ನವದೆಹಲಿ: ಕೇಂದ್ರ ಆರೋಗ್ಯ ಇಲಾಖೆ ಸಚಿವ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜಗತ್ ಪ್ರಕಾಶ್ ನಡ್ಡಾ ಅವರನ್ನು ರಾಜ್ಯಸಭೆಯ ಸಭಾ ನಾಯಕರನ್ನಾಗಿ ಸೋಮವಾರ ನೇಮಿಸಲಾಗಿದೆ.
ಈಚೆಗೆ ಮುಗಿದ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿರುವ ನಡ್ಡಾ ಅವರಿಗೆ ರಾಜ್ಯಸಭೆಯ ನಾಯಕತ್ವದ ಹೊಣೆ ನೀಡಲಾಗಿದೆ. ಇದಕ್ಕೂ ಮೊದಲು ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಭಾ ನಾಯಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.
ನಡ್ಡಾ ಅವರು ಸೋಮವಾರ ಸಂಸತ್ತಿನ ಕೆಳಮನೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ರಾಜ್ಯಸಭೆ ಸಭಾನಾಯಕರಾಗಿ ನೇಮಕವಾದರು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಸಂಸತ್ತಿನ ಮೇಲ್ಮನೆಯ 11 ಸದಸ್ಯರು ಕೇಂದ್ರ ಸಚಿವ ಸಂಪುಟದಲ್ಲಿದ್ದಾರೆ.
ನಡ್ಡಾಗೆ ಕಾಂಗ್ರೆಸ್ ಅಭಿನಂದನೆ: ನಡ್ಡಾ ರಾಜ್ಯಸಭೆ ಸಭಾನಾಯಕರಾಗಿದ್ದಕ್ಕೆ ಕಾಂಗ್ರೆಸ್ ಅವರನ್ನು ಅಭಿನಂದಿಸಿದೆ. ಸದನದಲ್ಲಿ ಪ್ರತಿಪಕ್ಷಗಳ ಅಭಿಪ್ರಾಯಗಳಿಗೆ ಅವಕಾಶ ನೀಡಿ ಎಂದು ಅಭಿನಂದನೆಗಳ ಜೊತೆಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಒತ್ತಾಯಿಸಿದ್ದಾರೆ.
Greetings to @JPNadda ji on his being nominated as the Leader of the House in the Rajya Sabha. As Venkaiah Naidu garu might have said - if the Leader of the House can accommodate, the Opposition can cooperate.
— Jairam Ramesh (@Jairam_Ramesh) June 24, 2024
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ರಾಜ್ಯಸಭೆಯಲ್ಲಿ ಸದನದ ನಾಯಕರಾಗಿ ನಾಮನಿರ್ದೇಶನಗೊಂಡಿರುವ ಜೆ.ಪಿ.ನಡ್ಡಾ ಅವರಿಗೆ ಶುಭಾಶಯಗಳು. ವೆಂಕಯ್ಯ ನಾಯ್ಡು ಅವರು ಹೇಳಿದಂತೆ, ಸಭಾನಾಯಕರು ಪ್ರತಿಪಕ್ಷಗಳಿಗೆ ಮಾತನಾಡಲು ಅವಕಾಶ ಕಲ್ಪಿಸಿದಲ್ಲಿ ಉತ್ತಮ ಕಲಾಪ ಸಾಧ್ಯ ಎಂಬುದನ್ನು ತೋರಿಸಿಕೊಡಿ ಎಂದು ಕೋರಿದ್ದಾರೆ.
ಇದನ್ನೂ ಓದಿ: ಕೇಂದ್ರದಲ್ಲಿ ಬಿಜೆಪಿ ಬೆಂಬಲಿಸಲ್ಲ, ಪ್ರಬಲ ಪ್ರತಿಪಕ್ಷವಾಗಿ ಕೆಲಸ: ಬಿಜೆಡಿ ನಿರ್ಣಯ - BJD To Work As Strong Opposition