ETV Bharat / bharat

'ಹನುಮಂತ ಮುಸಲ್ಮಾನ': ಬಿಹಾರ ಶಿಕ್ಷಕನ ವಿರುದ್ಧ ಭುಗಿಲೆದ್ದ ಆಕ್ರೋಶ

ಶಿಕ್ಷಕರೊಬ್ಬರು ಮಕ್ಕಳಿಗೆ ತಪ್ಪು ಮಾಹಿತಿ ನೀಡುತ್ತಿದ್ದು, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕೇಂದ್ರ ಸಚಿವ ಗಿರಿರಾಜ್​ ಸಿಂಗ್​ ಆಗ್ರಹಿಸಿದ್ದಾರೆ.

Bihar Begusarai School Teacher Statement Hanumanji Was Muslim
ಗ್ರಾಮಸ್ಥರ ಆಕ್ರೋಶ (ಈಟಿವಿ ಭಾರತ್​​)
author img

By ETV Bharat Karnataka Team

Published : Oct 10, 2024, 2:05 PM IST

Updated : Oct 10, 2024, 2:45 PM IST

ಬೆಗುಸರಾಯ್ (ಬಿಹಾರ್​​): ಹನುಮಂತ ಮುಸಲ್ಮಾನ. ರಾಮ ಆತನಿಗೆ ನಮಾಜ್​ ಮಾಡುವುದನ್ನು ಕಲಿಸಿದ ಎಂದು ಬಿಹಾರ್​ನ ಬಚ್ಚವರ ಪ್ರದೇಶದ ಶಿಕ್ಷಕರೊಬ್ಬರು ಮಕ್ಕಳಿಗೆ ಹೇಳಿದ್ದಾರೆ. ಅವರ ಈ ಹೇಳಿಕೆ ವಿರುದ್ಧ ಇತರ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಮಾಧ್ಯಮಿಕ ಶಾಲೆ ಹರಿಪುರದ ಕದರಬಾದ್​ನ ಜಿಯಾದ್ದೀನ್​ ಎಂಬ ಶಿಕ್ಷಕ ಮಕ್ಕಳಿಗೆ ತಪ್ಪು ಮಾಹಿತಿ ನೀಡುವ ಮೂಲಕ ಮಕ್ಕಳನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಅವರು ಮಕ್ಕಳಿಗೆ ಈ ರೀತಿ ಹೇಳಿಕೊಟ್ಟಿರುವುದರ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಶಿಕ್ಷಕ ಕ್ಷಮೆಯಾಚಿಸಿದ್ದಾರೆ. ಆದರೆ ಇಲ್ಲಿನ ಸ್ಥಳೀಯರು ಮತ್ತು ವಿದ್ಯಾರ್ಥಿಗಳ ಪೋಷಕರು ಅವರ ಕ್ಷಮೆ ಸ್ವೀಕರಿಸಲು ತಯಾರಿಲ್ಲ. ಅಲ್ಲದೇ, ಶಿಕ್ಷಕರ ವಿರುದ್ಧ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿದ್ದಾರೆ. ಶಿಕ್ಷಕ ಜಿಯಾದ್ದೀನ್​ ತಪ್ಪು ಮಾಹಿತಿ ನೀಡುತ್ತಿದ್ದು, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಗಿರಿರಾಜ್​ ಸಿಂಗ್​ ಆಗ್ರಹಿಸಿದ್ದಾರೆ.

ಹಿಂದೆ ಗಂಗಾ ನದಿ ಅವಹೇಳನ ಮಾಡಿದ್ದರು ಎಂಬ ಆರೋಪ : ಶಿಕ್ಷಕ ಜಿಯಾದ್ದೀನ್​ ಮೇಲೆ ಈ ರೀತಿ ಆರೋಪ ಕೇಳಿ ಬರುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ 2016ರಲ್ಲಿ ಕೂಡ ಗಂಗಾ ನದಿ ಕುರಿತು ಇಂತಹದ್ದೇ ತಪ್ಪು ಮಾಹಿತಿ ನೀಡಿದ್ದರು. ಗಂಗಾ ನದಿ ದೇವೆತೆಯ ಸ್ವರೂಪವಲ್ಲ. ನದಿ ದೈವ ಸ್ವರೂಪ ಆಗಿದ್ದರೆ, ಯಾರು ಕೂಡ ನದಿಯಲ್ಲಿ ಬಿದ್ದು ಸಾವನ್ನಪ್ಪುತ್ತಿರಲಿಲ್ಲ ಎಂದಿದ್ದರು. ಈ ಹೇಳಿಕೆ ಬಂದಾಗಲೂ ತೀವ್ರ ವಿರೋಧ ವ್ಯಕ್ತವಾಗಿತ್ತು.

ಬೇಕಾಬಿಟ್ಟಿಯಾಗಿ ಮಕ್ಕಳಿಗೆ ತಪ್ಪು ಮಾಹಿತಿ ನೀಡುತ್ತಿರುವ ಶಿಕ್ಷಕರನ್ನು ಶಾಲೆಯಿಂದ ಉಚ್ಛಾಟನೆ ಮಾಡುವಂತೆ ಗ್ರಾಮದ ನಿವಾಸಿ ದೀಪಕ್​ ಕುಮಾರ್ ಎಂಬುವವರು​ ಒತ್ತಾಯಿಸಿದ್ದಾರೆ. ಇದು ನಮಗೆ ಸಂಪೂರ್ಣ ಸ್ವೀಕರಾರ್ಹವಲ್ಲ. ಈ ರೀತಿಯ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಹಾಗೇ ಶಿಕ್ಷಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುತ್ತೇವೆ ಎಂದು ಗ್ರಾಮಸ್ಥರಾದ ರಾಜೇಶ್​ ಕುಮಾರ್​ ಪೊದ್ದರ್​ ಮತ್ತು ಬಲರಾಮ್​ ಪ್ರಸಾದ್​ ಸಿಂಗ್​ ತಿಳಿಸಿದ್ದಾರೆ.

ಇಂತಹ ತಪ್ಪು ಮಾಹಿತಿ ನೀಡದಂತೆ ಸರ್​​ಪಂಚ್​ ಎಚ್ಚರಿಕೆ: ಶಿಕ್ಷಕರ ವಿಚಾರ ಎಲ್ಲೆಡೆ ಹರಡುತ್ತಿದ್ದಂತೆ, ಶಾಲೆಗೆ ಆಗಮಿಸಿದ ಸರ್​ಪಂಚ್​ ಶಿಕ್ಷಕರ ಬಳಿ ಕ್ಷಮೆ ಕೇಳುವಂತೆ ತಿಳಿಸಿದ್ದು, ಈ ರೀತಿಯ ವರ್ತನೆಯನ್ನು ಪುನರಾವರ್ತನೆ ಮಾಡದಂತೆ ಕಡೆಯ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ಮಾಧ್ಯಮಿಕ ಶಾಲೆ ಹರಿಪುರ್​ ಕದ್ರಬಾದ್​​ ಮುಖ್ಯೋಪಾಧ್ಯಾಯರಾದ ಶೈಲ್​ ಕುಮಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಾಂತ್ರಿಕನ ಮಾತು ಕೇಳಿ ತಿಂಗಳ ಹಸುಳೆಯನ್ನು ಬಲಿ ಕೊಟ್ಟ ದಂಪತಿ!

Last Updated : Oct 10, 2024, 2:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.