ETV Bharat / bharat

ಟೈಮ್ಸ್​ ಜಾಗತಿಕ ಪ್ರಭಾವಿಗಳ ಪಟ್ಟಿ: ನಟಿ ಆಲಿಯಾ ಭಟ್​, ನಿರ್ದೇಶಕ ದೇವ್ ಪಟೇಲ್​ಗೆ ಸ್ಥಾನ - Influential List

ಟೈಮ್ಸ್​ನ ಜಾಗತಿಕ 100 ಪ್ರಭಾವಿ ವ್ಯಕ್ತಿಗಳ ಪಟ್ಟಿ ಬುಧವಾರ ಬಿಡುಗಡೆಯಾಗಿದೆ.

ಟೈಮ್ಸ್​ ಜಾಗತಿಕ ಪ್ರಭಾವಿಗಳ ಪಟ್ಟಿ
ಟೈಮ್ಸ್​ ಜಾಗತಿಕ ಪ್ರಭಾವಿಗಳ ಪಟ್ಟಿ
author img

By ETV Bharat Karnataka Team

Published : Apr 18, 2024, 9:13 AM IST

ನ್ಯೂಯಾರ್ಕ್: ಟೈಮ್ಸ್​ನ ಜಾಗತಿಕ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ ಬುಧವಾರ ಬಿಡುಗಡೆಯಾಗಿದ್ದು, ಅದರಲ್ಲಿ ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ, ಬಾಲಿವುಡ್ ನಟ ಆಲಿಯಾ ಭಟ್, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ, ಒಲಿಂಪಿಯನ್ ಕುಸ್ತಿಪಟು ಸಾಕ್ಷಿ ಮಲಿಕ್ ಮತ್ತು ನಟ- ನಿರ್ದೇಶಕ ದೇವ್ ಪಟೇಲ್ ಸ್ಥಾನ ಪಡೆದಿದ್ದಾರೆ.

2024ರ ಸಾಲಿನ ಟೈಮ್ಸ್​ನ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಅಮೆರಿಕದ ಡಿಪಾರ್ಟ್‌ಮೆಂಟ್ ಆಫ್ ಎನರ್ಜಿ ಲೋನ್​ ಪ್ರೋಗ್ರಾಮ್​ ಆಫೀಸ್​ನ ನಿರ್ದೇಶಕ ಜಿಗರ್ ಶಾ, ಖಗೋಳಶಾಸ್ತ್ರದ ಪ್ರಾಧ್ಯಾಪಕಿ ಮತ್ತು ಯೇಲ್ ವಿಶ್ವವಿದ್ಯಾಲಯದ ಭೌತಶಾಸ್ತ್ರದ ಪ್ರಾಧ್ಯಾಪಕಿ ಪ್ರಿಯಂವದಾ ನಟರಾಜನ್, ಭಾರತೀಯ ಮೂಲದ ರೆಸ್ಟೊರೇಟರ್ ಅಸ್ಮಾ ಖಾನ್, ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿಯ ಅವರ ವಿಧವಾ ಪತ್ನಿ ಯೂಲಿಯಾ ನವಲ್ನಿಯಾ ಅವರೂ ಇದ್ದಾರೆ.

ಡಿಜಿಟಲ್​ ಆರ್ಥಿಕತೆಯಲ್ಲಿ ಬದಲಾವಣೆ: ಅಮೆರಿಕದ ಹಣಕಾಸು ಇಲಾಖೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಹೇಳುವಂತೆ, ಕೌಶಲ್ಯ ಮತ್ತು ಉತ್ಸಾಹವನ್ನು ಹೊಂದಿರುವ ನಾಯಕನನ್ನು ಹುಡುಕುವುದು ಸುಲಭವಲ್ಲ. ಆದರೆ, ಕಳೆದ ಜೂನ್‌ನಲ್ಲಿ ವಿಶ್ವ ಬ್ಯಾಂಕ್ ಅಧ್ಯಕ್ಷರಾದ ಅಜಯ್ ಬಂಗಾ ಅವರು ಮಹತ್ತರ ಬದಲಾವಣೆ ತಂದಿದ್ದಾರೆ. ಜಾಗತಿಕ ಸಂಸ್ಥೆಯನ್ನು ಮುನ್ನಡೆಸಿದ ಅವರು, ಬ್ಯಾಂಕ್ ಇಲ್ಲದ ಲಕ್ಷಾಂತರ ಜನರನ್ನು ಡಿಜಿಟಲ್ ಆರ್ಥಿಕತೆಗೆ ಒಳಪಡಿಸಿದರು ಎಂದು ಬಣ್ಣಿಸಿದ್ದಾರೆ.

ಆಲಿಯಾ ಭಟ್​ಗೆ ಸಿನಿಮಾವೊಂದರಲ್ಲಿ ಆ್ಯಕ್ಷನ್​ ಕಟ್​ ಹೇಳುತ್ತಿರುವ ನಿರ್ದೇಶಕ, ನಿರ್ಮಾಪಕ ಮತ್ತು ಬರಹಗಾರ ಟಾಮ್ ಹಾರ್ಪರ್ ಹೇಳುವಂತೆ, ಟೈಮ್ ಪಟ್ಟಿಯಲ್ಲಿಸ ಸ್ಥಾನ ಪಡೆದ ನಟಿ ಆಲಿಯಾ ಭಟ್​ ತಮ್ಮ ನಟನೆಯಿಂದಲೇ ಗಮನ ಸೆಳೆದವರು. ಒಂದು ದಶಕದಿಂದ ಅವರು ಭಾರತೀಯ ಚಲನಚಿತ್ರೋದ್ಯಮದಲ್ಲಿ ಅದ್ಭುತವಾಗಿ ತೊಡಗಿಸಿಕೊಂಡಿದ್ದಾರೆ. ನಟಿಯಲ್ಲದೇ, ಓರ್ವ ವ್ಯಕ್ತಿಯಾಗಿಯೂ ಆಲಿಯಾ ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಅವರು ಪ್ರೊಫೈಲ್​ನಲ್ಲಿ ಹೊಗಳಿದ್ದಾರೆ.

ಎಐ ಅಭಿವೃದ್ಧಿ: ಇನ್ನೂ ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾಡೆಲ್ಲಾ ಅವರ ಕುರಿತು ಟೈಮ್ ವಿವರಿಸುವಂತೆ, OpenAI ನಲ್ಲಿ ಮೈಕ್ರೋಸಾಫ್ಟ್‌ನ ಗಮನಾರ್ಹ ಹೂಡಿಕೆ ಮತ್ತು Mistral AI ಜೊತೆಗಿನ ಪಾಲುದಾರಿಕೆಯು ನಾಡೆಲ್ಲಾ ಅವರ ಬುದ್ಧಿವಂತಿಕೆಯಾಗಿದೆ. AI ಮಾನವರ ಸಶಕ್ತಗೊಳಿಸುವ ಸಾಧನವಾಗಿ ನೋಡುತ್ತಾರೆ ಎಂದು ಹೇಳಿದೆ.

ಕುಸ್ತಿಪಟುಗಳ ಪರವಾಗಿ ಹೋರಾಡಿದ ಮತ್ತು ಒಲಿಂಪಿಯನ್​ ಸಾಕ್ಷಿ ಮಲಿಕ್​ ಅವರು, ಜಾಗತಿಕ ಪ್ರಭಾವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಕಳೆದ ವರ್ಷ ಕುಸ್ತಿ ಸಂಸ್ಥೆ ಜೊತೆಗೇ ನಿರಂತರ ಯುದ್ಧ ಮಾಡಿದ್ದರು. ಇದು ದೇಶದಾದ್ಯಂತ ಬೆಂಬಲ ಮತ್ತು ಪ್ರಪಂಚದಾದ್ಯಂತ ಗಮನ ಸೆಳೆಯಿತು. ಈ ಹೋರಾಟವು ಮುಂದೆ ಭಾರತದ ಮಹಿಳಾ ಕುಸ್ತಿಪಟುಗಳಿಗೆ ಮಾತ್ರವಲ್ಲ, ಭಾರತದ ಹೆಣ್ಣುಮಕ್ಕಳಿಗಾಗಿ ಧ್ವನಿಯಾಗಿರಲಿದೆ.

ಇದನ್ನೂ ಓದಿ: ಸಿಡ್ನಿ ಶಾಪಿಂಗ್​ ಸೆಂಟರ್​​ನಲ್ಲಿ ಚಾಕುವಿನಿಂದ ದಾಳಿ: ಐವರು ಸಾವು, ಮಗು ಸೇರಿ ನಾಲ್ವರಿಗೆ ಗಾಯ - Knife Attack in Sydney

ETV Bharat Logo

Copyright © 2024 Ushodaya Enterprises Pvt. Ltd., All Rights Reserved.