ETV Bharat / bharat

ಹರಿಯಾಣ ವಿಧಾನಸಭೆ ಚುನಾವಣೆ: ಜೆಜೆಪಿ ನಾಯಕ ದುಶ್ಯಂತ್​​​​​ ಚೌಟಾಲಾ ಕಾರಿನ ಮೇಲೆ ಕಲ್ಲುತೂರಾಟ - Attack On Dushyant Chautala

Attack On Dushyant Chautala Chandrashekhar: ಸೋಮವಾರ ತಡರಾತ್ರಿ ಉಚಾನಾದಲ್ಲಿ ದುಷ್ಯಂತ್ ಚೌಟಾಲಾ ಮತ್ತು ಆಜಾದ್ ಸಮಾಜ ಪಕ್ಷದ ಅಧ್ಯಕ್ಷ ಚಂದ್ರಶೇಖರ್ ಅವರ ಬೆಂಗಾವಲು ವಾಹನದ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ.

attack-on-dushyant-chautala-chandrashekhar-convoy
ಹರಿಯಾಣ ವಿಧಾನಸಭೆ ಚುನಾವಣೆ: ಜೆಜೆಪಿ ನಾಯಕ ದುಶ್ಯಂತ್​​​​​ ಔಟಾಲಾ ಕಾರಿನ ಮೇಲೆ ಕಲ್ಲುತೂರಾಟ (ETV Bharat)
author img

By ETV Bharat Karnataka Team

Published : Oct 1, 2024, 10:41 AM IST

ಜಿಂದ್, ಹರಿಯಾಣ: ಉಚಾನಾದಲ್ಲಿ ದುಶ್ಯಂತ್ ಚೌಟಾಲಾ ಮತ್ತು ಆಜಾದ್ ಸಮಾಜ ಪಕ್ಷದ ಅಧ್ಯಕ್ಷ ಚಂದ್ರಶೇಖರ್ ಅವರ ಬೆಂಗಾವಲು ವಾಹನದ ಮೇಲೆ ಕೆಲವರು ದಾಳಿ ಮಾಡಿದ್ದಾರೆ. ಚುನಾವಣಾ ಪ್ರಚಾರದ ನಿಮಿತ್ತ ಇಬ್ಬರೂ ನಾಯಕರು ಉಚಾನಾದಲ್ಲಿ ರೋಡ್ ಶೋ ನಡೆಸುತ್ತಿದ್ದರು. ಏಕಾಏಕಿ ಕೆಲ ಯುವಕರು ಅವರ ಕಾರಿಗೆ ಕಲ್ಲು ತೂರಿದ್ದಾರೆ. ಈ ದಾಳಿಯಿಂದಾಗಿ ಇವರ ಕಾರು ಕೆಟ್ಟು ನಿಂತಿತ್ತು.

ಆದರೆ ದಾಳಿಯಲ್ಲಿ ದುಷ್ಯಂತ್ ಚೌಟಾಲಾ ಮತ್ತು ಚಂದ್ರಶೇಖರ್‌ಗೆ ಯಾವುದೇ ಗಾಯವಾಗಿಲ್ಲ. ಈ ಘಟನೆಯ ಬಳಿಕ ಮಾಜಿ ಉಪಮುಖ್ಯಮಂತ್ರಿ ದುಶ್ಯಂತ್ ಚೌಟಾಲಾ ಅವರು ಸ್ಥಳದಲ್ಲಿದ್ದ ಪೊಲೀಸರ ಕಾರ್ಯವೈಖರಿ ವಿರುದ್ಧ ಅಸಮಾದಾನ ವ್ಯಕ್ತಪಡಿಸಿದರು. ದಾಳಿಕೋರರನ್ನು ಒಂದು ಗಂಟೆಯೊಳಗೆ ಬಂಧಿಸುವಂತೆ ಪೊಲೀಸರಿಗೆ ಆಗ್ರಹಿಸಿದರು.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜನನಾಯಕ್ ಜನತಾ ಪಕ್ಷ ಮತ್ತು ಆಜಾದ್ ಸಮಾಜ ಪಕ್ಷದ ನಡುವೆ ಮೈತ್ರಿ ಆಗಿದ್ದು, ಉಭಯ ಪಕ್ಷಗಳು ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್​ ಪಕ್ಷಗಳನ್ನು ಎದುರಿಸುತ್ತಿವೆ. ಜಿಂದ್ ಜಿಲ್ಲೆಯ ಉಚಾನಾ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ತಡರಾತ್ರಿ ಎರಡೂ ಪಕ್ಷಗಳ ನಾಯಕರು ರೋಡ್ ಶೋ ನಡೆಸುವ ಮೂಲಕ ಪ್ರಚಾರ ನಡೆಸುತ್ತಿದ್ದರು. ಏಕಾಏಕಿ ಯುವಕರು ಅವರ ಕಾರುಗಳ ಮೇಲೆ ಕಲ್ಲು ತೂರಾಟ ಆರಂಭಿಸಿದರು. ಇದರಿಂದ ಅವರ ಕಾರಿನ ಗಾಜು ಒಡೆದಿದೆ. ಅದೃಷ್ಟವಶಾತ್ ದುಷ್ಯಂತ್ ಚೌಟಾಲಾ ಮತ್ತು ಚಂದ್ರಶೇಖರ್ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಈ ಘಟನೆ ಈಗ ಪಕ್ಷಗಳ ನಡುವೆ ಮಾತಿನ ಸಮರಕ್ಕೂ ಕಾರಣವಾಗಿದೆ.

ಹರಿಯಾಣದಲ್ಲಿ ಈಗ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಅಕ್ಟೋಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನು ಓದಿ: ಶರನ್ನವರಾತ್ರಿಯಲ್ಲಿ ಅಮ್ಮನ ಹೊಸ ರೂಪಗಳೇನು?: ಯಾವ ದಿನ ಯಾವ ನೈವೇದ್ಯ ಮಾಡಬೇಕು? - DEVI NAVARATRI AVATARS 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.