ETV Bharat / bharat

Watch: ಆಂಬ್ಯುಲೆನ್ಸ್ ಕಳವು: ಸಿನಿಮಾ ಸ್ಟೈಲಲ್ಲಿ ಪೊಲೀಸರಿಂದ ಚೇಸಿಂಗ್​... - AMBULANCE STOLEN

ಚಿನ್ನಾಭರಣ, ಹಣ ಕದಿಯುವ ಕಳ್ಳರನ್ನು ಪೊಲೀಸರು ಬೆನ್ನಟ್ಟಿಕೊಂಡು ಹಿಡಿಯುವ ಪ್ರಕರಣಗಳನ್ನು ನೋಡಿದ್ದಿರಿ. ಆದ್ರೆ ಇಲ್ಲೋರ್ವ ಚಾಲಾಕಿ ಆಂಬ್ಯುಲೆನ್ಸ್​​ ಅನ್ನೇ ಕದ್ದು ಪರಾರಿಯಾಗಿದ್ದ. ಆತನನ್ನು ಪೊಲೀಸರು ಚೇಸ್ ಮಾಡಿ ಹಿಡಿದಿದ್ದಾರೆ.

Ambulance Stolen
ಹೆದ್ದಾರಿಯಲ್ಲಿ ಪೊಲೀಸರಿಂದ ಚೇಸಿಂಗ್​ (ETV Bharat)
author img

By ETV Bharat Karnataka Team

Published : Dec 7, 2024, 2:39 PM IST

ಹೈದರಾಬಾದ್: ಸಿನಿಮಾ ಶೈಲಿಯಲ್ಲಿ ಕಳ್ಳನೊಬ್ಬ ಆಂಬ್ಯುಲೆನ್ಸ್ ಕದ್ದು ಪರಾರಿಯಾಗಿದ್ದ ಘಟನೆ ಹೈದರಾಬಾದ್​ನ ಹಯತ್‌ ನಗರದಲ್ಲಿ ನಡೆದಿದೆ. ಕಳ್ಳ ಚಾಪೆ ಕೆಳಗೆ ನುಗ್ಗಿದರೆ ಪೊಲೀಸರು ರಂಗೋಲಿ ಕೆಳಗೆ ನುಗ್ಗಿ, ತಕ್ಷಣವೇ ಕಾರ್ಯಪ್ರವೃತ್ತರಾಗಿ ಆತನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಕಳ್ಳನ ಪರಾರಿಯಾದ ಮತ್ತು ಆತನ ಸೆರೆಗೆ ಪೊಲೀಸರು ನಡೆಸಿದ ಚೇಸಿಂಗ್ ಚಲನಚಿತ್ರ ದೃಶ್ಯವನ್ನು ಮೀರಿಸುವಂತಿತ್ತು. ಹೈದರಾಬಾದ್​ನಿಂದ ಸೂರ್ಯಪೇಟೆಯವರೆಗೆ 100ಕ್ಕೂ ಹೆಚ್ಚು ಕಿಲೋ ಮೀಟರ್​ವರೆಗೆ ಪೊಲೀಸರು ಆಂಬ್ಯುಲೆನ್ಸ್​ಅನ್ನು ಬೆನ್ನತ್ತಿ ಹಿಡಿದಿದ್ದಾರೆ.

ಸಿನಿಮಾ ಸ್ಟೈಲಲ್ಲಿ ಹೈದರಾಬಾದ್-ವಿಜಯವಾಡ ಹೆದ್ದಾರಿಯಲ್ಲಿ ಪೊಲೀಸರಿಂದ ಚೇಸಿಂಗ್​ (ETV Bharat)

ಪೊಲೀಸರು ಬೆನ್ನು ಹತ್ತಿರುವುದನ್ನು ತಿಳಿದು ಸೈರನ್ ಮೊಳಗಿಸುತ್ತ ವೇಗವಾಗಿ ಓಡಿಸುವ ಭರದಲ್ಲಿ ಕಳ್ಳ ಓರ್ವ ವ್ಯಕ್ತಿಗೆ ಆಂಬ್ಯುಲೆನ್ಸ್​​ ಡಿಕ್ಕಿ ಹೊಡೆದಿದ್ದು, ಅವರು ತೀವ್ರವಾಗಿ ಗಾಯಗೊಂಡ ಘಟನೆಯೂ ನಡೆದಿದೆ. ಆದರೂ ನಿಲ್ಲಿಸಿದೇ ಏಕಾಏಕಿ ವಿಜಯವಾಡ ರಸ್ತೆಗೆ ಆಂಬ್ಯುಲೆನ್ಸ್​ಅನ್ನು ಕಳ್ಳ ಒಯ್ದಿದ್ದಾನೆ.

ಟೋಲ್‌ಗೇಟ್​ವೊಂದರಲ್ಲಿ ನುಗ್ಗಿ, ಅಲ್ಲಿನ ಗೇಟ್‌ಗೆ ಡಿಕ್ಕಿ ಹೊಡೆದು ಮುಂದೆ ಸಾಗಿದ್ದನು. ಕಳ್ಳನ ಮುಂದಿನ ನಡೆಯನ್ನು ಊಹಿಸಿದ್ದ ಪೊಲೀಸರು, ಮಾಹಿತಿ ರವಾನಿಸಿ ಸೂರ್ಯಪೇಟೆ ಬಳಿ ಲಾರಿಗಳನ್ನು ರಸ್ತೆಗೆ ಅಡ್ಡಲಾಗಿ ಇರಿಸಿ ಸುತ್ತುವರೆದು ಆತನನ್ನು ಸೆರೆಹಿಡಿದರು.

ಆಂಬ್ಯುಲೆನ್ಸ್​ ಕದ್ದಿದ್ದ ಈತ, ಈ ಹಿಂದೆ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದನೆಂದು ತಿಳಿದುಬಂದಿದೆ. ಆಂಬ್ಯುಲೆನ್ಸ್ ಡಿಕ್ಕಿಯಿಂದ ಗಾಯಗೊಂಡಿದ್ದ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದು, ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:ಕುವೈತ್​ ಬ್ಯಾಂಕ್​ಗೆ 700 ಕೋಟಿ ರೂ. ವಂಚನೆ; ಸಾಲ ಪಡೆದು ದೇಶ ತೊರೆದ 1,425 ಕೇರಳಿಗರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.