ETV Bharat / bharat

ಲಖನೌ ತಲುಪಿದ ಭಾರತ್ ಜೋಡೋ ನ್ಯಾಯ್ ಯಾತ್ರೆ: ಮೋದಿ ವಿರುದ್ಧ ರಾಹುಲ್ ಗಾಂಧಿ ಗುಡುಗು - ಭಾರತ್ ಜೋಡೋ ನ್ಯಾಯ್ ಯಾತ್ರೆ

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಮಂಗಳವಾರ ಸಂಜೆ ಲಖನೌ ತಲುಪಿತು. ಈ ವೇಳೆ, ರಾಜಧಾನಿ ಲಖನೌನ ರಸ್ತೆಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು.

Rahul Gandhi Bharat jodo yatra  Lucknow  ಲಖನೌ  ಭಾರತ್ ಜೋಡೋ ನ್ಯಾಯ್ ಯಾತ್ರೆ  ರಾಹುಲ್ ಗಾಂಧಿ
ಲಖನೌ ತಲುಪಿದ ರಾಹುಲ್ ಗಾಂಧಿಯ ಭಾರತ್ ಜೋಡೋ ನ್ಯಾಯ್ ಯಾತ್ರೆ
author img

By ETV Bharat Karnataka Team

Published : Feb 21, 2024, 7:43 AM IST

ಲಖನೌ (ಉತ್ತರ ಪ್ರದೇಶ ): ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಪರೀಕ್ಷೆಯ ಪೇಪರ್ ಸೋರಿಕೆ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಮಂಗಳವಾರ ಸಂಜೆ ರಾಜಧಾನಿ ಲಖನೌಗೆ ಆಗಮಿಸಿದೆ.

ಲಖನೌನ ಘಂಟಾಘರ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್​ ಗಾಂಧಿ, ''ಉತ್ತರ ಪ್ರದೇಶದಲ್ಲಿ ಪೊಲೀಸ್​ ನೇಮಕಾತಿ ಪೇಪರ್ ಸೋರಿಕೆಯ ಘಟನೆಗಳು ಬೆಳಕಿಗೆ ಬಂದಿವೆ. ಆದ್ರೆ ಈ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿಲ್ಲ. ಇಂದು ಉತ್ತರ ಪ್ರದೇಶದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯು ಗಂಭೀರ ಸಮಸ್ಯೆಯಾಗುತ್ತಿದ್ದು, ಬಿಜೆಪಿ ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿಲ್ಲ ಎಂದು ಕಿಡಿಕಾರಿದರು.

ಯುವಕರಿಗೆ ಉದ್ಯೋಗ ಸೃಷ್ಟಿಸುವ ಭರವಸೆ: ''ಇಂದು ಉತ್ತರ ಪ್ರದೇಶದಲ್ಲಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಮುಗಿಯುವ ಮೊದಲೇ ಆ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತದೆ. ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಐದು ವರ್ಷಗಳ ಕಾಲ ತಯಾರಿ ನಡೆಸುತ್ತಾರೆ. ಆದರೆ, ಪರೀಕ್ಷೆಯ ದಿನಗಳು ಸಮೀಪ ಬಂದಾಗ, ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತೇವೆ. ಯುವಕರಿಗೆ ಉದ್ಯೋಗ ಸೃಷ್ಟಿಸಲು ಮುಂದಾಗುತ್ತೇವೆ'' ಎಂದು ಯುಪಿ ಯೋಗಿ ಸರ್ಕಾರದ ವಿರುದ್ಧ ರಾಹುಲ್​ ವಾಗ್ದಾಳಿ ನಡೆಸಿದರು.

''ಬಿಜೆಪಿ ಸರಕಾರ ಈ ಬಗ್ಗೆ ಎಳ್ಳಷ್ಟೂ ಗಂಭೀರವಾಗಿಲ್ಲ. ಯುವಕರ ಭವಿಷ್ಯದ ಜೊತೆ ಚಲ್ಲಾಟ ಆಡುತ್ತಿದೆ. ತಮ್ಮ ಸರ್ಕಾರ ಬಂದ ನಂತರ ದೇಶದಲ್ಲಿ ಹೆಚ್ಚೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡುತ್ತೇವೆ. ಜಾತಿ ಗಣತಿ ನಡೆಸುವ ಮೂಲಕ ದೇಶದ ಪ್ರಸ್ತುತ ಪರಿಸ್ಥಿತಿಯನ್ನು ಪ್ರತಿಯೊಬ್ಬರ ಗಮನಕ್ಕೆ ತರುವ ಎಲ್ಲ ಪ್ರಯತ್ನ ಮಾಡಲಾಗುವುದು. ಜಾತಿ ಗಣತಿಯ ನಂತರ ಹೊರಬರುವ ಮಾಹಿತಿಯ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯ ಒದಗಿಸಲು ನಾವು ಪ್ರಯತ್ನಿಸುತ್ತೇವೆ'' ಎಂದು ಯುವಕರಿಗೆ ರಾಗಾ ಭರವಸೆ ನೀಡಿದರು.

ದೇಶದ ಸಂಪತ್ತೆಲ್ಲ ಅದಾನಿ ಪಾಲು- ಆರೋಪ: ಪ್ರಸ್ತುತ ದೇಶದಲ್ಲಿ ನಿರುದ್ಯೋಗ ಮತ್ತು ಹಣದುಬ್ಬರ ದೊಡ್ಡ ಸಮಸ್ಯೆಯಾಗಿದೆ. ಮೋದಿ ಸರ್ಕಾರ ಯುವಕರಿಗೆ ಉದ್ಯೋಗ ನೀಡುವ ಬದಲು ಅದಾನಿಗಾಗಿ ಮಾತ್ರ ಕೆಲಸ ಮಾಡುತ್ತಿದೆ. ಪ್ರಸ್ತುತ ದೇಶದ ಹಣವೆಲ್ಲ ಒಬ್ಬ ಉದ್ಯಮಿಯ ಪಾಲಾಗುತ್ತಿದ್ದು, ಯುವಕರು ಉದ್ಯೋಗ ಅರಸಿ ಎಲ್ಲೆಡೆ ಅಲೆದಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಅಸಮಾಧಾನ ವ್ಯಕ್ತಪಡಿಸಿದರು.

ಅಗ್ನಿವೀರ್ ಯೋಜನೆ ಕುರಿತು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್​​ ಗಾಂಧಿ, ''4 ವರ್ಷಗಳ ಉದ್ಯೋಗದ ನಂತರ ಇಂದು ಸರ್ಕಾರ ಯುವಕರನ್ನು ಹೊರಹಾಕುವ ಕೆಲಸ ಮಾಡುತ್ತಿದೆ. ಅಷ್ಟೇ ಅಲ್ಲ, ದೇಶಸೇವೆ ಮಾಡುತ್ತಾ ಯಾವುದೇ ಅಗ್ನಿವೀರ ಹುತಾತ್ಮರಾದರೆ ಅವರಿಗೆ ಯಾವುದೇ ಗೌರವ ಕೂಡ ನೀಡುವುದಿಲ್ಲ'' ಎಂದು ಗರಂ ಆದರು.

ಮೋದಿ ಸರ್ಕಾರದ ಉದ್ದೇಶಪೂರ್ವಕ ಭ್ರಷ್ಟಾಚಾರ: ಪ್ರಧಾನಿ ಮೋದಿ ಜಿಎಸ್‌ಟಿ ಮತ್ತು ನೋಟು ಅಮಾನ್ಯೀಕರಣದಿಂದ ಸಣ್ಣ ವ್ಯಾಪಾರಿಗಳನ್ನು ನಾಶ ಮಾಡಿದ್ದಾರೆ. ಇದು ಬಿಜೆಪಿ ಮೋದಿ ಸರ್ಕಾರದ ಉದ್ದೇಶಪೂರ್ವಕ ಭ್ರಷ್ಟಾಚಾರವಾಗಿದೆ. ಮೋದಿ ಅವರ ಕೈಗಾರಿಕೋದ್ಯಮಿ ಗೆಳೆಯರು ಮಾತ್ರ ಇದರ ಲಾಭ ಪಡೆದಿದ್ದಾರೆ. ಮೋದಿಯವರು ಎರಡು ಭಾರತಗಳನ್ನು ರಚಿಸಿದ್ದು, ಒಂದು ಕೋಟ್ಯಧಿಪತಿಗಳಿಗೆ ಮತ್ತು ಮತ್ತೊಂದು ಬಡವರಿಗೆ ಎಂದು ರಾಹುಲ್​ ಮೋದಿ ವಿರುದ್ಧ ಹರಿಹಾಯ್ದರು.

ಯಾತ್ರೆ ಲಖನೌ ತಲುಪಿದ ಕೂಡಲೇ ಟ್ರಾಫಿಕ್​ ಜಾಮ್: ಮಂಗಳವಾರ ಅಮೇಥಿಯಿಂದ ಆರಂಭವಾದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಸಂಜೆ ವೇಳೆ ಲಖನೌ ತಲುಪಿತು. ನಿಗೋಹಾ, ಮೋಹನ್ ಲಾಲ್‌ಗಂಜ್ ಮಾರ್ಗವಾಗಿ ಚಾರ್‌ಬಾಗ್ ಮೂಲಕ ಚೌಕ್ ತಲುಪಬೇಕಾಗಿತ್ತು. ಆದರೆ, ಈ ಸಮಯದಲ್ಲಿ ಇಡೀ ನಗರದಲ್ಲಿ ಟ್ರಾಫಿಕ್​ ಜಾಮ್ ಉಂಟಾಗಿತ್ತು. ಹಜರತ್‌ಗಂಜ್‌ನಿಂದ ಚಾರ್‌ಬಾಗ್‌ಗೆ ಹೋಗುವ ಮಾರ್ಗದಲ್ಲಿ ನೂರಾರು ವಾಹನಗಳ ನಿಂತಿದ್ದವು. ಚಾರ್‌ಬಾಗ್ ರೈಲು ನಿಲ್ದಾಣಕ್ಕೆ ಹೋಗುವವರೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಇದರಿಂದ ಜನರು ಕಾಲ್ನಡಿಗೆಯಲ್ಲೇ ರೈಲು ನಿಲ್ದಾಣ ತಲುಪಬೇಕಾಯಿತು.

ಇದನ್ನೂ ಓದಿ: ಶಂಭು ಗಡಿಯಲ್ಲಿ 14 ಸಾವಿರ ಮಂದಿ, 1200 ಟ್ರ್ಯಾಕ್ಟರ್​, ಪೊಕ್ಲೆನ್​, ಜೆಸಿಬಿಗಳು: ತೀವ್ರ ಎಚ್ಚರಿಕೆಯಿಂದರಲು ಕೇಂದ್ರದ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.