ಹೈದರಾಬಾದ್: ಸುಂದರ ಬದುಕಿನಲ್ಲಿ ಭವಿಷ್ಯದ ಬಗ್ಗೆ ಅಪಾರ ಕನಸು ಕಂಡಿದ್ದ ಆಕೆ ಆ ಒಂದು ಘಟನೆಯಿಂದ ಬದಲಾಯಿತು. ಅಪಘಾತದಲ್ಲಿ ಕಾಲು ಕಳೆದುಕೊಂಡ ಆಕೆ ಮಾನಸಿಕವಾಗಿ ಜರ್ಜರಿತಳಾದಳು. ಆಕೆಯ ಆಸೆ, ಬದುಕು ಮುಗಿಯಿತು ಎಂದರು ಹಲವರು. ಆದರೆ, ಅರ್ಪಿತಾ ರಾಯ್ ಈ ಕಷ್ಟದ ಸಮಯವನ್ನು ಮೆಟ್ಟಿನಿಂತು, ಆತ್ಮವಿಶ್ವಾಸದ ಬದುಕು ಕಟ್ಟಿಕೊಂಡಳು. ಕೃತಕ ಕಾಲುಗಳ ಸಹಾಯದಿಂದ ಯೋಗಾಭ್ಯಾಸ ಆರಂಭಿಸಿದ ಅರ್ಪಿತಾ ಇದೀಗ ಅನೇಕ ಮಂದಿಗೆ ಯೋಗ ಶಿಕ್ಷಕಿಯಾಗಿದ್ದಾರೆ. ತಮ್ಮ ಈ ಸ್ಪೂರ್ತಿದಾಯಕ ಪ್ರಯಾಣದ ಬಗ್ಗೆ ಈಟಿವಿ ಭಾರತ್ ಜೊತೆ ಮಾತು ಹಂಚಿಕೊಂಡಿದ್ದಾರೆ.
ಕಾಲು ನೆನೆಯದೇ ಸಾಗರ ದಾಟಲು ಸಾಧ್ಯವಿಲ್ಲ ಎಂಬಂತೆ ನಾನು ಕಣ್ಣೀರು ಹಾಕದೇ ಜೀವನ ನಡೆಸಲು ಸಾಧ್ಯವಿಲ್ಲ. ಪ್ರಯಾಣ ಕಠಿಣವಾಗಿದೆ ಎಂದ ಮಾತ್ರಕ್ಕೆ ಅದನ್ನು ನಿಲ್ಲಿಸಬಾರದು ಅಲ್ಲವೇ? ಅಪಘಾತ ನನ್ನ ಜೀವನ ತಲೆಕೆಳಗೆ ಮಾಡಿದರೂ ನಾನು ನನ್ನ ಆತ್ಮವಿಶ್ವಾಸ ಬಿಡಲಿಲ್ಲ. ನನ್ನ ಕಾಲೂ ಕಳೆದುಕೊಂಡರೂ ನಾನು ಎದ್ದು ನಿಂತೆ. ಯೋಗ ಶಿಕ್ಷಕಿಯಾಗುವತ್ತ ಸಾಗಿ, ಅನೇಕರಿಗೆ ಸ್ಪೂರ್ತಿಯಾಗಿದ್ದೇನೆ ಎಂದು ಮಿಂಚು ಹೊಳೆಯುವಂತೆ ಮಾತನಾಡುತ್ತಾರೆ ಅರ್ಪಿತಾ.
ಕಣ್ಣೀರಾದೆ: ಅರ್ಪಿತಾ ಮೂಲತಃ ಕೋಲ್ಕತ್ತಾದಿಂದ 30 ಕಿ.ಮೀ ದೂರದ ಬ್ಯಾರಕ್ಪುರದವರು. 2006ರ ಏಪ್ರಿಲ್ 21ರ ಸಂಜೆ ಮನೆಗೆ ಸಾಮಗ್ರಿ ತೆಗೆದುಕೊಳ್ಳಲು ನನ್ನ ಸ್ನೇಹಿತೆಯ ಗಾಡಿಯಲ್ಲಿ ತೆರಳುತ್ತಿದ್ದಾಗ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆಯಿತು. ಇದರಿಂದ ನಾನು ರಸ್ತೆ ಮೇಲೆ ಬಿದ್ದೆ. ಈ ವೇಳೆ ಬಂದ ಲಾರಿ ನನ್ನ ಎರಡು ಕಾರಿನ ಮೇಲೆ ಹರಿದು, ಕಾಲನ್ನು ನಜ್ಜುಗುಜ್ಜಾಗಿಸಿತು. ತಕ್ಷಣಕ್ಕೆ ನನ್ನನ್ನು ಸ್ಥಳೀಯ ಜನರಲ್ ಆಸ್ಪತ್ರೆಗೆ ದಾಖಲಿಸಿದರು. ಎರಡು ಕಾಲಿಗೂ ಆಪರೇಷನ್ ನಡೆದು, ಲಕ್ಷಾಂತರ ರೂ. ಖರ್ಚಾಯಿತು. ನನ್ನ ಸಹೋದರ ನನಗಿಂತ ಒಂದು ವರ್ಷ ದೊಡ್ಡವನಾಗಿದ್ದು, ಆತನೇ ನನ್ನ ಕುಟುಂಬಕ್ಕೆ ಆಧಾರ. ಆತ ಕಷ್ಟಪಟ್ಟು ದುಡಿದರೂ ನನ್ನ ಚಿಕಿತ್ಸೆಗೆ ಹಣ ವ್ಯವಸ್ಥೆ ಮಾಡಲು ಕಷ್ಟವಾಯಿತು. ಅಪಘಾತ ನಡೆದ 12ನೇ ದಿನಕ್ಕೆ ಗ್ಯಾಂಗರಿನ್ ಸೋಂಕು ಶೇ 8 ರಷ್ಟು ಕಾಲಿನಲ್ಲಿ ಹರಡಿತು. ಇದರಿಂದ ಮೊಣಕಾಲಿನಿಂದ ಕೆಳಗೆ ಕಾಲನ್ನು ತೆಗೆದರು. ಈ ವಿಚಾರ ತಿಳಿದು ನಾನು ಕುಸಿದು ಕಣ್ಣೀರು ಹಾಕಿದೆ. ಆದರೆ, ಬೇರೆ ಮಾರ್ಗ ನನಗೆ ಇಲ್ಲ ಎಂಬುದು ಅರ್ಥೈಸಿಕೊಂಡೆ. ನಾಲ್ಕು ತಿಂಗಳ ಬಳಿಕ ನಾನು ಆಸ್ಪತ್ರೆಯಿಂದ ಬಿಡುಗಡೆಗೊಂಡೆ.
ಯಾರ ಮೇಲೆ ಅವಲಂಬಿತರಾಗದಂತೆ ನಿಶ್ಚಯ: ಎಲ್ಲ ಹುಡುಗಿಯರಂತೆ ನಾನು ಕೂಡ ಮಾಡೆಲ್ ಅಥವಾ ಗಗನ ಸಖಿ ಆಗಬೇಕು ಎಂದು ಕನಸು ಕಂಡೆ. ಆದರೆ, ಆ ಅಪಘಾತ ನನ್ನ ದಿಕ್ಕು ಬದಲಾಯಿತು. ಇದು ನೋವುದಾಯಕವಾಗುವ ಜೊತೆಗೆ ನಾನು ನನ್ನ ಕುಟುಂಬಕ್ಕೆ ಹೊರೆ ಆದೆ. ಇದೆಲ್ಲವೂ ನನಗೆ ಬೇಸರ ಮೂಡಿಸಿತು. ಹಲವು ವರ್ಷ ಕೂತ ಕಣ್ಣೀರು ಹಾಕಿದೆ. ಬಳಿಕ ನಿಜ ಸ್ಥಿತಿಯನ್ನು ಅರ್ಥೈಸಿಕೊಳ್ಳಲು ಮುಂದಾದೆ. ದೇಹಕ್ಕೆ ಆಗುವ ಅನಾಹುತ ತಪ್ಪಿಸಲು ನಿತ್ಯ ಒಂದು ಗಂಟೆ ಎದ್ದು ನಿಲ್ಲುವಂತೆ ವೈದ್ಯರು ಸೂಚಿಸಿದರು. ಕಷ್ಟವಾದರೂ ನಾನು ಅದನ್ನು ಪ್ರಯತ್ನಿಸಿ, ಸಾಮಾನ್ಯ ಮನುಷ್ಯಳಂತೆ ಆಗಲು ಮುಂದಾದೆ. ವೀಲ್ಚೇರ್ ಅವಲಂಬಿಸಿ, ಕಾಲ್ ಸೆಂಟರ್ ಉದ್ಯೋಗಕ್ಕೆ ಸೇರಿದೆ. ಬೇರೆಯವರ ಮೇಲೆ ಅವಲಂಬಿತವಾಗದು ಇಷ್ಟವಾಗದೇ, ನನ್ನ ದೇಹವನ್ನು ನಾನು ಹಿಡಿತ ಸಾಧಿಸಿದೆ. ಕೃತಕ ಕಾಲು ಜೋಡಿಸಿಕೊಂಡು ಯೋಗ ಕಲಿಯಲು ಮುಂದಾದೆ. ಅದು ನನಗೆ ಸಹಾಯಕವಾಯಿತು.
ಫೋಟೋದಲ್ಲಿ ಕಾಲು ಕಾಣುವುದಿಲ್ಲ: ಯಾವುದೇ ಕೆಲಸಕ್ಕೂ ಪ್ರಯತ್ನ ಬೇಕೇ ಬೇಕು. ಇದೇ ಕಾರಣಕ್ಕೆ ಆರಂಭದಲ್ಲಿ ಸಣ್ಣದಾಗಿ ಆಸನ ಆರಂಭಿಸಿ, ಬಳಿಕ ಕಷ್ಟದ ಆಸನ ಪ್ರಯತ್ನಿಸಿದೆ. ಕೆಲವು ಆಸಗಳು ಸಾಮಾನ್ಯರಿಗೂ ಕಷ್ಟವಾಗುತ್ತದೆ. ಅಂತಹ ಆಸನಗಳಲ್ಲಿ ನಾನು ನಿಪುಣೆಯಾದಾಗ ಎಲ್ಲರೂ ಬೆರಗುಗಣ್ಣಿನಿಂದ ನೋಡಿದರು. ನಾನು ಸಡಿಲ ಪ್ಯಾಂಟ್ ಧರಿಸಿ ಯೋಗ ಮಾಡುವ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಾಕಲು ಶುರು ಮಾಡಿದೆ. ಇದರಿಂದ ನನ್ನ ಕಾಲು ಕಾಣಿಸುತ್ತಿರಲಿಲ್ಲ. ನನ್ನನ್ನು ನಾನು ಸ್ವೀಕರಿಸಿ, ಇಷ್ಟಪಡಲು ಮುಂದಾದೆ. ವ್ಯಕ್ತವಾಗುತ್ತಿದ್ದ ಶ್ಲಾಘನೆಗಳು ಕೂಡ ನನಗೆ ಉತ್ಸಾಹ ನೀಡಿತು. ಇದರಿಂದ ಬೇರೆಯವರಿಗೂ ಯೋಗ ಕಲಿಸಬಹುದು ಎಂದು ಕೋರ್ಸ್ಗೆ ಸೇರಿದೆ.
ಯೋಗದಲ್ಲಿ ಜೀವನ ಸ್ಪೂರ್ತಿ: ಬಳಿಕ ಹೈದರಾಬಾದ್ನಲ್ಲಿ ಯೋಗ ಶಿಕ್ಷಕಿ ಹುದ್ದೆ ಪಡೆದು, ಇಲ್ಲಿಯೇ ನೆಲೆಸಿದೆ. 2019ರಿಂದ ನಾನು ಯೋಗ ಕಲಿಸುತ್ತಿದ್ದೇನೆ. ಮುಖಾ ಮುಖಿಯಾಗಿ ಯೋಗ ಕಲಿಸಲು ಆರಂಭಿಸಿದೆ. ಕೋವಿಡ್ 19ಕ್ಕೆ ಮೊದಲು ಇಬ್ಬರು ವಿಕಲಚೇತನರು ಸೇರಿದಂತೆ ಅನೇಕ ವಿದ್ಯಾರ್ಥಿಗಳಿಗೆ ಯೋಗ ಪಾಠ ಹೇಳಿದೆ. ನಿಧಾನವಾಗಿ ವಿದ್ಯಾರ್ಥಿಗಳ ಸಂಖ್ಯೆ ಏರಿತು. ಪ್ರಸ್ತುತ ನಾನು ಬಳಕೆ ಮಾಡುತ್ತಿರುವ ಕೃತಕ ಕಾಲುಗಳು ಹಸ್ತಚಾಲಿತ ಪ್ರಕಾರಗಳಾಗಿವೆ. ಮೈಕ್ರೊಪ್ರೊಸೆಸರ್‌ಗಳು ಮತ್ತು ಸುಧಾರಿತ ಅಂಗಗಳು ದುಬಾರಿಯಾಗಿದ್ದು, ಇಲ್ಲಿಯವರೆಗೆ ಖರೀದಿಸಲು ಸಾಧ್ಯವಿಲ್ಲ ಎನ್ನುತ್ತಾರೆ.
ಭವಿಷ್ಯದಲ್ಲಿ ಮತ್ತಷ್ಟ ಅದ್ಬುತ ಪ್ರಯೋಗಗಳನ್ನು ಮಾಡುವ ನಂಬಿಕೆ ನಾನು ಹೊಂದಿದ್ದೇನೆ. ಜೊತೆಗೆ ಯೋಗ ಸೈಕಾಲಾಜಿ, ಗೈಡೆಡ್ ಮೆಡಿಟೇಷನ್ ಮತ್ತು ಒತ್ತಡ ನಿರ್ವಹಣೆಯಲ್ಲಿ ಕೋರ್ಸ್ ಮುಗಿಸಿದ್ದೇನೆ. ಸದ್ಯ ಕಾರ್ಪೊರೇಟ್ ಕಂಪನಿಯಲ್ಲಿ ಪೂರ್ಣಕಾಲಿಕ ಉದ್ಯೋಗಿಯಾಗಿದ್ದೇನೆ. ಮತ್ತೊಂದು ಕಡೆದ ಕೃತ ಕಾಲಿನಲ್ಲಿ ನಡೆಯುವ ಜನರಿಗೆ ಮತ್ತು ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಯೋಗ ಕಲಿಸುತ್ತಿದ್ದೇನೆ. ಸಿಆರ್ಪಿಎಫ್ನಲ್ಲಿ ವರ್ಕ್ಶಾಪ್ ಮಾಡಿದ್ದೇನೆ, ವಿದೇಶಗಳಲ್ಲಿ ಮತ್ತು ಇಲ್ಲಿನ ಕಾಲೇಜುಗಳ್ಲಿ ನಡೆಯುವ ಯೋಗ ಸಮಾವೇಶದಲ್ಲಿ ಸ್ಪೂರ್ತಿದಾಯಕ ಮಾತುಗಳನ್ನು ಹಂಚಿಕೊಳ್ಳುತ್ತಿದ್ದೇನೆ ಎನ್ನುತ್ತಾರೆ ಅರ್ಪಿತಾ.
ಇದನ್ನೂ ಓದಿ: 10ನೇ ಅಂತಾರಾಷ್ಟ್ರೀಯ ಯೋಗ ದಿನ: ಶ್ರೀನಗರದ ದಾಲ್ ಸರೋವರದ ದಡದಲ್ಲಿ ಪ್ರಧಾನಿ ಮೋದಿ ಯೋಗ ಸಂಭ್ರಮ