ETV Bharat / bharat

ಶ್ರೀನಗರದಲ್ಲಿ ನಾಲ್ವರು ಜೈಶ್ ಇ ಮೊಹಮ್ಮದ್‌ ಉಗ್ರರ ಬಂಧನ, ಶಸ್ತ್ರಾಸ್ತ್ರ ವಶಕ್ಕೆ - JeM Terror Module

ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್​ (ಜೆಇಎಂ)ನೊಂದಿಗೆ ಸಂಬಂಧ ಹೊಂದಿದ್ದ ನಾಲ್ವರು ಭಯೋತ್ಪಾದಕರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.

ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು
ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು
author img

By ETV Bharat Karnataka Team

Published : Mar 24, 2024, 1:07 PM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶನಿವಾರ ರಾತ್ರಿ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್​ (ಜೆಇಎಂ) ಜತೆ ಸಂಬಂಧ ಹೊಂದಿದ್ದ ನಾಲ್ವರು ಉಗ್ರರನ್ನು ಬಂಧಿಸಿದ್ದಾರೆ.

ಪೊಲೀಸರ ಹೇಳಿಕೆಯ ಪ್ರಕಾರ, ಶ್ರೀನಗರ ಪೊಲೀಸರ​ ಜತೆಗೆ ರಾಷ್ಟ್ರೀಯ ರೈಫಲ್ಸ್​​, ವ್ಯಾಲಿ QRT (Quick Reaction Team) ಮತ್ತು ಸಿಆರ್​ಪಿಎಫ್​ ಸಿಬ್ಬಂದಿ ಒಳಗೊಂಡ ಜಂಟಿ ಮೊಬೈಲ್​ ವಾಹನ ಚೆಕ್​ ಪೋಸ್ಟ್​ (MVCP) ಶನಿವಾರ ಸಂಜೆ ನೌಗಾಮ್​ ವ್ಯಾಪ್ತಿಯಲ್ಲಿರುವ ಕೆನಿಹಮಾ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದೆ.

ಈ ಸಂದರ್ಭದಲ್ಲಿ ಬಿಳಿ ಬಣ್ಣದ ಆಲ್ಟೊ ವಾಹನದ ಮೇಲೆ ಅನುಮಾನ ಮೂಡಿದ್ದು, ಪೊಲೀಸ್​ ತಂಡ ಕಾರು ತಡೆದಿದೆ. ವಾಹನದಲ್ಲಿದ್ದವರನ್ನು ಮೊಹಮ್ಮದ್ ಯಾಸೀನ್ ಭಟ್, ಶೆರಾಜ್ ಅಹ್ಮದ್​​ ರಾಥರ್, ಗುಲಾಮ್ ಹಸನ್ ಖಾಂಡೆ ಮತ್ತು ಇಮ್ತಿಯಾಜ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ. ಈ ನಾಲ್ವರು ಶ್ರೀನಗರ ಮತ್ತು ಸುತ್ತಮುತ್ತಲಿನ ವಿವಿಧ ಪ್ರದೇಶಗಳ ನಿವಾಸಿಗಳಾಗಿದ್ದಾರೆ.

ಬಂಧಿತರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂರು ಮ್ಯಾಗಜೀನ್‌ಗಳಿರುವ ಎಕೆ 56 ರೈಫಲ್​, 7.62 x 39 ಎಂಎಂ ಮದ್ದುಗುಂಡುಗಳ 75 ಸುತ್ತುಗಳು, ಎರಡು ಮ್ಯಾಗಜೀನ್‌ಗಳೊಂದಿಗೆ ಗ್ಲೋಕ್ ಪಿಸ್ತೂಲ್, 9 ಎಂಎಂ ಮದ್ದುಗುಂಡುಗಳ 26 ಸುತ್ತುಗಳು ಮತ್ತು ಆರು ಚೈನೀಸ್ ಗ್ರೆನೇಡ್‌ಗಳನ್ನು ಜಪ್ತಿ ಮಾಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ನಿಷೇಧಿತ ಸಂಘಟನೆ ಜೆಎಂ ಜೊತೆ ಆರೋಪಿಗಳು ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳ ವಿರುದ್ಧ ಪೊಲೀಸರು ಭಾರತೀಯ ದಂಡಸಂಹಿತೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಸೆಕ್ಷನ್ 18, 23, 39(ಎಫ್‌ಐಆರ್ ನಂ.31/2024), ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್​ 7/25 ಮತ್ತು 120 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಐಸಿಸ್‌ ಉಗ್ರ ಸಂಘಟನೆ ಸೇರ ಹೊರಟ IIT ಗುವಾಹಟಿ ವಿದ್ಯಾರ್ಥಿ ಪೊಲೀಸ್‌ ವಶಕ್ಕೆ - IIT Guwahati Student

ETV Bharat Logo

Copyright © 2024 Ushodaya Enterprises Pvt. Ltd., All Rights Reserved.