ETV Bharat / bharat

ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ: ಪೋಕ್ಸೋ ಪ್ರಕರಣ ದಾಖಲು - RAPE CASE - RAPE CASE

ಹಿರಿಯರ ಸಮ್ಮುಖದಲ್ಲಿ ಮತ್ತೆ ಆ ತಪ್ಪು ಮಾಡಲ್ಲ ಎಂದು ಹೇಳಿ ಪತ್ನಿ ಮಕ್ಕಳನ್ನು ಮನೆಗೆ ವಾಪಸ್​ ಕರೆತಂದಿದ್ದ ತಂದೆ, ತಂಪು ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ನೀಡಿ, ರಾತ್ರಿ ಹೊತ್ತು ಮಗಳ ಮೇಲೆ ಅತ್ಯಾಚಾರವೆಸಗಿರುವ ಅಮಾನುಷ ಘಟನೆ ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Aug 28, 2024, 9:09 PM IST

ಮಾಚರ್ಲ (ಆಂಧ್ರಪ್ರದೇಶ): ತಂಪು ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ಕೊಟ್ಟು, ಪ್ರತಿದಿನ ತಂದೆಯೇ ಮಗಳ ಮೇಲೆ ಅತ್ಯಾಚಾರವೆಸಗಿರುವ ಘಟನೆ ಆಂಧ್ರಪ್ರದೇಶದ ಮಾಚರ್ಲದಲ್ಲಿ ಬೆಳಕಿಗೆ ಬಂದಿದೆ. ಸಂತ್ರಸ್ತೆ ಹಾಗೂ ಆಕೆಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಆರೋಪಿಯ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆರೋಪಿ ತಂದೆ ಮಾಚರ್ಲದಲ್ಲಿ ವ್ಯಾಪಾರಿಯಾಗಿದ್ದು, ಆರು ವರ್ಷಗಳ ಹಿಂದೆ ವೆಲ್ದುರ್ತಿ ಮಂಡಲದ ಮಹಿಳೆಯನ್ನು ಮದುವೆಯಾಗಿದ್ದನು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಎರಡು ವರ್ಷಗಳ ಹಿಂದೆ ತನ್ನ ಮೂರು ವರ್ಷದ ಮಗಳ ಜೊತೆ ಪತಿ ಅನುಚಿತವಾಗಿ ವರ್ತಿಸುತ್ತಿದ್ದುದನ್ನು ಪತ್ನಿ ಗಮನಿಸಿದ್ದಳು. ಗಂಡನ ವರ್ತನೆಯಿಂದ ಜರ್ಝರಿತಗೊಂಡಿದ್ದ ಆಕೆ, ಮಕ್ಕಳನ್ನು ಕರೆದುಕೊಂಡು ತನ್ನ ತವರು ಮನೆಗೆ ಹೋಗಿದ್ದಳು. ಆದರೆ ಎರಡು ತಿಂಗಳ ಹಿಂದೆ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಿದ ಪತಿ, ತಾನು ಬದಲಾಗಿದ್ದೇನೆ. ಇನ್ನೆಂದೂ ತಪ್ಪು ಮಾಡುವುದಿಲ್ಲ ಎಂದಿದ್ದ. ಹಿರಿಯರ ಮುಂದೆ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಪತ್ನಿ, ಮಕ್ಕಳನ್ನು ನಂಬಿಸಿ ಮನೆಗೆ ವಾಪಸ್ ಕರೆತಂದಿದ್ದ.

ಆದರೆ ಬದಲಾಗದ ಪತಿ, ಪ್ರತಿ ರಾತ್ರಿ ಪತ್ನಿ ಹಾಗೂ ಮಕ್ಕಳಿಗೆ ತಂಪು ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ಕುಡಿಯಲು ಕೊಡುತ್ತಿದ್ದ. ಅದನ್ನು ಆತ ಪ್ರೀತಿಯಿಂದ ಕೊಡುತ್ತಾನೆ ಎಂದು ನಂಬಿ ಅವರು ಕುಡಿಯುತ್ತಿದ್ದರು. ಎಲ್ಲರೂ ಮಲಗಿದ ನಂತರ ತಂದೆ ಪ್ರತಿದಿನ ಮಗಳ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಬೆಳಗ್ಗೆ ಬಾಲಕಿ ಮೂತ್ರ ವಿಸರ್ಜಿಸಲು ಹೋದಾಗ ನೋವಿನಿಂದ ಅಳುತ್ತಿದ್ದದ್ದನ್ನು ಗಮನಿಸಿದ ತಾಯಿ ಅನುಮಾನಗೊಂಡು ಮಗಳನ್ನು ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದ್ದರು. ಆಗ ವೈದ್ಯರು ಬಾಲಕಿಯ ಮೇಲೆ ಅತ್ಯಾಚಾರವಾಗಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಕಾರಣ ಪತಿಯೇ ಎಂದು ಅರಿತ ಪತ್ನಿ, ಪತಿಯ ವಿರುದ್ಧ ಪೊಲೀಸ್​ ಠಾಣೆಗೆ ದೂರು ನೀಡಿದ್ದಾಳೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಟ್ಯೂಷನ್​ನಿಂದ ಮರಳುತ್ತಿದ್ದ 10ನೇ ತರಗತಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ - Assam Girl Gangraped

ETV Bharat Logo

Copyright © 2024 Ushodaya Enterprises Pvt. Ltd., All Rights Reserved.