ETV Bharat / bharat

ದೆಹಲಿ ವಾಯುಮಾಲಿನ್ಯ ತಡೆಗೆ ಕೃತಕ ಮಳೆ: ಮೋಡಬಿತ್ತನೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ ಬರೆದ ದಿಲ್ಲಿ ಸರ್ಕಾರ - DELHI POLLUTION

ಮೋಡ ಬಿತ್ತನೆಗೆ ಅನುಮತಿ ನೀಡುವಂತೆ ದೆಹಲಿ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ.

ದೆಹಲಿಯಲ್ಲಿನ ವಾಯುಮಾಲಿನ್ಯ
ದೆಹಲಿಯಲ್ಲಿನ ವಾಯುಮಾಲಿನ್ಯ (IANS)
author img

By PTI

Published : Nov 19, 2024, 4:00 PM IST

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಕೃತಕ ಮಳೆ ತರಿಸಲು ಮೋಡ ಬಿತ್ತನೆಗೆ ತುರ್ತು ಅನುಮತಿ ನೀಡುವಂತೆ ಕೋರಿ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರಿಗೆ ನಾಲ್ಕು ಬಾರಿ ಪತ್ರ ಬರೆದಿರುವುದಾಗಿ ದಿಲ್ಲಿ ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ. ಕೃತಕ ಮಳೆಯಿಂದ ದೆಹಲಿಯಲ್ಲಿನ ತೀವ್ರ ವಾಯುಮಾಲಿನ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮೋಡ ಬಿತ್ತನೆಗೆ ಅನುಮತಿ ಕೋರಿರುವುದಾಗಿ ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಒತ್ತಾಯ: ದೆಹಲಿಯ ಹದಗೆಡುತ್ತಿರುವ ಗಾಳಿಯ ಗುಣಮಟ್ಟ ನಿರಂತರವಾಗಿ 450 ಕ್ಕಿಂತ ಹೆಚ್ಚಿನ ಎಕ್ಯೂಐನಲ್ಲಿ ಮುಂದುವರೆದಿದ್ದು, ಗಾಳಿಯ ಗುಣಮಟ್ಟವು "ತೀವ್ರ ಕಳಪೆ ಪ್ಲಸ್" ವರ್ಗಕ್ಕೆ ಇಳಿದಿರುವ ಮಧ್ಯೆ ಕೇಂದ್ರ ಸರ್ಕಾರವು ಈ ವಿಷಯದಲ್ಲಿ ತಕ್ಷಣವೇ ಮಧ್ಯಪ್ರವೇಶ ಮಾಡಬೇಕು ಎಂದು ಪರಿಸರ ಸಚಿವ ಗೋಪಾಲ್ ರೈ ಮಂಗಳವಾರ ಒತ್ತಾಯಿಸಿದ್ದಾರೆ.

"ಆಗಸ್ಟ್ 30, ಅಕ್ಟೋಬರ್ 10 ಮತ್ತು ಅಕ್ಟೋಬರ್ 23 ರಂದು ಪತ್ರಗಳ ಮೂಲಕ ಪದೇ ಪದೆ ವಿನಂತಿಸಿದರೂ, ಕೇಂದ್ರ ಪರಿಸರ ಸಚಿವರಿಗೆ ಪರಿಸ್ಥಿತಿಯ ಅರಿವಾಗಿಲ್ಲ ಅಥವಾ ಅವರು ದೆಹಲಿ ಸರ್ಕಾರದ ಮನವಿಗಳಿಗೆ ಸ್ಪಂದಿಸಿಲ್ಲ" ಎಂದು ರೈ ತಮ್ಮ ಇತ್ತೀಚಿನ ಪತ್ರದಲ್ಲಿ ತಿಳಿಸಿದ್ದಾರೆ.

ಮಳೆಯಿಂದ ಮಾತ್ರ ತಕ್ಷಣಕ್ಕೆ ಹೊಗೆ ನಿಯಂತ್ರಣ ಸಾಧ್ಯ?: ಅಪಾಯಕಾರಿ ಮಟ್ಟದ ಮಾಲಿನ್ಯವನ್ನು ನಿಭಾಯಿಸಲು ಗ್ರ್ಯಾಪ್ -4 (GRAP-IV) ನಿರ್ಬಂಧಗಳನ್ನು ಜಾರಿಗೆ ತರಲಾಗುತ್ತಿದ್ದರೂ, ನಗರವನ್ನು ಆವರಿಸಿರುವ ದಟ್ಟವಾದ ಹೊಗೆ ಪದರವನ್ನು ಗಾಳಿ ಅಥವಾ ಮಳೆಯಿಂದ ಮಾತ್ರ ನಿವಾರಿಸಬಹುದು ಎಂದು ರೈ ಹೇಳಿದರು.

ಮೋಡ ಬಿತ್ತನೆಯ ಮೂಲಕ ಕೃತಕ ಮಳೆ ಸುರಿಸುವುದು ಸದ್ಯ ತಕ್ಷಣದಲ್ಲೇ ಕೈಗೊಳ್ಳಬಹುದಾದಂಥ ಪರಿಹಾರ ಕ್ರಮವಾಗಿದ್ದು, ಇದಕ್ಕೆ ದೆಹಲಿ ಸರ್ಕಾರವು ಧನಸಹಾಯ ನೀಡಲು ಸಿದ್ಧವಾಗಿದೆ. ಆದರೆ, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ಗೃಹ ಸಚಿವಾಲಯ (ಎಂಎಚ್ಎ) ಮತ್ತು ರಕ್ಷಣಾ ಸಚಿವಾಲಯದಂತಹ ಪ್ರಮುಖ ಕೇಂದ್ರ ಸರ್ಕಾರದ ಸಂಸ್ಥೆಗಳಿಂದ ಅನುಮತಿಗಳಿಲ್ಲದೆ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಹೊಗೆ ಪದರ ತೊಡೆದು ಹಾಕದೇ ಮಾಲಿನ್ಯ ತೊಡೆದು ಹಾಕುವುದು ಅಸಾಧ್ಯ: "ನಾವು ಹೊಗೆಯ ಪದರವನ್ನು ತೊಡೆದು ಹಾಕದ ಹೊರತು ದೆಹಲಿ ಮಾಲಿನ್ಯದಿಂದ ಪರಿಹಾರ ಪಡೆಯಲು ಸಾಧ್ಯವಿಲ್ಲ. ಮೋಡ ಬಿತ್ತನೆಯು ಬಿಕ್ಕಟ್ಟನ್ನು ತಗ್ಗಿಸಲು ಮತ್ತು ನಾಗರಿಕರಿಗೆ ತಕ್ಷಣದ ಪರಿಹಾರವನ್ನು ನೀಡಲು ಸಹಾಯ ಮಾಡುತ್ತದೆ" ಎಂದು ರೈ ನುಡಿದರು.

ತುರ್ತು ಮಾಲಿನ್ಯ ನಿಯಂತ್ರಣ ಕ್ರಮವಾಗಿ ಮೋಡ ಬಿತ್ತನೆ ಮಾಡಲು ದೆಹಲಿ ಸರ್ಕಾರ ಕಳೆದ ವರ್ಷ ಐಐಟಿ ಕಾನ್ಪುರದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಆದರೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಗದ ಕಾರಣದಿಂದ ಈ ಕಾರ್ಯಯೋಜನೆ ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ : ಮುಸ್ಲಿಂ ಮತದಾರರ ಬುರ್ಖಾ ತೆಗೆಯುವುದನ್ನು ನಿರ್ಬಂಧಿಸಿ: ಚು. ಆಯೋಗಕ್ಕೆ ಎಸ್​ಪಿ ಮುಖ್ಯಸ್ಥರ ಪತ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.