ETV Bharat / bharat

ಕೊಚ್ಚಿ ಹೋದ ತುಂಗಭದ್ರಾ ಡ್ಯಾಂ ಗೇಟ್: ಅಗತ್ಯ ಕ್ರಮಕ್ಕೆ ಆಂಧ್ರ ಸಿಎಂ ಸೂಚನೆ - CM Chandrababu Naidu - CM CHANDRABABU NAIDU

ಕರ್ನಾಟಕದಲ್ಲಿ ತುಂಗಭದ್ರಾ ಅಣೆಕಟ್ಟಿನ ಗೇಟ್ ಕೊಚ್ಚಿ ಹೋಗಿರುವ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಮಾಹಿತಿ ಪಡೆದಿದ್ದು, ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನದಿ ಪಾತ್ರದ ಜನರಿಗೆ ಕಟ್ಟೆಚ್ಚರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ.

TUNGABHADRA DAM GATE  DAM CRUST GATE WASHED OUT  TUNGABHADRA DAM UPDATE
ತುಂಗಭದ್ರಾ ಡ್ಯಾಂ, ಚಂದ್ರಬಾಬು ನಾಯ್ಡು (ETV Bharat)
author img

By ETV Bharat Karnataka Team

Published : Aug 11, 2024, 11:50 AM IST

ಅಮರಾವತಿ (ಆಂಧ್ರಪ್ರದೇಶ): ಕರ್ನಾಟಕದಲ್ಲಿ ತುಂಗಭದ್ರಾ ಅಣೆಕಟ್ಟಿನ ಗೇಟ್ ಕೊಚ್ಚಿ ಹೋಗಿರುವ ಬಗ್ಗೆ ಆಂಧ್ರಪ್ರದೇಶದ ಸಿಎಂ ಎನ್.ಚಂದ್ರಬಾಬು ನಾಯ್ಡು ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲಿನ ಜಲಸಂಪನ್ಮೂಲ ಸಚಿವೆ ನಿಮ್ಮಲಾ ರಾಮನಾಯ್ಡು ಅವರು ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿ ಸಾಯಿ ಪ್ರಸಾದ್ ಅವರೊಂದಿಗೆ ಮಾತನಾಡಿ, ವಿವರ ತಿಳಿದುಕೊಂಡಿದ್ದಾರೆ. ಬಳಿಕ ಜಂಟಿ ಕರ್ನೂಲ್ ಜಿಲ್ಲೆಯ ತಗ್ಗು ಪ್ರದೇಶದ ಜನರಿಗೆ ಎಚ್ಚರಿಕೆ ನೀಡುವಂತೆ ಸಿಎಂ ಆದೇಶಿಸಿದ್ದಾರೆ.

ನಿರ್ವಹಣೆ ಮಾಡದ ಹಳೆಯ ಗೇಟ್ ಕೊಚ್ಚಿ ಹೋಗಿದೆ. ಜಲಾಶಯದಲ್ಲಿ 6 ಮೀಟರ್ ಎತ್ತರದವರೆಗೆ ನೀರಿದೆ ಎಂದು ಸಿಎಂ ಚಂದ್ರಬಾಬು ಅವರಿಗೆ ಅಧಿಕಾರಿಗಳು ವಿವರಿಸಿದರು. ತಡೆಗೋಡೆ ವ್ಯವಸ್ಥೆ ಮೂಲಕ ನೀರು ವ್ಯರ್ಥವಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿಶೇಷ ಮುಖ್ಯ ಕಾರ್ಯದರ್ಶಿ ಸಾಯಿಪ್ರಸಾದ್ ಸಿಎಂಗೆ ತಿಳಿಸಿದ್ದಾರೆ. ಕೂಡಲೇ ಯೋಜನೆಗೆ ವಿನ್ಯಾಸ ತಂಡ ಕಳುಹಿಸುವಂತೆ ಸಿಎಂ ಸೂಚಿಸಿದರು.

ಸಚಿವ ಪಯ್ಯಾವುಲ ಕೇಶವ್​ ಹೇಳಿಕೆ: ಮತ್ತೊಂದೆಡೆ, ತುಂಗಭದ್ರಾ ಅಣೆಕಟ್ಟೆಯ ಅಧಿಕಾರಿಗಳೊಂದಿಗೆ ಮಾತನಾಡುವಂತೆ ಸಚಿವ ಪಯ್ಯಾವುಲ ಕೇಶವ್ ಅವರಿಗೆ ಚಂದ್ರಬಾಬು ಆದೇಶಿಸಿದ್ದಾರೆ. ಪಯ್ಯಾವುಳ ಕೇಶವ ಮಾತನಾಡಿ, ತಾತ್ಕಾಲಿಕ ಗೇಟ್ ಸ್ಥಾಪಿಸುವ ಕುರಿತು ಅಣೆಕಟ್ಟೆಯ ಅಧಿಕಾರಿಗಳೊಂದಿಗೆ ಮಾತನಾಡುತ್ತೇವೆ. ಬೇಕಾದ ಸಹಕಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಾತ್ಕಾಲಿಕ ಸ್ಟಾಪ್‌ಲಾಕ್‌ ಗೇಟ್‌ ಹಾಕಲು ತೊಂದರೆಯಾಗುತ್ತಿದೆ. ಹಳೆಯ ವಿನ್ಯಾಸದ ಕಾರಣ ಸ್ಟಾಪ್ ಲಾಕ್ ಗೇಟ್ ಅಳವಡಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಜನರಿಗೆ ಕಟ್ಟೆಚ್ಚರ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚನೆ: ಸಿಎಂ ಆದೇಶದ ಮೇರೆಗೆ ಇಂಜಿನಿಯರ್‌ಗಳು ಹಾಗೂ ಕೇಂದ್ರ ವಿನ್ಯಾಸ ಆಯುಕ್ತರ ತಂಡ ಸ್ಥಳಕ್ಕೆ ತೆರಳಿದೆ ಎಂದು ಸಚಿವೆ ನಿಮ್ಮಲಾ ರಾಮನಾಯ್ಡು ತಿಳಿಸಿದ್ದಾರೆ. ಒಳನಾಡು ಭಾಗದ ಜನರಿಗೆ ಎಚ್ಚರಿಕೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೌತಾಳಂ, ಕೋಸ್ಗಿ, ಮಂತ್ರಾಲಯ ಮತ್ತು ನಂದಾವರಂ ಪ್ರದೇಶಗಳ ಜನರು ಜಾಗರೂಕರಾಗಿರಲು ತಿಳಿಸಲಾಗಿದೆ. ಶ್ರೀಶೈಲ, ಸಾಗರ, ಪುಲಿಚಿಂತಲ ಯೋಜನೆಗಳ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದರು.

ಓದಿ: ತುಂಗಭದ್ರಾ ಅಣೆಕಟ್ಟೆ ಕ್ರಸ್ಟ್​​ ಗೇಟ್​ ಚೈನ್​ಲಿಂಕ್​ ಕಟ್​; ನದಿ ಪಾತ್ರದ ಜನರಲ್ಲಿ ಆತಂಕ - Tungabhadra Dam

ETV Bharat Logo

Copyright © 2025 Ushodaya Enterprises Pvt. Ltd., All Rights Reserved.