ಪಲಾಮು: ಜಾರ್ಖಂಡ್‌ನ ಗರ್ಹ್ವಾದ ಭಾವನಾಥಪುರ ಪ್ರದೇಶದಲ್ಲಿ ಅವಮಾನಕರ ಘಟನೆಯೊಂದು ನಡೆದಿದೆ. ಸಾಲ ಪಾವತಿಸದ ಕಾರಣಕ್ಕಾಗಿ ಮಗುವನ್ನು 14 ದಿನಗಳ ಕಾಲ ಒತ್ತೆಯಾಳಾಗಿ ಇರಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಡೀ ಪ್ರಕರಣದಲ್ಲಿ ಕ್ರಮ ಕೈಗೊಂಡಿರುವ ಮೈಕ್ರೋ ಫೈನಾನ್ಸ್ ಕಂಪನಿ, ಆರೋಪಿ ಬ್ಯಾಂಕ್ ಮ್ಯಾನೇಜರ್ನನ್ನು ಅಮಾನತುಗೊಳಿಸಿ ಆದೇಶಿಸಿದೆ. ಅಷ್ಟೇ ಅಲ್ಲ ಇಡೀ ವಿಷಯದ ಬಗ್ಗೆ ಆಂತರಿಕ ತನಿಖೆಯನ್ನೂ ಸಹ ನಡೆಸುತ್ತಿದೆ.
ಕಂಪನಿ ಈ ಘಟನೆ ಬಗ್ಗೆ ಜಾರ್ಖಂಡ್‌ನ ಡಿಜಿಪಿ ಮತ್ತು ಗರ್ವಾ ಎಸ್‌ಪಿ ಅವರಿಗೂ ಪತ್ರ ಬರೆದಿದೆ. ಬ್ಯಾಂಕ್ ಮ್ಯಾನೇಜರ್ ಮಟ್ಟದಲ್ಲಿ ಈ ಘಟನೆ ನಡೆದಿದೆ ಎಂದು ಕಂಪನಿ ಸ್ಪಷ್ಟನೆ ನೀಡಿದೆ. ಏತನ್ಮಧ್ಯೆ CWC ಕೂಡ ಸಂಪೂರ್ಣ ವಿಷಯದ ಬಗ್ಗೆ ಪ್ರತ್ಯೇಕ ತನಿಖೆ ಪ್ರಾರಂಭಿಸಿದೆ. ಆರೋಪಿ ಬ್ಯಾಂಕ್ ಮ್ಯಾನೇಜರ್ ನನ್ನು ಪೊಲೀಸ್ ತಂಡ ವಿಚಾರಣೆಗೆ ಒಳಪಡಿಸಿದೆ.
ವಾಸ್ತವವಾಗಿ, ಗರ್ವಾ ಪ್ರದೇಶದ ಭಾವನಾಥಪುರ ಪ್ರದೇಶದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಯೊಂದರ ಮ್ಯಾನೇಜರ್ ಮತ್ತು ಇತರ ಉದ್ಯೋಗಿಗಳು ಸಾಲವನ್ನು ಮರುಪಾವತಿಸದೇ ಇರುವುದಕ್ಕೆ ಮಗುವನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಒತ್ತೆಯಾಳಾಗಿ ಮಗುವನ್ನು ಇಟ್ಟುಕೊಂಡ ಸಂದರ್ಭದಲ್ಲಿ ಮಗುವಿನ ಕೈಯಿಂದ ಖಾಲಿ ಪಾತ್ರೆಗಳು ಮತ್ತು ಮದ್ಯದ ಬಾಟಲಿಗಳನ್ನು ಎತ್ತುವಂತೆ ಮಾಡಲಾಗಿತ್ತು. ಇದಷ್ಟೇ ಅಲ್ಲ ಮಗುವಿನ ಕಣ್ಣು ಹಾಗೂ ಕಿಡ್ನಿ ಮಾರಾಟ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ. ಈ ಸಂಬಂಧ ದೂರು ಸ್ವೀಕರಿಸಿದ ಪೊಲೀಸರು ಆರೋಪಿ ಬ್ಯಾಂಕ್ ಮ್ಯಾನೇಜರ್ ನನ್ನು ಬಂಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ತಲೆ ತಗ್ಗಿಸುವಂತಹ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗರ್ವಾ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದು, ತನಿಖೆಯ ಜವಾಬ್ದಾರಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ವಹಿಸಲಾಗಿದೆ. ಇಡೀ ಪ್ರಕರಣದಲ್ಲಿ ಕ್ರಮ ಕೈಗೊಂಡಿರುವ ಕಂಪನಿಯು ಆರೋಪಿ ಬ್ಯಾಂಕ್ ಮ್ಯಾನೇಜರ್ ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಅಲ್ಲದೇ ಮ್ಯಾನೇಜರ್ ವಿರುದ್ಧ ಆಂತರಿಕ ವಿಚಾರಣೆ ಸಹ ಪ್ರಾರಂಭಿಸಲಾಗಿದೆ. ಇಲ್ಲಿ ಯಾವುದೇ ವಿಷಯ ನಡೆದರೂ ಅದು ಬ್ಯಾಂಕ್ ಮ್ಯಾನೇಜರ್ ಅವರ ವೈಯಕ್ತಿಕ ಮಟ್ಟದಲ್ಲಿ ನಡೆದಿದೆ ಎಂದು ಕಂಪನಿಯ ಕಾನೂನು ತಂಡವು ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲ ಈ ಸಂಬಂಧ ಆಂತರಿಕೆ ತನಿಖೆಗೂ ಆದೇಶಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ನಿಟ್ಟಿನಿಂದ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದೆ.
ಆಂತರಿಕ ತನಿಖೆ ನಡೆಸಲಾಗುತ್ತಿದೆ: ಪ್ರಸ್ತುತ ಪ್ರಕರಣದಲ್ಲಿ ಸಿಲುಕಿರುವ ಮೈಕ್ರೋ ಫೈನಾನ್ಸ್ ಕಂಪನಿಯು ಆರ್‌ಬಿಐನಲ್ಲಿ ನೋಂದಾಯಿಸಲ್ಪಟ್ಟಿದೆ, ಯಾವುದೇ ವಿಷಯ ನಡೆದರೂ ಬ್ಯಾಂಕ್ ಮ್ಯಾನೇಜರ್‌ನ ವೈಯಕ್ತಿಕ ಮಟ್ಟದಲ್ಲಿ ನಡೆದಿದೆ. ಈ ಸಂಬಂಧ ದೂರು ಸ್ವೀಕರಿಸಿ, ಅಲ್ಲಿನ ವ್ಯವಸ್ಥಾಪಕರನ್ನು ಅಮಾನತುಗೊಳಿಸಲಾಗಿದೆ, ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ಮೈಕ್ರೋ ಫೈನಾನ್ಸ್ ಕಂಪನಿಯ ಕಾನೂನು ತಂಡದ ಸದಸ್ಯ ಅಶ್ವಿನಿ ಕುಮಾರ್ ಪಾರಿಖ್ ಹೇಳಿದ್ದಾರೆ.
ಏನಿದು ಪ್ರಕರಣ?: ಗಢ್ವಾದ ಭಾವನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಯ ರೊಹನಿಯಾ ನಿವಾಸಿ ಮಹಿಳೆಯೊಬ್ಬರು ಮೈಕ್ರೋ ಫೈನಾನ್ಸ್ ಕಂಪನಿಯಿಂದ 40 ಸಾವಿರ ರೂಪಾಯಿ ಸಾಲ ಪಡೆದಿದ್ದರು. 22 ಸಾವಿರ ಠೇವಣಿ ಇಟ್ಟಿದ್ದರು. ಆದರೆ, ಮೈಕ್ರೋ ಫೈನಾನ್ಸ್ ಕಂಪನಿಯ ಮ್ಯಾನೇಜರ್ ನಿಗಮ್ ಯಾದವ್ ಬಾಕಿ ಮೊತ್ತವನ್ನು ಹಿಂತಿರುಗಿಸುವಂತೆ ಮಹಿಳೆಗೆ ನಿರಂತರವಾಗಿ ಒತ್ತಡ ಹೇರುತ್ತಿದ್ದ. ಒಂದು ದಿನ ಕಂಪನಿಯ ಉದ್ಯೋಗಿಗಳು ಮಹಿಳೆಯ ಮನೆಗೆ ಹೋಗಿ ಆಕೆಯ ಮಗನನ್ನು ಕರೆದುಕೊಂಡು ಬಂದರು. ಸುಮಾರು ಎರಡು ವಾರಗಳ ಕಾಲ, ಕಂಪನಿ ಉದ್ಯೋಗಿಗಳು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಈ ವೇಳೆ, ಸಿಬ್ಬಂದಿ ಮಗುವಿನ ಕಣ್ಣು ಹಾಗೂ ಕಿಡ್ನಿ ಮಾರಾಟ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂಬ ಆರೋಪವೂ ಇದೆ.
ಈ ವಿಷಯ ತಿಳಿದ ಸ್ಥಳೀಯ ಗ್ರಾಮಸ್ಥರು ಮತ್ತು ಮಹಿಳೆ ಸಂಪೂರ್ಣ ಪ್ರಕರಣದ ಬಗ್ಗೆ ಗರ್ವಾ ಪೊಲೀಸರಿಗೆ ಮಾಹಿತಿ ನೀಡಿದರು. ಈ ಬಗ್ಗೆ ದೂರು ಸ್ವೀಕರಿಸಿದ ಪೊಲೀಸರು ನಂತರ ಮಗುವನ್ನು ರಕ್ಷಿಸಿದ್ದಾರೆ. ಕೇಸ್ಗೆ ಸಂಬಂಧಿಸಿದಂತೆ ಆರೋಪಿ ಬ್ಯಾಂಕ್ ಮ್ಯಾನೇಜರ್ ನಿಗಮ್ ಯಾದವ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಈ ಸಂಬಂಧ ಪೊಲೀಸರು ಎಲ್ಲಾ ಕಡೆ ತನಿಖೆ ನಡೆಸುತ್ತಿದ್ದಾರೆ. ವಿಶೇಷ ತಂಡವನ್ನು ಕೂಡಾ ರಚಿಸಲಾಗಿದೆ. ಸಂಪೂರ್ಣ ವಿಷಯದ ಬಗ್ಗೆ ಸಿಡಬ್ಲ್ಯೂಸಿಗೆ ಮಾಹಿತಿ ನೀಡಲಾಗಿದೆ, ಸಿಡಬ್ಲ್ಯೂಸಿ ಕೂಡ ಸಂಪೂರ್ಣ ವಿಷಯದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದೆ. - ದೀಪಕ್ ಕುಮಾರ್ ಪಾಂಡೆ, ಗರ್ವಾ ಎಸ್‌ಪಿ.
ಇದನ್ನು ಓದಿ: ರಸ್ತೆ ಮೇಲೆ ನಮಾಜ್ ಮಾಡುತ್ತಿದ್ದ ವ್ಯಕ್ತಿಗೆ ಥಳಿಸಿದ ಪೊಲೀಸ್ ಅಮಾನತು