66,483 ಮತಗಳನ್ನು ಪಡೆದಿದ್ದಾರೆ. ಪ್ರತಿಸ್ಪರ್ಧಿ ಅಭ್ಯರ್ಥಿ ಕಾಂಗ್ರೆಸ್‌ನ ಉದಿತ್ ರಾಜ್ 5,75,634 ಮತಗಳನ್ನು ಪಡೆದಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಹಂಸರಾಜ್ ಹನ್ಸ್ 5,53,897 ಮತಗಳ ಅಂತರದಿಂದ ಈ ಸ್ಥಾನವನ್ನು ಗೆಲುವು ಸಾಧಿಸಿದ್ದರು ಮತ್ತು ಅವರು ಒಟ್ಟು 8,48,663 ಮತಗಳನ್ನು ಪಡೆದಿದ್ದರು.

ಮನೋಜ್ ತಿವಾರಿ: ಬಿಜೆಪಿಯ ಮನೋಜ್ ತಿವಾರಿ ಕಾಂಗ್ರೆಸ್‌ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ವಿರುದ್ಧ 1,38,778 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಮನೋಜ್ ತಿವಾರಿ ಅವರು ಒಟ್ಟು 8,24,451 ಮತಗಳನ್ನು ಪಡೆದಿದ್ದು, ಕನ್ಹಯ್ಯಾ ಕುಮಾರ್ ಒಟ್ಟು 6,85,673 ಮತಗಳನ್ನು ಪಡೆದ್ದಾರೆ. ವಿಶೇಷ ಎಂದರೆ ಕನ್ಹಯ್ಯಾ ಕುಮಾರ್ ಸ್ಪರ್ಧೆಯಿಂದ ಈ ಕ್ಷೇತ್ರ ಬಾರಿ ಗಮನ ಸೆಳೆದಿತ್ತು.

ಕಮಲಜೀತ್ ಸೆಹ್ರಾವತ್: ಬಿಜೆಪಿಯ ಕಮಲಜೀತ್ ಸೆಹ್ರಾವತ್ ಪಶ್ಚಿಮ ದೆಹಲಿ ಕ್ಷೇತ್ರದಲ್ಲಿ 1,99,013 ಮತಗಳ ಅಂತರದಿಂದ ಗೆದ್ದಿದ್ದಾರೆ. ಸೆಹ್ರಾವತ್ ಒಟ್ಟು 8,42,658 ಮತಗಳನ್ನು ಪಡೆದಿದ್ದರೆ, ಎದುರಾಳಿ ಆಮ್ ಆದ್ಮಿ ಪಕ್ಷದ ಮಹಾಬಲ್ ಮಿಶ್ರಾ ಒಟ್ಟು 6,43,645 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ.

ರಾಮ್‌ವೀರ್ ಸಿಂಗ್ ಬಿಧುರಿ: ದಕ್ಷಿಣ ದೆಹಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಾಮವೀರ್ ಸಿಂಗ್ ಬಿಧುರಿ ಅವರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಾಹಿರಾಮ್ ಪೆಹಲ್ವಾನ್ ಅವರನ್ನು 1,24,333 ಮತಗಳ ಅಂತರದಿಂದ ಸೋಲಿಸಿದ್ದಾರೆ. ರಾಮ್‌ವೀರ್ ಬಿಧುರಿ ಒಟ್ಟು 6,92,832 ಮತಗಳನ್ನು ಪಡೆದರೆ, ಆಪ್ ಅಭ್ಯರ್ಥಿ ಸಾಹಿರಾಮ್ ಒಟ್ಟು 5,68,499 ಮತಗಳಿಗೆ ತೃಪ್ತಿಪಡಬೇಕಾಯಿತು.

ಪ್ರವೀಣ್ ಖಂಡೇಲ್ವಾಲ್: ದೆಹಲಿಯ ಚಾಂದಿನಿ ಚೌಕ್ ಕ್ಷೇತ್ರದಲ್ಲಿ ಬಿಜೆಪಿಯ ಪ್ರವೀಣ್ ಖಂಡೇಲ್ವಾಲ್ ಜಯಭೇರಿ ಬಾರಿಸಿದ್ದಾರೆ. ಒಟ್ಟು 89,325 ಮತಗಳಿಂದ ಕಾಂಗ್ರೆಸ್‌ನ ಜೈ ಪ್ರಕಾಶ್ ಅಗರ್ವಾಲ್ ಅವರನ್ನು ಸೋಲಿಸಿದ್ದಾರೆ. ಪ್ರವೀಣ್ ಖಂಡೇಲ್ವಾಲ್ ಒಟ್ಟು 5,16,496 ಮತ್ತು ಜೆಪಿ ಅಗರ್ವಾಲ್ 4,27,171 ಮತಗಳನ್ನು ಪಡೆದಿದ್ದಾರೆ.

ಹರ್ಷ್ ಮಲ್ಹೋತ್ರಾ: ಬಿಜೆಪಿಯ ಹರ್ಷ್ ಮಲ್ಹೋತ್ರಾ ಪೂರ್ವ ದೆಹಲಿ ಕ್ಷೇತ್ರದಲ್ಲಿ 93,663 ಮತಗಳ ಅಂತರದಿಂದ ಗೆದ್ದಿದ್ದಾರೆ. ಅವರು ಆಮ್ ಆದ್ಮಿ ಪಕ್ಷದ ಕುಲದೀಪ್ ಕುಮಾರ್ ಅವರನ್ನು ಸೋಲಿಸಿದ್ದಾರೆ. ಹರ್ಷ್ ಮಲ್ಹೋತ್ರಾ ಒಟ್ಟು 6,64,819 ಮತಗಳನ್ನು ಪಡೆದರೆ, ಕುಲದೀಪ್ ಕುಮಾರ್ ಅವರು ಒಟ್ಟು 5,71,156 ಮತಗಳನ್ನು ಪಡೆದರು.

ಬಾನ್ಸುರಿ ಸ್ವರಾಜ್: ನವದೆಹಲಿ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂದೇ ಹೇಳಲಾಗುತ್ತದೆ. ಆದರೆ, ಈ ಕ್ಷೇತ್ರದಲ್ಲಿ ಅತಿ ಕಡಿಮೆ ಅಂತರದಿಂದ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿಯ ಬಾನ್ಸುರಿ ಸ್ವರಾಜ್ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ಸೋಮನಾಥ್ ಭಾರತಿ ವಿರುದ್ಧ 78,370 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಬಾನ್ಸುರಿ ಒಟ್ಟು 4,53,185 ಮತಗಳನ್ನು ಪಡೆದರೇ, ಆಪ್​ನ ಭಾರತಿ ಒಟ್ಟು 3,74,815 ಮತಗಳನ್ನು ಪಡೆದರು. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮೀನಾಕ್ಷಿ ಲೇಖಿ ಅವರು ಕಾಂಗ್ರೆಸ್‌ನ ಅಜಯ್ ಮಾಕನ್ ಅವರನ್ನು 2.5 ಲಕ್ಷ ಮತಗಳಿಂದ ಗೆಲುವು ಸಾಧಿಸಿದ್ದರು. ಇದಕ್ಕೆ ಹೋಲಿಕೆ ಮಾಡಿದರೇ ಈ ಬಾರಿ ಬಿಜೆಪಿಗೆ ಕಡಿಮೆ ಅಂತರದ ಗೆಲುವಾಗಿದೆ.

ಇದನ್ನೂ ಓದಿ: ನಿತೀಶ್‌ಗೆ ಇಂಡಿ ಕೂಟದಿಂದ ಉಪ ಪ್ರಧಾನಿ ಆಫರ್? : ಮೋದಿ ಕಂಗೆಡುವಂತೆ ಮಾಡ್ತಾರಾ ನಿತೀಶ್​​? - Nitish Kumar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.