ETV Bharat / bharat

ಅಧಿಕ ಇಳುವರಿ, ಪೌಷ್ಠಿಕಾಂಶ ನೀಡುವ 109 ಪ್ರಭೇದಗಳ ಬೀಜ ಬಿಡುಗಡೆ ಮಾಡಿದ ಪ್ರಧಾನಿ ಮೋದಿ - seeds unveiled by PM Modi - SEEDS UNVEILED BY PM MODI

ಪ್ರಧಾನಿ ನರೇಂದ್ರ ಮೋದಿ ಅವರು 109 ಹೊಸ ಪ್ರಭೇದಗಳ ಬೀಜಗಳನ್ನು ಬಿಡುಗಡೆ ಮಾಡಿದರು.

109 ಬೀಜಗಳ ಬಿಡುಗಡೆ ಮಾಡಿದ ಪ್ರಧಾನಿ ಮೋದಿ
109 ಬೀಜಗಳ ಬಿಡುಗಡೆ ಮಾಡಿದ ಪ್ರಧಾನಿ ಮೋದಿ (ANI)
author img

By ANI

Published : Aug 11, 2024, 4:03 PM IST

ನವದೆಹಲಿ: ಅಧಿಕ ಇಳುವರಿ ಮತ್ತು ಪೌಷ್ಠಿಕಾಂಶ ಹೆಚ್ಚಿಸಬಲ್ಲ 109 ಹೊಸ ಪ್ರಭೇದಗಳ ಬೀಜಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಿಡುಗಡೆ ಮಾಡಿದರು. ಈ ಬೀಜಗಳನ್ನು ದೇಶದ ವಿವಿಧ ವಾತಾವರಣಗಳಲ್ಲಿ ಜೈವಿಕ ಬಲವರ್ಧಿತ ಒಣ ಬೇಸಾಯ ಮತ್ತು ತೋಟಗಾರಿಕೆ ಬೆಳೆಗಳಾಗಿ ಬೆಳೆಯಬಹುದಾಗಿದೆ.

ಇಲ್ಲಿನ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಕೃಷಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಪ್ರಧಾನಿ ಮೋದಿ, ಬಳಿಕ ಪ್ರಯೋಗಾಲಯದಲ್ಲಿ ಪಾಸಾಗಿ ರೈತರಿಗೆ ಅನುಕೂಲವಾಗುವ ಉತ್ಕೃಷ್ಟ ಬೀಜಗಳನ್ನು ಬಿಡುಗಡೆ ಮಾಡಿದರು. ಈ ಬೀಜಗಳಿಂದ ಬೆಳೆಯ ಉತ್ಪಾದನೆ ಹೆಚ್ಚಾಗಲಿದೆ. ಇದರಿಂದ ರೈತರ ಆದಾಯವೂ ವೃದ್ಧಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹೊಸ ಬೀಜಗಳ ಬಗ್ಗೆ ಮಾಹಿತಿ: ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ಕೃಷಿ ಉತ್ಪಾದಕತೆ ಹೆಚ್ಚಿಸುವ ಪ್ರಯತ್ನಗಳಲ್ಲಿ ಈ ಹೊಸ ಪ್ರಭೇದಗಳು ಸಹಕಾರಿಯಾಗಿವೆ ಎಂದು ಭಾರತೀಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತಿಳಿಸಿದರು. ಇದೇ ವೇಳೆ ರೈತರು ಮತ್ತು ಕೃಷಿ ವಿಜ್ಞಾನಿಗಳ ಜೊತೆಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಕೃಷಿಯಲ್ಲಿ ಹೊಸ ಪ್ರಭೇದಗಳ ಆವಿಷ್ಕಾರ ರೈತರ ವೆಚ್ಚವನ್ನು ಕಡಿಮೆ ಮಾಡುವುದಲ್ಲದೆ ಪರಿಸರದ ಮೇಲೆ ಹೇಗೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಚರ್ಚಿಸಿದರು.

ರೈತರಿಗೆ ಪ್ರಧಾನಿ ಮೋದಿ ಅವರು ರಾಗಿ ಬೆಳೆಯ ಮಹತ್ವವನ್ನು ಹೇಳಿದರು. ಹೆಚ್ಚು ಪೌಷ್ಠಿಕಾಂಶದ ಆಹಾರ ಬೆಳೆಗಳನ್ನು ಬೆಳೆಯುವಂತೆ ಸಲಹೆ ನೀಡಿದರು. ನೈಸರ್ಗಿಕ ಕೃಷಿಯ ಪ್ರಯೋಜನಗಳನ್ನು ಮತ್ತು ಸಾವಯವ ಕೃಷಿ ಪದ್ಧತಿಯಲ್ಲಿ ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಜ್ಞಾನದ ಬಗ್ಗೆಯೂ ಅವರು ಇದೇ ವೇಳೆ ವಿವರಿಸಿದರು.

ಯಾವೆಲ್ಲಾ ಬೆಳೆಗಳ ಬೀಜ ಬಿಡುಗಡೆ: ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಸಿಎಆರ್​) ಅಭಿವೃದ್ಧಿಪಡಿಸಿರುವ ಹೊಸ ಪ್ರಭೇದಗಳಲ್ಲಿ 34 ಧಾನ್ಯಗಳು ಮತ್ತು 27 ತೋಟಗಾರಿಕಾ ಬೆಳೆಗಳು ಇವೆ. ಇದರಲ್ಲಿ ಬೇಳೆ ಕಾಳುಗಳು, ಧಾನ್ಯಗಳು, ಎಣ್ಣೆ ಕಾಳುಗಳು, ಕಬ್ಬು, ಹತ್ತಿ ಮೇವು, ಹಲವು ವಿವಿಧ ಹಣ್ಣುಗಳು, ತರಕಾರಿ, ಹೂ, ಮಸಾಲೆ ಪದಾರ್ಥಗಳು, ಔಷಧಿ ಸಸ್ಯ, ಗೆಡ್ಡೆ ಸಂಬಂಧಿತ ಬೆಳೆಗಳು, ತೋಟಗಾರಿಕಾ ಬೆಳೆಗಳ ಬೀಜಗಳು ಇವೆ. ಪ್ರಧಾನಿ ನರೇಂದ್ರ ಮೋದಿ ಅವರು 2014 ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಮೇಲೆ ಸುಸ್ಥಿರ ಬೇಸಾಯ ಮತ್ತು ಹವಾಮಾನ ವೈಪರೀತ್ಯಗಳನ್ನು ತಡೆಯಬಲ್ಲ ಕೃಷಿ ವಿಧಾನಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ.

ಇದನ್ನೂ ಓದಿ: ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ತಿಮೋರ್ ಅತ್ಯುನ್ನತ ನಾಗರಿಕ ಗೌರವ: ಪ್ರಧಾನಿ ಮೋದಿ ಅಭಿನಂದನೆ - Timor Leste highest honour

ETV Bharat Logo

Copyright © 2025 Ushodaya Enterprises Pvt. Ltd., All Rights Reserved.