ETV Bharat / bharat

ಮುಂದುವರೆದ ಅಮರನಾಥ ಯಾತ್ರೆ: 24ದಿನದಲ್ಲಿ 4 ಲಕ್ಷ ಯಾತ್ರಿಕರಿಂದ ದರ್ಶನ - Amarnath Yatra continued - AMARNATH YATRA CONTINUED

52 ದಿನಗಳ ಯಾತ್ರೆ ಮುಂದಿನ ತಿಂಗಳು ಆಗಸ್ಟ್​​ 19ಕ್ಕೆ ಮುಕ್ತಾಯವಾಗಲಿದೆ.

Amarnath Yatra continued 2907 Pilgrims Leaves Jammu Base Camp Towards Cave Shrine In Kashmir
ಅಮರನಾಥ ಯಾತ್ರೆ (IANS)
author img

By ETV Bharat Karnataka Team

Published : Jul 24, 2024, 2:46 PM IST

ನವದೆಹಲಿ: ಅಮರನಾಥ ಯಾತ್ರೆ ಆರಂಭವಾದಾಗಿನಿಂದ ಇಲ್ಲಿಯವರೆಗೆ 4 ಲಕ್ಷ ಭಕ್ತರು ಹಿಮಲಿಂಗದ ದರ್ಶ ಪಡೆದಿದ್ದಾರೆ. ಇಂದು 2,907 ಭಕ್ತರನ್ನು ಹೊಂದಿರುವ ಹೊಸ ಬ್ಯಾಚ್​​ ತೆರಳಿದೆ ಎಂದು ವರದಿ ತಿಳಿಸಿದೆ.

ಕಳೆದ ವರ್ಷ ಇದೇ ಸಮಯಕ್ಕೆ 4.5 ಲಕ್ಷ ಜನರು ಹಿಮಾಕೃತಿಯ ಶಿವಲಿಂಗದ ದರ್ಶನ ಪಡೆದಿದ್ದರು. ಎರಡು ಮಾರ್ಗವಾಗಿ ಬಲ್ಟಾಲ್​ ಮತ್ತು ಪಹಲ್ಗಾಮ್​​ ಮಾರ್ಗವಾಗಿ ಬಹು ಹಂತದ ಭದ್ರತೆಯೊಂದಿಗೆ ಅಮರನಾಥ ಯಾತ್ರೆ ಸಾಗಿದೆ. 2907 ಯಾತ್ರಿಕರನ್ನು ಒಳಗೊಂಡ ಹೊಸ ತಂಡ ಬುಧವಾರ ಬೆಳಗ್ಗೆ 103 ವಾಹನದಲ್ಲಿ ಜಮ್ಮುವಿನ ಭಗವತಿ ನಗರ್​ ಯಾತ್ರಿ ನಿವಾಸದಿಂದ ತೆರಳಿದ್ದಾರೆ.

ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ 3,880 ಮೀಟರ್​​ ಎತ್ತರದಲ್ಲಿನ ಗುಹಾ ದೇಗುಲಕ್ಕೆ 26ನೇ ಯಾತ್ರಿಕರ ತಂಡ ಇಂದು ತೆರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಯಾತ್ರೆಯಲ್ಲಿ 194 ಪುರುಷರು, 598 ಮಹಿಳೆಯರು, 3 ಮಕ್ಕಳು, 31 ಸಾಧು ಮತ್ತು 13 ಸಾಧ್ವಿಯರಿದ್ದಾರೆ. 1134 ಮಂದಿ ಬಲ್ಟಾಲ್​ ಮಾರ್ಗದಿಂದ ತೆರಳಿದರೆ, 1,773 ಯಾತ್ರಿಕರು 62 ವಾಹನಗಳಲ್ಲಿ ಪಹಲ್ಗಾಮ್​ ಮಾರ್ಗದಿಂದ ತೆರಳಿದ್ದಾರೆ ಎಂದು ಮಾಹಿತಿ ನೀಡಿದರು.

ದರ್ಶನಕ್ಕೆ ತೆರಳುವ ಯಾತ್ರಿಗಳು ಪಹಲ್ಗಾಮ್​ ಗುಹೆಯಲ್ಲಿನ ದೇಗುಲಕ್ಕೆ ತೆರಳಲು 48ಕಿ.ಮೀ ದೂರದ ಸಾಂಪ್ರದಾಯಿಕ ಹಾದಿ ಅಥವಾ ಬಾಲ್ಟಲ್​ ಗುಹೆ ದೇಗುಲದ ಮೂಲಕ 14 ಕಿ.ಮೀ ಮೂಲಕ ಸಾಗಬಹುದು. ಪಹಲ್ಗಾಮ್​ ಹಾದಿ ಹಿಡಿದರೆ, ಶಿವಲಿಂಗನ ದರ್ಶನಕ್ಕೆ 4 ದಿನ ಬೇಕು. ಆದರೆ, ಬಾಲ್ಟಾಲ್​ ಮಾರ್ಗ ಶಾರ್ಟ್​ಕಟ್​ ಆಗಿದ್ದು, ಈ ಹಾದಿ ಮೂಲಕ ಸಾಗಿದಲ್ಲಿ ಅದೇ ದಿನ ದರ್ಶನ ಪಡೆದು, ಬೇಸ್​ ಕ್ಯಾಂಪ್​ಗೆ ಹಿಂತಿರುಗಬಹುದು.

ಜೂನ್​ 28ರಂದು ವರ್ಚುಯಲ್​ ಆಗಿ ಅಮರನಾಥ ಯಾತ್ರೆಯ ಪ್ರಾರ್ಥನಾ ಪೂಜೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್​​​ ಗವರ್ನರ್​ ಮನೋಜ್​ ಸಿನ್ಹಾ ಭಾಗಿಯಾಗುವ ಮೂಲಕ ಯಾತ್ರೆಗೆ ಹಸಿರು ನಿಶಾನೆ ತೋರಿದ್ದರು. ಜೂನ್​ 29ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿನ ಮಂಜಿನಾಕೃತಿಯ ಶಿವಲಿಂಗ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮೊದಲ ಬ್ಯಾಚ್​ನಲ್ಲಿ 1,28,404 ಯಾತ್ರಿಕರು ಈ ವಾರ್ಷಿಕ ಯಾತ್ರೆಯನ್ನು ನಡೆಸಿದ್ದರು. 52 ದಿನಗಳ ಯಾತ್ರೆ ಮುಂದಿನ ತಿಂಗಳು ಆಗಸ್ಟ್​​ 19ಕ್ಕೆ ಮುಕ್ತಾಯವಾಗಲಿದೆ.

ಯಾವುದೇ ಸಮಸ್ಯೆಯಾಗದಂತೆ ಸರಾಗವಾಗಿ ಯಾತ್ರೆ ನಡೆಸಲು ಎಲ್ಲ ಭದ್ರತೆ ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕೂಡಂಕುಳಂ ಅಣು ಸ್ಥಾವರದ ಬಳಿ ಸುತ್ತಾಡುತ್ತಿದ್ದ 6 ರಷ್ಯನ್ನರ ಬಂಧನ, ತೀವ್ರ ವಿಚಾರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.