ETV Bharat / bharat

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಮುಂದಿನ ಜನವರಿಗೆ 1 ವರ್ಷ; ಸಂಭ್ರಮಾಚರಣೆಗೆ ಅಯೋಧ್ಯೆಯಲ್ಲಿ ಸಿದ್ಧತೆ - RAM PRANA PRATISHTHA ANNIVERSARY

ಜನವರಿ 11ನ್ನು ಶ್ರೀರಾಮನ ಪ್ರತಿಷ್ಠಾನಾ ದ್ವಾದಶಿ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ.

Ayodhya Ram Temple Prana Pratishtha Anniversary Program will start from 11th January
ಶ್ರೀ ರಾಮಲಲ್ಲಾ ವಿಗ್ರಹ (Photo- ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್)
author img

By ETV Bharat Karnataka Team

Published : Dec 13, 2024, 9:37 PM IST

ಅಯೋಧ್ಯೆ(ಉತ್ತರ ಪ್ರದೇಶ): ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಟಾಪನೆ ಮಾಡಿ 2025ಕ್ಕೆ ಒಂದು ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಜನವರಿಯ ದ್ವಾದಶಿಯಂದು ಸಂಭ್ರಮಾಚರಣೆಗೆ ಸಿದ್ಧತೆ ನಡೆಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​​ನ ಪ್ರಧಾನ ಕಾರ್ಯದರ್ಶಿ ಚಂಪತ್​ ರೈ, "ಪ್ರಾಣ ಪ್ರತಿಷ್ಟಾಪನೆ ನಡೆಸಿದ ದಿನ ಜನವರಿ 11ರಂದು ಪುಷ್ಯಾ ಶುಕ್ಲಾ ಪ್ರಾಣ ಪ್ರತಿಷ್ಟಾಪನೆ ದಿನ ಬರುತ್ತದೆ. ವಿವಾಹ ಪಂಚಮಿ, ಮೌನಿ ಅಮವಾಸ್ಯೆ, ಶಿವರಾತ್ರಿ ಅಮವಾಸ್ಯೆ, ಏಕಾದಶಿ ಆಚರಣೆ ಮಾಡುವಂತೆ ಈ ದಿನವನ್ನೂ ಕೂಡ ಹಿಂದೂ ಸಂಪ್ರದಾಯದಲ್ಲಿ ಆಚರಿಸಲಾಗುವುದು" ಎಂದರು.

"ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮೂರು ದಿನ ಕಾರ್ಯಕ್ರಮ ಆಯೋಜಿಸಲಾಗಿದೆ. ಜನವರಿ 11 ಅನ್ನು ಪ್ರತಿಷ್ಠಾಪನಾ ದ್ವಾದಶಿ ಎಂಬ ಹೆಸರಿನಲ್ಲಿ ಆಚರಣೆ ಮಾಡಲಾಗುವುದು. ನಿಗದಿತ ಸಮಯದಲ್ಲಿ ದೇಗುಲದ ಸಂಪೂರ್ಣ ನಿರ್ಮಾಣ ಕಾರ್ಯ ಮುಗಿಯಲಿದೆ. ರಾಮ ಜನ್ಮಭೂಮಿ ಸಂಕೀರ್ಣದಲ್ಲಿ 18 ಇತರೆ ದೇಗುಲಗಳನ್ನು ನಿರ್ಮಿಸಲಾಗುತ್ತಿದೆ. ದೇಗುಲದ ಸುತ್ತ ಒಂದಾದ ಬಳಿಕ ಒಂದು ದೇಗುಲ ನಿರ್ಮಾಣವಾಗುತ್ತದೆ" ಎಂದು ಮಾಹಿತಿ ನೀಡಿದರು.

"ಮಾಘ ಮೇಳದ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಲಿದ್ದು, ಎಲ್ಲಾ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಮತ್ತು ಭದ್ರತಾ ಅಧಿಕಾರಿಗಳು ಈ ಕುರಿತು ಸಭೆ ನಡೆಸಿದ್ದು ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ" ಎಂದರು.

ಇದನ್ನೂ ಓದಿ: ಪ್ರಯಾಗ್‌ರಾಜ್ ಮಹಾಕುಂಭ ಮೇಳ: ಸಾಧುವಿನ ಶಿರದಲ್ಲಿ 45 ಕೆ.ಜಿ ತೂಕದ ರುದ್ರಾಕ್ಷಿ ಜಪಮಾಲೆಯ ಕಿರೀಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.