ನವದೆಹಲಿ: ಮಹಾರಾಷ್ಟ್ರ ಸಿಎಂ ಸ್ಥಾನ ಕುರಿತು ಬಿಜೆಪಿ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಶಿವಸೇನೆ ಬದ್ಧವಾಗಿರುತ್ತದೆ. ಮಹಾಯುತಿ ಕೂಟದ ನಿರ್ಧಾರಕ್ಕೆ ಫೂರ್ಣ ಬೆಂಬಲ ನೀಡಲಾಗುವುದು ಎಂದು ಹಂಗಾಮಿ ಉಸ್ತುವಾಗಿ ಸಿಎಂ ಏಕನಾಥ್ ಶಿಂಧೆ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಆಯ್ಕೆ ನಿರ್ಧಾರವನ್ನು ಬಿಜೆಪಿ ಹೈಕಮಾಂಡ್ಗೆ ಬಿಡಲಾಗಿದೆ. ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಶಿವಸೇನೆ ಅದನ್ನು ಸ್ವಾಗತಿಸುತ್ತದೆ. ಯಾವುದೇ ವಿರೋಧ ಇರುವುದಿಲ್ಲ ಎಂದು ಹೇಳಿದರು.
ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೇ ವೇಳೆ ಏಕನಾಥ್ ಶಿಂಧೆ ಕೃತಜ್ಞತೆ ಸಲ್ಲಿಸಿದರು. ರಾಜ್ಯದ ಅಭಿವೃದ್ಧಿಗಾಗಿ ಎನ್‌ಡಿಎ (ಮಹಾಯುತಿ) ಶ್ರಮಿಸಿದೆ. ಕೂಟದ ನಾಯಕ ಯಾರೇ ಆದರೂ ಶಿವಸೇನೆ ಬೆಂಬಲಿಸುತ್ತದೆ ಎಂದು ಶಿಂದೆ ಹೇಳಿದರು.
ಇದನ್ನೂ ಓದಿ: ಮಹಾರಾಷ್ಟ್ರ ಸಿಎಂ ಪಟ್ಟಕ್ಕಾಗಿ ಶಿಂದೆ v/s ಫಡ್ನವೀಸ್ ಫೈಟ್: ಬಿಹಾರ ಮಾದರಿಗೆ ಶಿವಸೇನೆ ಪಟ್ಟು, ನಿರಾಕರಿಸಿದ ಬಿಜೆಪಿ