ETV Bharat / bharat

ಅರುಣಾಚಲ ಪ್ರದೇಶದ ಬಗ್ಗೆ ಚೀನಾ ಮತ್ತೆ ಕ್ಯಾತೆ; ಭಾರತದಿಂದ ಸ್ಪಷ್ಟ ಸಂದೇಶ ರವಾನೆ - Arunchal Pradesh

ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ. ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಮೂಲಸೌಕರ್ಯ ಯೋಜನೆಗಳಿಂದ ಅಲ್ಲಿನ ಜನರು ಪ್ರಯೋಜನ ಪಡೆಯುವುದನ್ನು ಮುಂದುವರಿಸುತ್ತಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯವು ಚೀನಾಗೆ ಸ್ಪಷ್ಟ ಸಂದೇಶ ರವಾನಿಸಿದೆ.

arunachal-was-is-will-always-be-integral-and-inalienable-part-of-india-mea-hits-back-at-china
ಅರುಣಾಚಲ ಪ್ರದೇಶದ ಬಗ್ಗೆ ಚೀನಾ ಮತ್ತೆ ಕ್ಯಾತೆ; ಭಾರತದಿಂದ ಸ್ಪಷ್ಟ ಸಂದೇಶ ರವಾನೆ
author img

By ETV Bharat Karnataka Team

Published : Mar 19, 2024, 3:46 PM IST

ನವದೆಹಲಿ: ಅರುಣಾಚಲ ಪ್ರದೇಶದ ಕುರಿತಂತೆ ಚೀನಾದ ರಕ್ಷಣಾ ಸಚಿವಾಲಯದ ಹೇಳಿಕೆಗೆ ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಈ ವಿಷಯದಲ್ಲಿ ಚೀನಾವು ಆಧಾರರಹಿತ ವಾದಗಳನ್ನು ಪುನರಾವರ್ತಿಸುವುದರಿಂದ ಅಂತಹ ಹಕ್ಕುಗಳಿಗೆ ಯಾವುದೇ ಮಾನ್ಯತೆ ಇಲ್ಲ ಎಂದು ವಿದೇಶಾಂಗ ಸಚಿವಾಲಯ ತಿರುಗೇಟು ನೀಡಿದೆ.

ಇತ್ತೀಚೆಗೆ ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ಜಾಂಗ್ ಕ್ಸಿಯೋಗಾಂಗ್, 'ಝಂಗ್ನಾನ್' (ದಕ್ಷಿಣ ಟಿಬೆಟ್​) ಚೀನಾದ ಅಂತರ್ಗತ ಪ್ರದೇಶವಾಗಿದೆ. 'ಅರುಣಾಚಲ ಪ್ರದೇಶ' ಎಂದು ಕರೆಯಲ್ಪಡುವ ಈ ಪ್ರದೇಶದಲ್ಲಿ ಭಾರತದ ಅಕ್ರಮ ಸ್ಥಾಪನೆಯನ್ನು ಚೀನಾ ಎಂದಿಗೂ ಒಪ್ಪುವುದಿಲ್ಲ. ಇದನ್ನು ದೃಢವಾಗಿ ವಿರೋಧಿಸುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ಭಾರತದ ಕ್ರಮಗಳು ಗಡಿ ಪರಿಸ್ಥಿತಿಯನ್ನು ಸರಾಗಗೊಳಿಸುವ ಎರಡೂ ಕಡೆಯ ಪ್ರಯತ್ನಗಳಿಗೆ ವಿರುದ್ಧವಾಗಿವೆ. ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳಲು ಅನುಕೂಲಕರವಾಗಿಲ್ಲ. ಗಡಿ ಪ್ರಶ್ನೆಯನ್ನು ಜಟಿಲಗೊಳಿಸುವ ಯಾವುದೇ ಕ್ರಮವನ್ನು ನಿಲ್ಲಿಸಲು ಮತ್ತು ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಶ್ರದ್ಧೆಯಿಂದ ಕಾಪಾಡಿಕೊಳ್ಳಲು ನಾವು ಭಾರತದಿಂದ ಬಯಸುತ್ತೇವೆ ಎಂದು ಚೀನಾ ವಕ್ತಾರರು ಕ್ಯಾತೆ ತೆಗೆದಿದ್ದಾರೆ.

ಅಷ್ಟೇ ಅಲ್ಲ, ಚೀನಾದ ಸೇನೆಯು ಹೆಚ್ಚು ಜಾಗರೂಕವಾಗಿದೆ. ರಾಷ್ಟ್ರೀಯ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ದೃಢವಾಗಿ ರಕ್ಷಿಸುತ್ತದೆ ಎಂದು ಹೇಳಿದ್ದಾರೆ. ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ಕ್ಸಿಯೋಗಾಂಗ್ ನೀಡಿರುವ ಈ ಹೇಳಿಕೆಗೆ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಂಗಳವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

''ಭಾರತದ ಅರುಣಾಚಲ ಪ್ರದೇಶದ ಭೂಪ್ರದೇಶದ ಬಗ್ಗೆ ಚೀನಾ ರಕ್ಷಣಾ ಸಚಿವಾಲಯದ ವಕ್ತಾರರು ಅಸಂಬದ್ಧ ಹಕ್ಕುಗಳನ್ನು ಮುಂದಿಡುವ ಹೇಳಿಕೆಗಳನ್ನು ನಾವು ಗಮನಿಸಿದ್ದೇವೆ. ಈ ವಿಷಯದಲ್ಲಿ ಆಧಾರರಹಿತ ವಾದಗಳನ್ನು ಪುನರಾವರ್ತನೆ ಮಾಡುವುದರಿಂದ ಅಂತಹ ಹಕ್ಕುಗಳಿಗೆ ಯಾವುದೇ ಮಾನ್ಯತೆಯನ್ನು ನೀಡುವುದಿಲ್ಲ. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಅಂಗವಾಗಿದೆ. ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಮೂಲಸೌಕರ್ಯ ಯೋಜನೆಗಳಿಂದ ಅಲ್ಲಿನ ಜನರು ಪ್ರಯೋಜನ ಪಡೆಯುವುದನ್ನು ಮುಂದುವರಿಸುತ್ತಾರೆ'' ಎಂದು ರಣಧೀರ್ ಜೈಸ್ವಾಲ್ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಪ್ರಧಾನಿ ಮೋದಿ ಅರುಣಾಚಲ ಪ್ರದೇಶಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು. ಇದಕ್ಕೆ ಚೀನಾದ ವಿದೇಶಾಂಗ ಸಚಿವಾಲಯವು ಭಾರತದೊಂದಿಗೆ ರಾಜತಾಂತ್ರಿಕ ಪ್ರತಿಭಟನೆಯನ್ನು ದಾಖಲಿಸಿತ್ತು. ಭಾರತದ ಈ ಕ್ರಮವು ಗಡಿ ಸಮಸ್ಯೆಯನ್ನು ಸಂಕೀರ್ಣಗೊಳಿಸುತ್ತದೆ. ಚೀನಾದ 'ಝಂಗ್ನಾನ್' ಪ್ರದೇಶವನ್ನು ನಿರಂಕುಶವಾಗಿ ಅಭಿವೃದ್ಧಿಪಡಿಸುವ ಹಕ್ಕು ಭಾರತಕ್ಕೆ ಇಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದರು. ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದು ಪ್ರತಿಪಾದಿಸುವ ಚೀನಾ ತನ್ನ ಭಾಷೆಯಲ್ಲಿ 'ಝಂಗ್ನಾನ್' ಎಂದು ಕರೆಯುತ್ತದೆ.

ಇದನ್ನೂ ಓದಿ: ಅರುಣಾಚಲ, ಸಿಕ್ಕಿಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಜೂನ್ 2ಕ್ಕೆ: ದಿನಾಂಕ ಬದಲಿಸಿದ್ದೇಕೆ ಗೊತ್ತೇ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.