ETV Bharat / bharat

ಈ ಬೀಗ ಇದ್ರೆ ನಿಮ್ಮ ಮನೆ ಸೇಫ್​!: ಟಚ್​ ಮಾಡಿದ್ರೆ ಮೊಬೈಲ್​ಗೆ ಅಲರ್ಟ್​ - ಕಳ್ಳತನದ ದೃಶ್ಯ ಸೆರೆ! - Army Man Digital Lock

author img

By ETV Bharat Karnataka Team

Published : Jul 5, 2024, 2:44 PM IST

Army Man Digital Lock : ಇತ್ತೀಚಿನ ದಿನಗಳಲ್ಲಿ ಕಳ್ಳತನಗಳು ವಿಪರೀತವಾಗಿ ಹೆಚ್ಚುತ್ತಿವೆ. ಕಳ್ಳರು ದೊಡ್ಡ ಬೀಗ ಮುರಿದು ಸೊತ್ತು ದೋಚುತ್ತಿದ್ದಾರೆ. ಅದಕ್ಕಾಗಿಯೇ ಮಧ್ಯಪ್ರದೇಶದ ಮಾಜಿ ಸೈನಿಕನೊಬ್ಬ ಕಳ್ಳತನ ತಡೆಯಲು ಡಿಜಿಟಲ್ ಲಾಕ್ ರೆಡಿ ಮಾಡಿದ್ದಾರೆ. ಯಾರಾದರೂ ಆ ಬೀಗವನ್ನು ಮುಟ್ಟಿದ್ರೆ ಸಾಕು ನಿಮ್ಮ ಫೋನ್‌ಗೆ ಎಚ್ಚರಿಕೆಯ ಕರೆ ಬರುತ್ತದೆ. ಜೊತೆಗೆ ಸೈರನ್ ಮೊಳಗುತ್ತದೆ. ಈ ಡಿಜಿಟಲ್ ಲಾಕ್‌ನ ವೈಶಿಷ್ಟ್ಯಗಳೇನು ತಿಳಿದುಕೊಳ್ಳೋಣ.

ARMY MAN DIGITAL LOCK  FORMER SOLDIER MUKESH KUMAR  CREATED DIGITAL LOCK  FEATURES OF DIGITAL LOCK
ಟಚ್​ ಮಾಡಿದ್ರೆ ಮೊಬೈಲ್​ಗೆ ಅಲರ್ಟ್​-ಕಳ್ಳ ದೃಶ್ಯ ಸೆರೆ (ETV Bharat)

Army Man Creates Digital Lock: ಪದೇ ಪದೆ ಕಳ್ಳತನವಾಗುತ್ತಿರುವುದನ್ನು ತಡೆಯಲು ಮಧ್ಯಪ್ರದೇಶದ ಮಾಜಿ ಸೈನಿಕರೊಬ್ಬರು ವಿಶಿಷ್ಟವಾದ ರೀತಿಯಲ್ಲಿ ಬೀಗವೊಂದನ್ನು ತಯಾರಿಸಿದ್ದಾರೆ. ಒಂದು ತಿಂಗಳ ಕಾಲ ದುಡಿದು ರೂ.3 ಸಾವಿರ ವೆಚ್ಚದಲ್ಲಿ ಡಿಜಿಟಲ್ ಲಾಕ್ ತಯಾರಿಸಿದ್ದಾರೆ. ಈ ಬೀಗವು ಮನೆ, ಕಚೇರಿ, ಅಂಗಡಿಗಳನ್ನು ಕಳ್ಳರಿಂದ ಸುರಕ್ಷಿತವಾಗಿರಿಸುತ್ತದೆ. ಅದು ಹೇಗೆ ಸಾಧ್ಯ ಅಂತೀರಾ.. ಹಾಗಾದರೆ ಈ ಬೀಗದ ವೈಶಿಷ್ಟ್ಯಗಳ ಬಗ್ಗೆ ನೀವು ತಿಳಿಯಲೇ ಬೇಕು.

ಮುಟ್ಟಿದರೆ ಸಾಕು ಅಲರ್ಟ್​​ ಕಾಲ್​: ಸಾಗರ ಜಿಲ್ಲೆಯ ಸಿದ್ದ್ ಗುವಾನ್ ಕೈಗಾರಿಕಾ ಪ್ರದೇಶದ ಮಾಜಿ ಸೈನಿಕ ಮುಖೇಶ್ ಕುಮಾರ್ ಈ ಡಿಜಿಟಲ್ ಲಾಕ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಕಳ್ಳರು ಈ ಬೀಗ ಒಡೆಯಲು ಯತ್ನಿಸಿದರೆ, ತಕ್ಷಣ ಸೈರನ್ ಮೊಳಗುತ್ತದೆ. ಇದಲ್ಲದೇ, ಸಾಧನಕ್ಕೆ ಸಂಪರ್ಕಗೊಂಡಿರುವ ಮೊಬೈಲ್‌ಗೆ ಎಚ್ಚರಿಕೆಯ ಕರೆ ಕೂಡ ಹೋಗುತ್ತದೆ.

ಈ ಡಿಜಿಟಲ್ ಲಾಕ್ ಮತ್ತೊಂದು ವಿಶೇಷತೆ ಹೊಂದಿದೆ. ಇದು ಬೀಗ ಮುರಿಯಲು ಪ್ರಯತ್ನಿಸುತ್ತಿರುವ ವ್ಯಕ್ತಿಯ ಫೋಟೋ ಮತ್ತು ವಿಡಿಯೋವನ್ನು ಸಹ ರೆಕಾರ್ಡ್​ ಮಾಡುತ್ತದೆ. 3 ಸಾವಿರ ರೂ. ಬಜೆಟ್​ನಲ್ಲಿ ಈ ಡಿಜಿಟಲ್ ಲಾಕ್ ಅನ್ನು ಎಲ್ಲರಿಗೂ ಉಪಯುಕ್ತವಾಗುವಂತೆ ಮಾಡಿರುವ ಮುಖೇಶ್ ಕುಮಾರ್​ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

"ನಾನು ಐಟಿಐನಲ್ಲಿ ಎಲೆಕ್ಟ್ರಿಕಲ್ ವಿಭಾಗದಲ್ಲಿ ಓದಿದ್ದೇನೆ. ಕಳೆದ ಕೆಲವು ದಿನಗಳಿಂದ ನಮ್ಮ ಪ್ರದೇಶದಲ್ಲಿ ಕಳ್ಳತನಗಳು ಹೆಚ್ಚಾಗಿವೆ. ಅಪರಾಧವನ್ನು ತಡೆಯಲು ಮತ್ತು ಕಳ್ಳರನ್ನು ಹಿಡಿಯಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನನಗೆ ಒಂದು ಉಪಾಯ ಸಿಕ್ಕಿತು. ಆಗ ನಾನು ಈ ಡಿಜಿಟಲ್ ಲಾಕ್ ರೆಡಿ ಮಾಡಿದ್ದೇನೆ. ಸ್ಪರ್ಶಿಸಿದಾಗ ಸೈರನ್​ ಸಹ ಮೊಳಗಿಸುತ್ತದೆ. ಅಸ್ತಿತ್ವದಲ್ಲಿರುವ ಮೊಬೈಲ್ ಸಂಖ್ಯೆಗೆ ಎಚ್ಚರಿಕೆಯ ಕರೆಯನ್ನು ಸಹ ಬರುತ್ತದೆ. ಡಿಜಿಟಲ್ ಲಾಕ್ ಅನ್ನು ಮುರಿಯಲು ಪ್ರಯತ್ನಿಸುತ್ತಿರುವ ವ್ಯಕ್ತಿಯ ಫೋಟೋ ಮತ್ತು ವಿಡಿಯೋವನ್ನು ರೆಕಾರ್ಡ್ ಮಾಡುವಂತೆ ನಾನು ಈ ಸಾಧನವನ್ನು ವಿನ್ಯಾಸಗೊಳಿಸಿದ್ದೇನೆ ಎಂದು ಮಾಜಿ ಯೋಧ ಮುಖೇಶ್ ಕುಮಾರ್ ಹೇಳುತ್ತಾರೆ.

ಸೆನ್ಸಾರ್​ ಹೊಂದಿರುವ ಡಿಜಿಟಲ್ ಲಾಕ್: ಮಾಜಿ ಸೈನಿಕ ಮುಖೇಶ್ ಕುಮಾರ್ ಅವರು ಈ ಡಿಜಿಟಲ್ ಲಾಕ್ ಮಾಡಲು ಸೆನ್ಸಾರ್ ಕ್ಯಾಮೆರಾ, ಮೊಬೈಲ್ ಸಾಧನಗಳು ಮತ್ತು ಸೈರನ್ ಬಳಸಿದ್ದಾರೆ. ಈ ಡಿಜಿಟಲ್ ಲಾಕ್​ಗೆ ದಪ್ಪವಾದ ಸ್ಟೀಲ್ ಬಳಸಿ ವಿನ್ಯಾಸಗೊಳಿಸಿದ್ದಾರೆ. ಈ ಲಾಕ್​ನಲ್ಲಿ ಸೆನ್ಸಾರ್​ ಕ್ಯಾಮೆರಾ ಜೊತೆ ಮೊಬೈಲ್ ಸಾಧನವೂ ಇದೆ. ಮುಖೇಶ್ ಕುಮಾರ್ ಈ ಡಿಜಿಟಲ್ ಲಾಕ್ ರೆಡಿ ಮಾಡಲು ಸುಮಾರು ಒಂದು ತಿಂಗಳುಗಳ ಕಾಲ ಸಮಯ ತೆಗೆದುಕೊಂಡಿದ್ದಾರೆ. ಇದರ ತೂಕ ಸುಮಾರು ಎರಡು ಕಿಲೋ ಇದೆಯಂತೆ. ಅದನ್ನು ಆನ್ ಮಾಡಲು ವೈಫೈ ಸಂಪರ್ಕದ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಓದಿ: ಬೆಂಗಳೂರಲ್ಲಿ 3 ವರ್ಷದ ಬಾಲಕಿ ಮೇಲೆ ನರ್ಸರಿ ಶಿಕ್ಷಕಿಯಿಂದ ಲೈಂಗಿಕ ದೌರ್ಜನ್ಯ - Sexual Assault On 3 Year Old Girl

ETV Bharat Logo

Copyright © 2024 Ushodaya Enterprises Pvt. Ltd., All Rights Reserved.