ಬರಾನ್ (ರಾಜಸ್ಥಾನ): ಬರಾನ್‌ನಿಂದ ಕೆಲವಾರ ಕಡೆಗೆ ಶುಕ್ರವಾರ ತೆರಳುತ್ತಿದ್ದ ಎಸ್‌ಯುವಿ ಕಾರಿಗೆ ಹಠಾತ್ ಆಗಿ ಹಸುವೊಂದು ಅಡ್ಡ ಬಂದಿದೆ. ಪರಿಣಾಮ ಭನ್ವರ್‌ಗಢ - ಕಿಶನ್‌ಗಂಜ್ ಮಾರ್ಗದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ರಾಜಸ್ಥಾನದ ಬರನ್ ಜಿಲ್ಲೆಯ ಭನ್ವರ್ಗಢ್ ಪಟ್ಟಣದಿಂದ ಎರಡು ಕಿ.ಮೀ. ಹೊರವಲಯದ ರಾಷ್ಟ್ರೀಯ ಹೆದ್ದಾರಿ 27ರಲ್ಲಿ ಹಸು ಅಡ್ಡ ಬಂದ ಕಾರಣಕ್ಕೆ ವಾಹನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಭನ್ವರ್ಗಢ ಪೊಲೀಸರು ಮತ್ತು ರಾಷ್ಟ್ರೀಯ ಹೆದ್ದಾರಿ ಗಸ್ತು ತಂಡವು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿತು. ಅಷ್ಟೇ ಅಲ್ಲ ಗ್ರಾಮಸ್ಥರ ನೆರವಿನೊಂದಿಗೆ ಗಾಯಾಳುಗಳನ್ನು ಕಿಶನ್‌ಗಂಜ್ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಮೃತರ ಶವಗಳನ್ನೂ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರಾಜ್‌ಕುಮಾರ್ ಚೌಧರಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
''ಹಸುವನ್ನು ಉಳಿಸುವ ಪ್ರಯತ್ನದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮೃತರ ಶವಗಳನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು'' ಎಂದು ಅವರು ಇದೇ ವೇಳೆ ತಿಳಿಸಿದರು. ಮೃತಪಟ್ಟಿರುವವರನ್ನು ಶಹಾಬಾದ್ ಪ್ರದೇಶದ ರಾಮ್‌ಪುರ ಉಪ್ರೇತಿ ಗ್ರಾಮದ ನಿವಾಸಿಗಳಾದ ಲಖನ್ ಸಹರಿಯಾ, ಫೂಲ್‌ಚಂದ್ ಸಹರಿಯಾ ಮತ್ತು ಹರಿಚಂದ್ ಮೆಹ್ತಾ ಮತ್ತು ಮಧ್ಯಪ್ರದೇಶದ ಫತೇಘರ್ ಪ್ರದೇಶದ ನಿವಾಸಿ ರಾಜು ಸಹರಿಯಾ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಕ್ಷುಲಕ ವಿಚಾರಕ್ಕೆ ಸಹಪಾಠಿ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ 9ನೇ ತರಗತಿ ವಿದ್ಯಾರ್ಥಿ - student attacked his classmate