ETV Bharat / bharat

ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆತಿಶಿ ಆಯ್ಕೆ - Atishi Next CM Of Delhi - ATISHI NEXT CM OF DELHI

ಅರವಿಂದ್​ ಕೇಜ್ರಿವಾಲ್​ ಅವರ ನಿಷ್ಠರಾಗಿರುವ ಆತಿಶಿ ಅವರಿಗೆ ದೆಹಲಿ ಸಿಎಂ ಸ್ಥಾನ ಒಲಿದು ಬಂದಿದೆ. ಇಂದು ನಡೆದ ಆಮ್ ಆದ್ಮಿ ಪಕ್ಷದ ಶಾಸಕಾಂಗ ಸಭೆಯಲ್ಲಿ ಆತಿಶಿ ಅವರನ್ನು ಒಮ್ಮತದಿಂದ ಸಿಎಂ ಹುದ್ದೆಗೆ ಆಯ್ಕೆ ಮಾಡಲಾಯಿತು.

atishi-to-be-new-cm-of-delhi
ಆತಿಶಿ (ANI)
author img

By PTI

Published : Sep 17, 2024, 12:11 PM IST

Updated : Sep 17, 2024, 12:42 PM IST

ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಆತಿಶಿ ಆಯ್ಕೆಯಾಗಿದ್ದಾರೆ. ಅರವಿಂದ್​ ಕೇಜ್ರಿವಾಲ್​ ಉತ್ತರಾಧಿಕಾರಿಯಾಗಿ ಆತಿಶಿ ಅವರನ್ನು ಇಂದು ನಡೆದ ಪಕ್ಷದ ಶಾಸಕಾಂಗ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ದೆಹಲಿ ಸರ್ಕಾರದ ಏಕೈಕ ಮಹಿಳಾ ಸಚಿವೆಯಾಗಿರುವ ಆತಿಶಿ, ಕೇಜ್ರಿವಾಲ್ ಅವರ ಆಪ್ತ ಮತ್ತು ನಂಬಿಕಸ್ಥ ಬಳಗದಲ್ಲಿ ಗುರುತಿಸಿಕೊಂಡವರು. ಶಿಕ್ಷಣ, ಇಂಧನ, ಪಿಡಬ್ಲೂಡಿ ಸೇರಿದಂತೆ ಹಲವು ಪ್ರಬಲ ಖಾತೆಗಳನ್ನು ಇವರು ಹೊಂದಿದ್ದಾರೆ.

ಮೂಲಗಳ ಪ್ರಕಾರ, ಸೋಮವಾರ ರಾತ್ರಿ ಕೇಜ್ರಿವಾಲ್​ ನಿವಾಸದಲ್ಲಿ ನಡೆದ ಎಎಪಿಯ ರಾಜಕೀಯ ವ್ಯವಹಾರ ಸಮಿತಿ (ಪ್ಯಾಕ್​) ಸಭೆಯಲ್ಲಿ ಆತಿಶಿ ಹೆಸರು ಪ್ರಸ್ತಾಪಿಸಲಾಗಿದ್ದು, ಪಕ್ಷದ ಸದಸ್ಯರು ಸಹಮತ ಸೂಚಿಸಿದ್ದರು.

ಅಬಕಾರಿ ನೀತಿ ಹಗರಣದಲ್ಲಿ ಸಿಲುಕಿ ಷರತ್ತುಬದ್ದ ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಬಿಡುಗಡೆಯಾಗಿರುವ ಕೇಜ್ರಿವಾಲ್ ಶುಕ್ರವಾರ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಘೋಷಿಸಿದ್ದರು. ಬಳಿಕ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಂದು ಸಿಎಂ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.

ಇಂದು ಸಂಜೆ ಅವರು ಲೆಫ್ಟಿನೆಂಟ್ ಗವರ್ನರ್‌ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡಲಿದ್ದಾರೆ ಎಂದು ಎಎಪಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ: 'ಕೇಜ್ರಿವಾಲ್ ಮಂಗಳವಾರ ರಾಜೀನಾಮೆ ನೀಡುವುದು ಖಚಿತ': ದೆಹಲಿ ಆರೋಗ್ಯ ಸಚಿವ ಭಾರದ್ವಾಜ್ ಸ್ಪಷ್ಟನೆ

Last Updated : Sep 17, 2024, 12:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.