ETV Bharat / bharat

2021ರಲ್ಲಿ ಭಾರತದಲ್ಲಿ ವಾಯುಮಾಲಿನ್ಯದಿಂದ 21 ಲಕ್ಷ ಜನರ ಸಾವು! - Air Pollution Deaths In India - AIR POLLUTION DEATHS IN INDIA

ವಾಯುಮಾಲಿನ್ಯದಿಂದ 2021ರಲ್ಲಿ ಭಾರತ ಮತ್ತು ಚೀನಾಗಳಲ್ಲಿ ಕ್ರಮವಾಗಿ 2.1 ಮಿಲಿಯನ್ (21 ಲಕ್ಷ) ಮತ್ತು 2.3 ಮಿಲಿಯನ್ (23 ಲಕ್ಷ) ಜನ ಸಾವಿಗೀಡಾಗಿದ್ದಾರೆ ಎಂದು ವರದಿ ಹೇಳಿದೆ.

ದೆಹಲಿಯಲ್ಲಿ ವಾಯುಮಾಲಿನ್ಯದ ದೃಶ್ಯ (ಸಂಗ್ರಹ ಚಿತ್ರ)
ಸಾಂದರ್ಭಿಕ ಚಿತ್ರ (IANS)
author img

By PTI

Published : Jun 19, 2024, 4:08 PM IST

ನವದೆಹಲಿ: ವಾಯುಮಾಲಿನ್ಯದಿಂದ 2021ರಲ್ಲಿ ಭಾರತ ಮತ್ತು ಚೀನಾಗಳಲ್ಲಿ ಕ್ರಮವಾಗಿ 2.1 ಮಿಲಿಯನ್ (21 ಲಕ್ಷ) ಮತ್ತು 2.3 ಮಿಲಿಯನ್ (23 ಲಕ್ಷ) ಜನ ಸಾವಿಗೀಡಾಗಿದ್ದಾರೆ ಎಂದು ಬುಧವಾರ ಬಿಡುಗಡೆಯಾದ ವರದಿ ತಿಳಿಸಿದೆ. ವಿಶ್ವಾದ್ಯಂತ 2021ರಲ್ಲಿ ವಾಯುಮಾಲಿನ್ಯದಿಂದ 8.1 ಮಿಲಿಯನ್ ಜನ ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ.

ಯುನಿಸೆಫ್ ಸಹಭಾಗಿತ್ವದಲ್ಲಿ ಯುಎಸ್ ಮೂಲದ ಸ್ವತಂತ್ರ ಸಂಶೋಧನಾ ಸಂಸ್ಥೆಯಾದ ಹೆಲ್ತ್ ಎಫೆಕ್ಟ್ಸ್ ಇನ್ ಸ್ಟಿಟ್ಯೂಟ್ (ಎಚ್ಇಐ) ಪ್ರಕಟಿಸಿದ ವರದಿಯಲ್ಲಿ, ವಾಯುಮಾಲಿನ್ಯವು 2021 ರಲ್ಲಿ ಭಾರತದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 1,69,400 ಮಕ್ಕಳ ಸಾವಿಗೆ ಕಾರಣವಾಗಿದೆ ಎಂದು ಹೇಳಿದೆ.

1,14,100 ಮಕ್ಕಳ ಸಾವಿನೊಂದಿಗೆ ನೈಜೀರಿಯಾ ನಂತರದ ಸ್ಥಾನದಲ್ಲಿದೆ. ಹಾಗೆಯೇ ಪಾಕಿಸ್ತಾನದಲ್ಲಿ 68,100, ಇಥಿಯೋಪಿಯಾದಲ್ಲಿ 31,100 ಮತ್ತು ಬಾಂಗ್ಲಾದೇಶದಲ್ಲಿ 19,100 ಮಕ್ಕಳು ವಾಯುಮಾಲಿನ್ಯಕ್ಕೆ ಬಲಿಯಾಗಿವೆ. ದಕ್ಷಿಣ ಏಷ್ಯಾದಲ್ಲಿನ ಸಾವುಗಳಿಗೆ ವಾಯುಮಾಲಿನ್ಯವು ಪ್ರಮುಖ ಅಪಾಯಕಾರಿ ಅಂಶವಾಗಿದೆ. ಅಧಿಕ ರಕ್ತದೊತ್ತಡ, ಆಹಾರ ಶೈಲಿ ಮತ್ತು ತಂಬಾಕಿನಿಂದ ಸಂಭವಿಸುವ ಸಾವುಗಳು ನಂತರದ ಸ್ಥಾನದಲ್ಲಿವೆ ಎಂದು ವರದಿ ಹೇಳಿದೆ.

"2021 ರಲ್ಲಿ ವಾಯುಮಾಲಿನ್ಯದಿಂದ ಸಂಭವಿಸಿದ ಸಾವುಗಳ ಸಂಖ್ಯೆ ಈ ಹಿಂದಿನ ಯಾವುದೇ ವರ್ಷಕ್ಕಿಂತ ಹೆಚ್ಚಾಗಿದೆ. ತಲಾ 1 ಬಿಲಿಯನ್ ಜನಸಂಖ್ಯೆಯ ಭಾರತ ಹಾಗೂ ಚೀನಾಗಳಲ್ಲಿ ವಾಯುಮಾಲಿನ್ಯದಿಂದ ಕ್ರಮವಾಗಿ 2.1 ಮಿಲಿಯನ್ ಮತ್ತು 2.3 ಮಿಲಿಯನ್ ಸಾವು ಸಂಭವಿಸಿವೆ. ಇದು ಒಟ್ಟು ಜಾಗತಿಕ ವಾಯುಮಾಲಿನ್ಯದ ಕಾರಣದಿಂದ ಉಂಟಾದ ಸಾವಿನ ಶೇಕಡಾ 54 ರಷ್ಟಿದೆ." ಎಂದು ವರದಿ ತಿಳಿಸಿದೆ.

ವಾಯುಮಾಲಿನ್ಯದಿಂದ ಹೆಚ್ಚು ಬಾಧೆಗೊಳಗಾದ ಇತರ ದೇಶಗಳು ಹೀಗಿವೆ: ದಕ್ಷಿಣ ಏಷ್ಯಾದಲ್ಲಿ ಪಾಕಿಸ್ತಾನ (2,56,000 ಸಾವುಗಳು), ಬಾಂಗ್ಲಾದೇಶ (2,36,300) ಮತ್ತು ಮ್ಯಾನ್ಮಾರ್ (1,01,600 ಸಾವುಗಳು). ಆಗ್ನೇಯ ಏಷ್ಯಾದಲ್ಲಿ ಇಂಡೋನೇಷ್ಯಾ (2,21,600 ಸಾವುಗಳು), ವಿಯೆಟ್ನಾಂ (99,700 ಸಾವುಗಳು) ಮತ್ತು ಫಿಲಿಪೈನ್ಸ್ (98,209); ಮತ್ತು ಆಫ್ರಿಕಾದಲ್ಲಿ ನೈಜೀರಿಯಾ (2,06,700 ಸಾವುಗಳು) ಮತ್ತು ಈಜಿಪ್ಟ್ (1,16,500 ಸಾವುಗಳು).

ಒಟ್ಟಾರೆಯಾಗಿ, ಪಿಎಂ 2.5 ಮತ್ತು ಓಝೋನ್ ನಿಂದ ಉಂಟಾಗುವ ವಾಯುಮಾಲಿನ್ಯದಿಂದ 2021 ರಲ್ಲಿ 8.1 ಮಿಲಿಯನ್ ಸಾವು ಸಂಭವಿಸಿವೆ ಎಂದು ಅಂದಾಜಿಸಲಾಗಿದೆ. ಇದು ಒಟ್ಟು ಜಾಗತಿಕ ಸಾವುಗಳ ಶೇಕಡಾ 12 ರಷ್ಟಿದೆ. ಈ ಜಾಗತಿಕ ವಾಯುಮಾಲಿನ್ಯದ ಸಾವುಗಳಲ್ಲಿ 90 ಪ್ರತಿಶತಕ್ಕೂ ಹೆಚ್ಚು ಅಂದರೆ 7.8 ಮಿಲಿಯನ್ ಜನರು ಪಿಎಂ 2.5 ವಾಯುಮಾಲಿನ್ಯದ ಕಾರಣದಿಂದ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಮಾಜಿ ಸಿಎಂ ಬನ್ಸಿಲಾಲ್ ಸೊಸೆ ಕಿರಣ್ ಚೌಧರಿ - Congress leaders join BJP

ETV Bharat Logo

Copyright © 2025 Ushodaya Enterprises Pvt. Ltd., All Rights Reserved.