ETV Bharat / bharat

ಅಸ್ಸೋಂ ಬಾಂಬ್​ ಸ್ಫೋಟ ಸಂಚು ಪ್ರಕರಣ: ಸುಳಿವು ನೀಡಿದವರಿಗೆ ₹5 ಲಕ್ಷ ಬಹುಮಾನ ಘೋಷಣೆ - Assam Police announce cash reward

author img

By PTI

Published : Aug 17, 2024, 11:03 AM IST

ಸ್ವಾತಂತ್ರ್ಯ ದಿನಾಚರಣೆಯಂದು ಅಸ್ಸೋಂನ ವಿವಿಧೆಡೆ ಬಾಂಬ್​ ಸ್ಪೋಟಿಸುವ ಸಂಚು ರೂಪಿಸಲಾಗಿತ್ತು. ಇದರ ತನಿಖೆ ಕುರಿತಂತೆ ಅಲ್ಲಿನ ಡಿಜಿಪಿ ಜಿಪಿ ಸಿಂಗ್​ ಮಾಹಿತಿ ಹಂಚಿಕೊಂಡಿದ್ದಾರೆ.

assam-police-announce-cash-reward-of-up-to-rs-5-lakh-for-information-on-ied-like-devices
ಬಾಂಬ್​ ಶೋಧದಲ್ಲಿ ನಿರತರಾದ ಪೊಲೀಸರು (ETV Bharat)

ಗುವಾಹಟಿ (ಅಸ್ಸೋಂ): ಅಸ್ಸೋಂನಲ್ಲಿ ನಿಷೇಧಿತ ಸಂಘಟನೆ ಉಲ್ಫಾ(ಐ) ಐಇಡಿ ಮಾದರಿಯ ಸಾಧನಗಳ ಉತ್ಪಾದನೆ, ಸಾಗಣೆ ಅಥವಾ ಎಲ್ಲಾದರೂ ಸ್ಫೋಟಕ್ಕೆ ಇಡುವ ಕುರಿತು ವಿಶ್ವಾಸಾರ್ಹ ಮಾಹಿತಿ ಇದ್ದರೆ, ಅದನ್ನು ಹಂಚಿಕೊಂಡವರಿಗೆ 5 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು ಎಂದು ಅಲ್ಲಿನ ಪೊಲೀಸರು ಘೋಷಣೆ ಮಾಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯಂದು ಅಸ್ಸೋಂನ 24 ಸ್ಥಳಗಳಲ್ಲಿ ಬಾಂಬ್​ ಸ್ಪೋಟಿಸುವ ಸಂಚು ರೂಪಿಸಲಾಗಿತ್ತು. ಆದರೆ, ತಾಂತ್ರಿಕ ಕಾರಣದಿಂದ ಈ ಕಾರ್ಯಾಚರಣೆ ವಿಫಲವಾಯಿತು ಎಂದು ಉಲ್ಫಾ ತಿಳಿಸಿತ್ತು. ಜೊತೆಗೆ, ಬಾಂಬ್​ ಇರಿಸಿದ 19 ಸ್ಥಳಗಳ ಮಾಹಿತಿಯನ್ನು ಹಂಚಿಕೊಂಡು, ಅವುಗಳನ್ನು ನಿಷ್ಕ್ರಿಯಗೊಳಿಸುವಂತೆ ಸಾರ್ವಜನಿಕರಿಗೆ ತಿಳಿಸಿತ್ತು. ಐದು ಸ್ಥಳಗಳಲ್ಲಿನ ಬಾಂಬ್​ಗಳ ಪತ್ತೆ ಕಾರ್ಯ ಇನ್ನೂ ಸಾಗಿದೆ.

ಈ ಪ್ರಕರಣವನ್ನು ಭೇದಿಸುವ ವಿಶ್ವಾಸವನ್ನು ಪೊಲೀಸರು ಹೊಂದಿದ್ದು, ವಿವಿಧ ಅಧಿಕಾರಿಗಳಿಗೆ ಈ ತನಿಖಾ ಜವಾಬ್ದಾರಿ ವಹಿಸಲಾಗಿದೆ. ಶುಕ್ರವಾರ ಗುವಾಹಟಿಯಲ್ಲಿ ಐಇಡಿ ಮಾದರಿಯ ಎರಡು ಸಾಧನಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲಿ ಐಇಡಿ ಬಾಂಬ್​ ಮಾದರಿಯ ಒಟ್ಟು 10 ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಲಂಖೀಪುರ್​ನಲ್ಲಿ ಸ್ಫೋಟಕ ಪತ್ತೆ ಕಾರ್ಯಾಚರಣೆ ಸಂದರ್ಭದಲ್ಲಿ ಅಪ್ರಾಪ್ತನನ್ನು ವಶಕ್ಕೆ ಪಡೆಯಲಾಗಿದೆ.

ಪ್ರಕರಣ ಸಂಬಂಧ ಮಾತನಾಡಿರುವ ಡಿಜಿಪಿ ಜಿಪಿ ಸಿಂಗ್​, ಗುವಾಹಟಿ ನಗರ, ವಿಶೇಷ ಶಾಖೆ, ಸಿಐಡಿ ಮತ್ತು ಇತರ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇವೆ. ತನಿಖೆಯ ಸ್ವರೂಪ ಕುರಿತು ಚರ್ಚೆ ನಡೆಸಲಾಗಿದ್ದು, ಈ ಪ್ರಕಾರ ಅನುಸರಣೆ ಮಾಡಲಾಗುವುದು. ಈ ಸಂಬಂಧ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಗುವಾಹಟಿಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ತನಿಖಾಧಿಕಾರಿಗಳು ವಿಶೇಷ ತನಿಖಾ ತಂಡದೊಂದಿಗೆ (ಎಸ್‌ಐಟಿ) ಸಮನ್ವಯ ಸಾಧಿಸಲಿದ್ದಾರೆ. ನಗರದ ಪೊಲೀಸ್​ ಆಯುಕ್ತರ ಅಡಿ ಕೆಲಸ ಮಾಡಲಾಗುವುದು ಎಂದರು.

ಇದೇ ವೇಳೆ ಬಹುಮಾನದ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಐಇಡಿ ತರಹದ ಸಾಧನಗಳನ್ನು ತಯಾರಿಸಿದವರು, ಸಾಗಿಸಿದವರು ಮತ್ತು ವಿವಿಧ ಸ್ಥಳಗಳಲ್ಲಿ ಇಡುವ ಕುರಿತು ಯಾವುದಾದರೂ ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ನೀಡಿದರೆ 5 ಲಕ್ಷ ರೂ.ವರೆಗೆ ನಗದು ಬಹುಮಾನ ನೀಡುತ್ತೇವೆ ಎಂದು ತಿಳಿಸಿದರು.

ಶನಿವಾರ ಕೂಡ ಡಿಜಿ ಮತ್ತು ಎಸ್​ಟಿಎಫ್​ ಅಸ್ಸಾಂನ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ, ಕಾರ್ಯಾಚರಣೆಯ ಸಿದ್ಧತೆಯನ್ನು ಪರಿಶೀಲಿಸುತ್ತಾರೆ. ಈ ಪ್ರಕರಣವನ್ನು ಭೇದಿಸುತ್ತೇವೆಂದು ಶೇಕಡಾ 100ರಷ್ಟು ಖಾತ್ರಿ ಇದೆ. ಶಾಂತಿ ಕದಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಇದನ್ನೂ ಓದಿ: ಅಸ್ಸೋಂನ 19 ಸ್ಥಳದಲ್ಲಿ ಬಾಂಬ್ ದಾಳಿಗೆ ಸಂಚು​; ತಾಂತ್ರಿಕ ಕಾರಣದಿಂದ ತಪ್ಪಿತು ದುರಂತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.