ETV Bharat / bharat

ಸೇನೆಗೆ ಮತ್ತಷ್ಟು ಬಲ ತುಂಬುವ ನಿರ್ಧಾರ, ವಿದೇಶದಿಂದಲೂ ಕಾರ್ಯ ನಿರ್ವಹಿಸಬಲ್ಲ ಡ್ರೋನ್​ ಕಂಡು ಹಿಡಿದ ಯುವಕ - Drone Operation System

ಗುಜರಾತ್​ನ ವಿದ್ಯಾರ್ಥಿಯೊಬ್ಬನ ವಿನೂತನ ಕಲ್ಪನೆ ಭಾರತೀಯ ಭದ್ರತಾ ಪಡೆಗಳಿಗೆ ಬಲ ನೀಡುವ ಕೆಲಸ ಮಾಡಿದೆ. ಅರ್ಥಾ ಚೌಧರಿ ಅವರು ಸಾವಿರಾರು ಕಿಮೀ ದೂರದಿಂದಲೂ ಡ್ರೋನ್‌ಗಳನ್ನು ನಿರ್ವಹಿಸುವ ವ್ಯವಸ್ಥೆ ರಚಿಸಿದ್ದಾರೆ. ಈ ತಂತ್ರಜ್ಞಾನವನ್ನು ಹೇಗೆ ರಚಿಸಲಾಗಿದೆ ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯೋಣ.

Intercountry Drone Operation System  Artha Chaudhary  The Galvan incident
ವಿದೇಶದಿಂದಲೂ ಕಾರ್ಯ ನಿರ್ವಹಿಸಬಲ್ಲ ಡ್ರೋನ್​ ಕಂಡು ಹಿಡಿದ ಯುವಕ
author img

By ETV Bharat Karnataka Team

Published : Mar 16, 2024, 4:47 PM IST

ಸೂರತ್​ (ಗುಜರಾತ್​): ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಚಕಮಕಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರನ್ನು ನೋಡಿದ ಸೂರತ್‌ನ ವಿದ್ಯಾರ್ಥಿಯೊಬ್ಬ ಸೇನೆಗೆ ಹೆಚ್ಚಿನ ಬಲ ನೀಡುಬೇಕು ಎಂದು ನಿರ್ಧರಿಸಿದ್ದ. ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಅರ್ಥಾ ಚೌಧರಿ, ಸ್ಟಾರ್ಟ್​​ಅಪ್​​ವೊಂದನ್ನು​​ ಸ್ಥಾಪಿಸಿ ಕಣ್ಗಾವಲು ಮತ್ತು ಗಸ್ತು ತಿರುಗಲು ಸಾವಿರಾರು ಕಿಲೋಮೀಟರ್ ದೂರದಿಂದಲೇ ಡ್ರೋನ್‌ಗಳನ್ನು ಹಾರಿಸುವ ವ್ಯವಸ್ಥೆಯೊಂದನ್ನು ರಚಿಸಿದ್ದಾನೆ. ಅಂದ್ರೆ ಆತ ರೆಡಿ ಮಾಡಿರುವ ಡ್ರೋನ್ 7000 ಕಿ.ಮೀ ದೂರದಿಂದಲೇ ಕಾರ್ಯ ನಿರ್ವಹಿಸುತ್ತದೆ. ಪ್ರಸ್ತುತ ಓಮನ್, ನೆದರ್ಲ್ಯಾಂಡ್ಸ್ ಮತ್ತು ಬೆಂಗಳೂರಿನಲ್ಲಿ ಕುಳಿತಿರುವ ಜನರಿಂದ ಈ ಸಿಸ್ಟಮ್​ ಮೂಲಕ ಸೂರತ್‌ನಲ್ಲಿ ಡ್ರೋನ್‌ಗಳನ್ನು ನಿರ್ವಹಿಸಬಹುದಾಗಿದೆ.

ಸೂರತ್‌ನ ಉದ್ಯಮಿ ಅರ್ಥಾ ಚೌಧರಿ: ಅರ್ಥಾ ಚೌಧರಿ ಕೇವಲ 24 ವರ್ಷ. ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನ ಎರಡನೇ ವರ್ಷದಲ್ಲಿದ್ದಾಗ ಗಾಲ್ವಾನ್‌ನಲ್ಲಿ ಚೀನಾ ಮತ್ತು ಭಾರತೀಯ ಸೈನಿಕರ ನಡುವಿನ ಘರ್ಷಣೆ ಮತ್ತು ಭಾರತೀಯ ಸೈನಿಕರ ಹುತಾತ್ಮತೆ ಬಗ್ಗೆ ಓದಿದ್ದರು. ಭದ್ರತಾ ಪಡೆಗಳಿಗೆ ತಾಂತ್ರಿಕವಾಗಿ ಅನುಕೂಲ ಕಲ್ಪಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು ಮತ್ತು ಗಾಲ್ವಾನ್ ಘಾಟಿಯಂತಹ ಘಟನೆಗಳು ಭವಿಷ್ಯದಲ್ಲಿ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅರ್ಥಾ ಯೋಚಿಸಿದ್ದರು.

ಇಂಟರ್‌ಕಂಟ್ರಿ ಡ್ರೋನ್ ಆಪರೇಷನ್ ಸಿಸ್ಟಮ್: ಅರ್ಥಾ ಚೌಧರಿ ಅವರು ಇಲ್ಲಿನ ಡ್ರೋನ್‌ಗಳನ್ನು ಬೇರೆ ದೇಶದಿಂದ ಮತ್ತು ವಿದೇಶಿ ಡ್ರೋನ್‌ಗಳನ್ನು ನಮ್ಮ ದೇಶದಿಂದ ನಿರ್ವಹಿಸುವ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದಾರೆ. ಈ ಇಂಟರ್‌ಕಂಟ್ರಿ ಡ್ರೋನ್ ಆಪರೇಷನ್ ಸಿಸ್ಟಮ್ ಮೂಲಕ, ಪ್ರಸ್ತುತ ಸೂರತ್‌ನಲ್ಲಿರುವ ಡ್ರೋನ್‌ಗಳು ಬೆಂಗಳೂರು, ಓಮನ್ ಮತ್ತು ನೆದರ್‌ಲ್ಯಾಂಡ್‌ನಲ್ಲಿ ನಿಯಂತ್ರಿಸುವ ಮೂಲಕ ಈ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದಾರೆ. ಈ ವ್ಯವಸ್ಥೆ ಮೂಲಕ, ಗಡಿ ಪ್ರದೇಶಗಳಂತಹ ಸ್ಥಳಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳ ಮೇಲೆ ಕಣ್ಗಾವಲು, ತಪಾಸಣೆ, ಪ್ರದೇಶದ ಚಿತ್ರಣ ಮತ್ತು ಟ್ರ್ಯಾಕಿಂಗ್ ಸಹ ಮಾಡಬಹುದಾಗಿದೆ.

ಮೂರು ವರ್ಷಗಳ ಶ್ರಮ: ಈ ಇಂಟರ್ ಕಂಟ್ರಿ ಡ್ರೋನ್ ಆಪರೇಷನ್ ಸಿಸ್ಟಂ ಅಭಿವೃದ್ಧಿಪಡಿಸಲು ಅರ್ಥಾ ಚೌಧರಿ ಅವರ ತಂಡ ಕಳೆದ 3 ವರ್ಷಗಳಿಂದ ಶ್ರಮಿಸುತ್ತಿದೆ. ಇದಕ್ಕಾಗಿ ಅವರು ಸುಮಾರು 2 ಕೋಟಿ ಖರ್ಚು ಮಾಡಿದ್ದಾರೆ. ಸೂರತ್‌ನಲ್ಲಿ 7 ಸಾವಿರ ಕಿಮೀ ದೂರದಲ್ಲಿರುವ ನಿಯಂತ್ರಣ ವ್ಯವಸ್ಥೆಯಿಂದ ಡ್ರೋನ್‌ಗಳನ್ನ ಚಾಲನೆಗೊಳಿಸಬಹುದಾಗಿದೆ.

ಗಾಲ್ವಾನ್ ಘಟನೆ ಕಲ್ಪನೆ ನೀಡಿತು: ಗಾಲ್ವಾನ್ ಘಟನೆಯ ನಂತರ ನಾವು ಈ ಸ್ಟಾರ್ಟಪ್ ಯೋಜನೆ ಪ್ರಾರಂಭಿಸಿದ್ದೇವೆ. ಈ ಸಿಸ್ಟಂ ಮೂಲಕ ನಾವು ಯಾವುದೇ ಭದ್ರತಾ ಪಡೆಗಳೊಂದಿಗೆ ಅವರ ಅವಶ್ಯಕತೆಗಳಿಗೆ ಅನುಗುಣವಾಗಿ ವಿವಿಧ ರೀತಿಯ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತೇವೆ. ನಾನು ಎರಡನೇ ವರ್ಷದಲ್ಲಿದ್ದಾಗ ಗಾಲ್ವಾನ್ ಘಟನೆ ನಡೆದಿತ್ತು. ಚೀನಾ ಇದೇ ವ್ಯವಸ್ಥೆಯನ್ನು ಬಳಸಿತು. ಅಂದಿನಿಂದ ನಾನು ಈ ದಿಕ್ಕಿನಲ್ಲಿ ಯೋಚಿಸಲು ಪ್ರಾರಂಭಿಸಿದೆ ಎನ್ನುತ್ತಾರೆ ಅರ್ಥ ಚೌದರಿ.

7 ಸಾವಿರ ಕಿಮೀ ದೂರದಿಂದ ಕಾರ್ಯಾಚರಣೆ : ಎದುರಾಳಿಗಳ ಡ್ರೋನ್‌ಗಳನ್ನು ಟ್ರ್ಯಾಕ್ ಮಾಡಲು ಸಾಧ್ಯವಾದರೆ ಸಂಭವಿಸಬಹುದಾದ ದಾಳಿಯನ್ನು ನಾವು ನಿಲ್ಲಿಸಬಹುದು ಎಂದು ನಾನು ಅರಿತುಕೊಂಡೆ. ನಂತರ ಈ ವ್ಯವಸ್ಥೆಯ ಅಭಿವೃದ್ಧಿ ಪ್ರಾರಂಭವಾಯಿತು. ಈ ವ್ಯವಸ್ಥೆಯನ್ನು ಬೇರೆ ದೇಶದಲ್ಲಿ ಪರೀಕ್ಷಿಸುವ ಮುಖ್ಯ ಉದ್ದೇಶ ಎಂದರೆ ಈ ಡ್ರೋನ್ ಅನ್ನು ನಮ್ಮ ದೇಶದಲ್ಲಿ ಎಲ್ಲಿಂದಾದರೂ ಹಾರಿಸಬಹುದೇ ಎಂದು ತಿಳಿಯುವುದಾಗಿತ್ತು. ಈಗ ಡ್ರೋನ್‌ಗಳನ್ನು ಕಣ್ಗಾವಲು ಮತ್ತು ಗಸ್ತು ತಿರುಗುವಿಕೆಗಾಗಿ ಸಾವಿರಾರು ಕಿಲೋಮೀಟರ್‌ಗಳಿಂದ ನಿರ್ವಹಿಸಬಹುದಾಗಿದೆ.

ಡ್ರೋನ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ?: ಮೊಬೈಲ್‌ಗಳು, ಕಂಪ್ಯೂಟರ್‌ಗಳು ಮತ್ತು ಐಪ್ಯಾಡ್‌ಗಳಂತಹ ನಿಯಂತ್ರಕ ಸಾಧನಗಳಲ್ಲಿ ಸ್ಥಾಪಿಸಬಹುದಾದ ಮತ್ತು ಕಾರ್ಯನಿರ್ವಹಿಸಬಹುದಾದ ಇದರ ಸಿಸ್ಟಂ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಮೂಲಕ ಡ್ರೋನ್ ಅನ್ನು ನಿಯಂತ್ರಿಸಲಾಗುತ್ತದೆ. ಈ ಸಿಸ್ಟಂ ಮೂಲಕ ಡ್ರೋನ್ ಅನ್ನು ಎಷ್ಟೇ ದೂರದಲ್ಲಿದ್ದರೂ ಕಾರ್ಯನಿರ್ವಹಿಸಲು 4G ಅಥವಾ 5G ನೆಟ್‌ವರ್ಕ್‌ಗೆ ಸಂಪರ್ಕಿಸಬೇಕು. ಆಗ ಯಾರು ಬೇಕಾದರೂ ಈ ಡ್ರೋನ್ ಅನ್ನು ಎಲ್ಲಿಂದ ಬೇಕಾದರೂ ಸುಲಭವಾಗಿ ಹಾರಿಸಬಹುದಾಗಿದೆ.

ಓದಿ: ಜನನ, ಮರಣ ಉಪನೋಂದಣಾಧಿಕಾರಿಗಳಾಗಿ ಗ್ರಾ.ಪಂ ಕಾರ್ಯದರ್ಶಿಗಳನ್ನು ನೇಮಿಸಿ ಸರ್ಕಾರ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.