ETV Bharat / bharat

ಅತ್ಯಾಚಾರ ವಿರೋಧಿ ಮಸೂದೆಯ ಜೊತೆಗೆ ತಾಂತ್ರಿಕ ವರದಿ ಕಳುಹಿಸಿಲ್ಲ: ಸಿಎಂ ಮಮತಾ ವಿರುದ್ದ ರಾಜ್ಯಪಾಲ ಕಿಡಿ - West Bengal Aparajita Bill - WEST BENGAL APARAJITA BILL

ಪಶ್ಚಿಮ ಬಂಗಾಳ ಸರ್ಕಾರ ಇತ್ತೀಚಿಗೆ ವಿಶೇಷ ವಿಧಾನಸಭೆ ಅಧಿವೇಶನ ಕರೆದು ಅತ್ಯಾಚಾರ ವಿರೋಧಿ ಮಸೂದೆ ಮಂಡಿಸಿತ್ತು. ಈ ಕುರಿತು ಇದೀಗ ರಾಜ್ಯಪಾಲ ಸಿ.ವಿ.ಆನಂದ್​ ಬೋಸ್ ಪ್ರತಿಕ್ರಿಯಿಸಿ, ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

bengal-guv-criticises-cm-for-not-sending-technical-report-along-with-anti-rape-bill
ಪಶ್ಚಿಮ ಬಂಗಾಳ ಗವರ್ನರ್​ ಸಿ.ವಿ.ಆನಂದ್​ ಬೋಸ್​ (ANI)
author img

By PTI

Published : Sep 6, 2024, 11:19 AM IST

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕಳೆದ ಮೂರು ದಿನಗಳ ಹಿಂದೆ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರವಾಗಿದ್ದ 'ಅಪರಾಜಿತ ಮಸೂದೆ'ಯ ಜೊತೆಗೆ ತಾಂತ್ರಿಕ ವರದಿ ಕಳುಹಿಸುವಲ್ಲಿ ಸಿಎಂ ಮಮತಾ ಬ್ಯಾನರ್ಜಿ ವಿಫಲರಾಗಿದ್ದಾರೆ ಎಂದು ರಾಜ್ಯಪಾಲ ಸಿ.ವಿ.ಆನಂದ್​ ಬೋಸ್​ ಟೀಕಿಸಿದ್ದಾರೆ.

ಸರ್ಕಾರ ತನ್ನ ಎಂದಿನ ಅಭ್ಯಾಸ ಮುಂದುವರೆಸಿದೆ. ಈ ಬಾರಿಯೂ ಮಸೂದೆಯೊಂದಿಗೆ ತಾಂತ್ರಿಕ ವರದಿಯನ್ನು ಕಳುಹಿಸಿಲ್ಲ. ಹೀಗಿದ್ದೂ, ರಾಜ್ಯಪಾಲರ ಕಚೇರಿಯಿಂದ ಮಸೂದೆ ಅಂಗೀಕೃತವಾಗಿಲ್ಲ ಎಂದು ಅವರು ದೂಷಣೆ ಮಾಡುತ್ತಾರೆ. ಸರ್ಕಾರದ ಈ ನಡೆ ನಿರಾಶದಾಯಕವಾಗಿದೆ ಎಂದು ಹೇಳಿದ್ದಾರೆ.

ಅಪರಾಜಿತ ಮಸೂದೆಯೊಂದಿಗೆ ತಾಂತ್ರಿಕ ವರದಿಯನ್ನು ಕಳುಹಿಸುವಲ್ಲಿ ಸರ್ಕಾರ ವಿಫಲವಾಗಿದೆ. ನಿಯಮದ ಪ್ರಕಾರ, ಅನುಮೋದನೆಗೂ ಮುನ್ನ ಪರಿಶೀಲಿಸಲು ಮಸೂದೆ ಜೊತೆಗೆ ತಾಂತ್ರಿಕ ವರದಿ ಕಳುಹಿಸುವುದು ಕಡ್ಡಾಯ ಎಂದು ರಾಜಭವನ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಸರ್ಕಾರ ತಾಂತ್ರಿಕ ವರದಿಯನ್ನು ತಡೆ ಹಿಡಿಯುವುದು ಮತ್ತು ಆ ಬಳಿಕ ಮಸೂದೆ ಅಂಗೀಕೃತವಾಗಿಲ್ಲ ಎಂದು ರಾಜಭವನವನ್ನು ದೂಷಿಸುವುದು ಇದು ಮೊದಲಲ್ಲ ಎಂದು ರಾಜ್ಯಪಾಲರು ಟೀಕಿಸಿದ್ದಾರೆ.

ರಾಜ್ಯ ಸರ್ಕಾರ ಇಂತಹ ಪ್ರಮುಖವಾದ ವಿಚಾರಗಳಲ್ಲೂ ಯಾವುದೇ ಹೋಂ ವರ್ಕ್​ ಮಾಡಿಲ್ಲ. ಅಪರಾಜಿತ ಮಸೂದೆಯಲ್ಲಿ ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಅರುಣಾಚಲ ಪ್ರದೇಶದಲ್ಲಿ ಇರುವ ಅಂಶಗಳನ್ನೇ ಕಾಪಿ ಪೇಸ್ಟ್​ ಮಾಡಲಾಗಿದೆ ಎಂದು ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಏನಿದು ಅಪರಾಜಿತ ಮಸೂದೆ?: ರಾಜ್ಯದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಕೊಲೆಯಂತಹ ಪ್ರಕರಣದ ಅಪರಾಧಿಗಳನ್ನು ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಲು ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಅಪರಾಜಿತ ಮಹಿಳೆ ಮತ್ತು ಮಕ್ಕಳ ಮಸೂದೆ-2024 ಮಸೂದೆ ಮಂಡಿಸಿದೆ.

ಈ ಮಸೂದೆಯು ಈಗಿರುವ ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2024 ಮತ್ತು ಪೋಕ್ಸೊ 2012 ಸೇರಿದಂತೆ ಕಾನೂನಿಗೆ ತಿದ್ದುಪಡಿ ಮಾಡುವ ಮೂಲಕ ಪಶ್ಚಿಮ ಬಂಗಾಳದಲ್ಲಿ ಮಹಿಳೆ ಮತ್ತು ಮಕ್ಕಳ ವಿರುದ್ಧ ಹೀನ ಕೃತ್ಯ ಎಸಗಿದವರಿಗೆ ಗಲ್ಲು ಶಿಕ್ಷೆ ವಿಧಿಸುತ್ತದೆ.

ಇದನ್ನೂ ಓದಿ: ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸುವ ಮಸೂದೆ ಅಂಗೀಕರಿಸಿದ ಪಶ್ಚಿಮ ಬಂಗಾಳ: ರಾಜ್ಯಪಾಲರ ಅಂಕಿತ ಬಾಕಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.