ಹೈದರಾಬಾದ್: ಕೋಲ್ಕತ್ತಾ ವಿಮಾನ ನಿಲ್ದಾಣದ ರೆಸ್ಟೋರೆಂಟ್‌ನಲ್ಲಿ ಚಹಾದ ಬೆಲೆ 340 ರೂಪಾಯಿ ಇದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಶುಕ್ರವಾರ ಹೇಳಿದ್ದಾರೆ. "ಪಶ್ಚಿಮ ಬಂಗಾಳದಲ್ಲಿ ತಮಿಳುನಾಡಿಗಿಂತ ಹಣದುಬ್ಬರ ಹೆಚ್ಚಾಗಿದೆ" ಎಂದು ತಮ್ಮ ಎಕ್ಸ್ ಹ್ಯಾಂಡಲ್ ಪೋಸ್ಟ್ ಮೂಲಕ ಹೇಳಿದ್ದಾರೆ.
I just discovered that Tea made of Hot Water and a Tea Bag costs Rs 340 in Kolkata airport
— P. Chidambaram (@PChidambaram_IN) September 13, 2024
The restaurant is 'The Coffee Bean and Tea Leaf'
A couple of years ago I found that
'hot water and tea bag' cost Rs 80 in Chennai airport, and I tweeted about it. AAI took note and took…
"ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಬಿಸಿನೀರು ಮತ್ತು ಟೀ ಬ್ಯಾಗ್‌ನಿಂದ ಮಾಡಿದ ಚಹಾದ ಬೆಲೆ 340 ರೂಪಾಯಿ ಎಂಬ ವಿಚಾರವನ್ನು ನಾನು ತಿಳಿಸಲು ಬಯಸುತ್ತಿದ್ದೇನೆ’’ ಎಂದು ರಾಜ್ಯಸಭಾ ಸದಸ್ಯರಾಗಿರುವ ಚಿದಂಬರಂ, ತಮ್ಮ ಅಧಿಕೃತ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಕೇಂದ್ರದ ಮಾಜಿ ಗೃಹ ಸಚಿವರು ಆಗಿರುವ ಅವರು, ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಾರಾಟ ಟೀ ಬೆಲೆಯಲ್ಲಿ ಭಾರಿ ಹೆಚ್ಚಳ ಮಾಡಲಾಗಿತ್ತು. ಈ ಬಗ್ಗೆ ಟ್ವೀಟ್ ಮಾಡಿದ ಬಳಿಕ ಎಚ್ಚೆತ್ತುಕೊಂಡ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಂಡಿತ್ತು ಎಂದು ನೆನಪಿಸಿಕೊಂಡಿದ್ದಾರೆ.
"ಒಂದೆರಡು ವರ್ಷಗಳ ಹಿಂದೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಒಂದು ಟೀ ಬೆಲೆ 80 ರೂಪಾಯಿ ಇತ್ತು. ನಾನು ಅದರ ಬಗ್ಗೆ ಟ್ವೀಟ್ ಮಾಡಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ತಿಳಿಸುವ ಪ್ರಯತ್ನ ಮಾಡಿದ್ದೆ. AAI (ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ) ಗಮನಿಸಿ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಂಡಿತು. ಈಗ ನೋಡಿದರೆ ಪಶ್ಚಿಮ ಬಂಗಾಳದಲ್ಲಿ ಒಂದು ಟೀ ಬೆಲೆ ಬರೋಬ್ಬರಿ 340 ರೂ. ಇದೆ. ಇದನ್ನು ನೋಡಿದರೆ ಪಶ್ಚಿಮಬಂಗಾಳದಲ್ಲಿ ತಮಿಳುನಾಡಿಗಿಂತ ಹೆಚ್ಚಿನ ಹಣದುಬ್ಬರ ಇದೆ ಎಂಬುದು ಗೊತ್ತಾಗುತ್ತಿದೆ ಎಂದು ಹೇಳಿದ್ದಾರೆ. ಸಂಸತ್ ಸದಸ್ಯರು ಆಗಿರುವ ಪಿ ಚಿದಂಬರಂ ಅವರು ಹಲವಾರು ಸಂದರ್ಭಗಳಲ್ಲಿ ಏರುತ್ತಿರುವ ಹಣದುಬ್ಬರದ ಬಗ್ಗೆ ಧ್ವನಿಯೆತ್ತಿದ್ದಾರೆ.
ಇದನ್ನು ಓದಿ:ನಿಯಂತ್ರಣದಲ್ಲಿ ಚಿಲ್ಲರೆ ಹಣದುಬ್ಬರ: ಬಡ್ಡಿದರ ಕಡಿಮೆ ಮಾಡುತ್ತಾ ಆರ್ಬಿಐ? - RBI Rate Cut
ಮೂರು ವರ್ಷಗಳ ಬಳಿಕ ಮತ್ತೆ ಭಾರತಕ್ಕೆ ಕಾಲಿಟ್ಟ ಫೋರ್ಡ್ ಕಂಪನಿ - Ford Motor Restart In India