ETV Bharat / bharat

ಬಿಜಾಪುರ - ದಂತೇವಾಡ ಗಡಿಯಲ್ಲಿ ನಕ್ಸಲ್​ ಕಾರ್ಯಾಚರಣೆ: ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರು ಬಲಿ - 2 Naxalites Killed In Encounter - 2 NAXALITES KILLED IN ENCOUNTER

ಬಿಜಾಪುರ - ದಂತೇವಾಡ ಗಡಿಯಲ್ಲಿ ಇಂದು ನಡೆದ ನಕ್ಸಲ್ ಕಾರ್ಯಾಚರಣೆಯಲ್ಲಿ ಇಬ್ಬರು ನಕ್ಸಲರು ಹತರಾಗಿದ್ದಾರೆ.

anti-naxal-campaign-against-naxalites-at-bijapur-dantewada-border-police-naxal-encounter
ಬಿಜಾಪುರ-ದಾಂತೇವಾಡ ಗಡಿಯಲ್ಲಿ ನಕ್ಸಲ್​ ಕಾರ್ಯಾಚರಣೆ: ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರು ಹತ
author img

By ETV Bharat Karnataka Team

Published : Mar 23, 2024, 5:49 PM IST

ಬಿಜಾಪುರ(ಛತ್ತೀಸ್​ಘಡ): ಬಿಜಾಪುರ - ದಂತೇವಾಡ ಗಡಿಯ ಪಿಡಿಯಾ ಅರಣ್ಯದಲ್ಲಿ ನಕ್ಸಲರ ವಿರುದ್ಧ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ನಕ್ಸಲರು ಹತರಾಗಿದ್ದಾರೆ. ನಕ್ಸಲರು ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ನಕ್ಸಲರನ್ನು ಎನ್‌ಕೌಂಟರ್‌ ಮಾಡಲಾಗಿದೆ. ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ಮುಗಿದ ಬಳಿಕ ಇಬ್ಬರು ನಕ್ಸಲರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ನಕ್ಸಲರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ: ಇದಕ್ಕೂ ಮುನ್ನ ದಂತೇವಾಡ ಜಿಲ್ಲೆಯ ಕಿರಾಂಡುಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆ ವೇಳೆ ಐಇಡಿ ಸ್ಫೋಟದಿಂದ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಅವರನ್ನು ಏರ್‌ಲಿಫ್ಟ್ ಮಾಡಿ ರಾಯ್‌ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದಂತೇವಾಡ ಎಸ್‌ಪಿ ಗೌರವ್ ರೈ ತಿಳಿಸಿದ್ದಾರೆ. ಏಪ್ರಿಲ್ 19 ರಂದು ಬಸ್ತಾರ್‌ನಲ್ಲಿ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಭದ್ರತಾ ಪಡೆಗಳು ಈ ಕಾರ್ಯಾಚರಣೆ ನಡೆಸಿವೆ.

ಈ ಕಾರ್ಯಾಚರಣೆಯಲ್ಲಿ ಬಿಜಾಪುರ, ಸುಕ್ಮಾ ಮತ್ತು ದಂತೇವಾಡದ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ), ಬಸ್ತಾರ್ ಫೈಟರ್ಸ್ ಮತ್ತು ಕಮಾಂಡೋ ಬೆಟಾಲಿಯನ್ ಆಫ್ ರೆಸಲ್ಯೂಟ್ ಆ್ಯಕ್ಷನ್ (ಕೋಬ್ರಾ) ಪಡೆಗಳು ಪಾಲ್ಗೊಂಡಿದ್ದವು. ಕಾರ್ಯಾಚರಣೆ ನೇತೃತ್ವವನ್ನು ಬಿಜಾಪುರ ಎಸ್​ ಜಿತೇಂದ್ರ ಯಾದವ್, ದಂತೇವಾಡ ಎಸ್​ಪಿ ಗೌರವ್ ರೈ ಮತ್ತು ಸುಕ್ಮಾ ಎಸ್​ಪಿ ಕಿರಣ್ ಚವ್ಹಾಣ್​ ಅವರು ವಹಿಸಿದ್ದರು.

ಇತ್ತೀಚಿಗೆ ಛತ್ತೀಸ್​ಘಢದಲ್ಲಿ ನಡೆದ ಪ್ರಮುಖ ನಕ್ಸಲ್ ಘಟನೆಗಳು: ಮಾರ್ಚ್ 22ರಂದು ದಂತೇವಾಡದಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಇಬ್ಬರು ನಕ್ಸಲರನ್ನು ಬಂಧಿಸಲಾಗಿತ್ತು. ಬಂಧಿತ ನಕ್ಸಲರು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಮಾರ್ಚ್ 21ರಂದು ಸುಕ್ಮಾದಲ್ಲಿ ನಕ್ಸಲನೊಬ್ಬ ಪೊಲೀಸರ ಮುಂದೆ ಶರಣಾಗಿದ್ದ. ಲೋಕಸಭಾ ಚುನಾವಣೆಗೂ ಮುನ್ನ ಬಸ್ತಾರ್​ನಲ್ಲಿ ಹಿರಿಯ ನಕ್ಸಲರು ಶರಣಾಗಿತಿ ಒಳ್ಳೆಯ ಬೆಳವಣಿಯಾಗಿದೆ. ಮಾರ್ಚ್ 20 ರಂದು ಜಶ್ಪುರ್ ಮತ್ತು ಜಾರ್ಖಂಡ್ ಪೊಲೀಸರು ಎರಡೂ ರಾಜ್ಯಗಳ 14 ಗ್ರಾಮಗಳಲ್ಲಿ ಜಂಟಿ ಶೋಧ ಕಾರ್ಯಾಚರಣೆ ನಡೆಸಿದ್ದರು.

ಇದನ್ನೂ ಓದಿ: ಛತ್ತೀಸ್​ಗಢದಲ್ಲಿ ಎನ್‌ಕೌಂಟರ್‌: ಓರ್ವ ಯೋಧ ಹುತಾತ್ಮ, ನಕ್ಸಲ್​ ಹತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.