ETV Bharat / bharat

ತೆಲಂಗಾಣ ಕೌಶಲ್ಯ ವಿಶ್ವವಿದ್ಯಾಲಯ ಅಧ್ಯಕ್ಷರಾಗಿ ಆನಂದ್ ಮಹೀಂದ್ರಾ ನೇಮಕ - Skill University Chairman

ತೆಲಂಗಾಣದ ಕೌಶಲ್ಯ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳುವಂತೆ ಖುದ್ದು ಸಿಎಂ ರೇವಂತ್​ ರೆಡ್ಡಿ ಅವರೇ ಆನಂದ್​ ಮಹೀಂದ್ರಾ ಅವರಿಗೆ ಆಹ್ವಾನ ನೀಡಿದ್ದರು.

Anand Mahindra
ಆನಂದ್​ ಮಹೀಂದ್ರಾ (ETV Bharat)
author img

By ETV Bharat Karnataka Team

Published : Aug 16, 2024, 12:46 PM IST

ಹೈದರಾಬಾದ್: ತೆಲಂಗಾಣ ಸರ್ಕಾರ ಹೊಸದಾಗಿ ಸ್ಥಾಪಿಸಿರುವ ಯಂಗ್ ಇಂಡಿಯಾ ಸ್ಕಿಲ್ ಯೂನಿವರ್ಸಿಟಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಮಹೀಂದ್ರಾ ಗ್ರೂಪ್​ ಅಧ್ಯಕ್ಷ ಆನಂದ್ ಮಹೀಂದ್ರಾ ಅವರನ್ನು ನೇಮಿಸಲಾಗಿದೆ. ಈ ಸ್ಥಾನದಲ್ಲಿ ಆನಂದ್​ ಮಹೀಂದ್ರಾ ಅವರು ಒಂದು ವರ್ಷ ಸೇವೆ ಸಲ್ಲಿಸಲಿದ್ದು, ಅವರ ನೇಮಕಾತಿ ಬಗ್ಗೆ ಸರ್ಕಾರ ಗುರುವಾರ ಅಧಿಕೃತ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಹೆಚ್ಚಿಸುವ ಗುರಿ ಹೊಂದಿರುವ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಉಪಕ್ರಮದ ಭಾಗವಾಗಿ, ಖುದ್ದು ಮುಖ್ಯಮಂತ್ರಿ ರೇವಂತ್ ಅವರೇ ಆನಂದ್ ಮಹೀಂದ್ರಾ ಅವರನ್ನು ಈ ಸ್ಥಾನಕ್ಕೆ ಆಹ್ವಾನಿಸಿದ್ದರು. ಆನಂದ್​ ಮಹೀಂದ್ರಾ ಅವರು ಈ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದು, ಈ ಬಗ್ಗೆ ಸಿಎಂ ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಘೋಷಣೆ ಮಾಡಿದ್ದರು.

ಇದನ್ನೂ ಓದಿ: ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೌಮ್ಯ ರೆಡ್ಡಿ ನೇಮಕ - Soumya Reddy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.