ETV Bharat / bharat

ಜಮ್ಮು ಕಾಶ್ಮೀರದಲ್ಲಿ ಖಾತೆ ತೆರೆದ ಎಎಪಿ: ಬಿಜೆಪಿ ಕ್ಷೇತ್ರ ಆಪ್​ ವಶಕ್ಕೆ

ಜಮ್ಮು ಪ್ರಾಂತ್ಯದ ದೋಡಾದಲ್ಲಿ ಎಎಪಿ ಅಭ್ಯರ್ಥಿ ಮೆಹ್​​ರಾಜ್​ ಮಲ್ಲಿಕ್ ಅವರು​ ಬಿಜೆಪಿಯ ಗಜಯ್​ ಸಿಂಗ್​ ರಾಣಾ ವಿರುದ್ಧ 4,470 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

author img

By ETV Bharat Karnataka Team

Published : 3 hours ago

AAP Mehraj amlik won doda Seat in jammu and Kashmir Election
ಎಎಪಿ ಅಭ್ಯರ್ಥಿ ಮೆಹ್​​ರಾಜ್​ ಮಲ್ಲಿಕ್ ಗೆಲುವು (IANS)

ಜಮ್ಮು: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಆಮ್​ ಆದ್ಮಿ ಪಕ್ಷ (ಎಎಪಿ) ಜಮ್ಮು ಮತ್ತು ಕಾಶ್ಮೀರದಲ್ಲಿ ಗೆಲುವಿನ ರುಚಿ ಕಂಡಿದೆ. ಬಿಜೆಪಿ ಪ್ರಾಬಲ್ಯದ ಕ್ಷೇತ್ರದಲ್ಲಿ ಜಯಭೇರಿ ಬಾರಿಸುವ ಮೂಲಕ ಕಣಿವೆ ನಾಡಿನಲ್ಲಿ ಇದೇ ಮೊದಲ ಬಾರಿಗೆ ಖಾತೆ ತೆರೆಯಿತು.

ಜಮ್ಮು ಪ್ರಾಂತ್ಯದ ದೋಡಾದಲ್ಲಿ ಎಎಪಿ ಅಭ್ಯರ್ಥಿ ಮೆಹ್​​ರಾಜ್​ ಮಲ್ಲಿಕ್ ಅವರು​ ಬಿಜೆಪಿಯ ಗಜಯ್​ ಸಿಂಗ್​ ರಾಣಾ ವಿರುದ್ಧ 4,470 ಮತಗಳಿಂದ ಗೆಲುವು ಪಡೆದಿದ್ದಾರೆ. ಮಲ್ಲಿಕ್​ 22,944 ಮತಗಳನ್ನು ಪಡೆದರೆ, ರಾಣಾ 18,174 ಮತ ಗಳಿಸಿದ್ದಾರೆ. ನ್ಯಾಷನಲ್​ ಕಾನ್ಫರೆನ್ಸ್​​ನ ನಜೂಬ್​ ಸುಗ್ರವಾರ್ಡ್ಯ್​​ 12,975 ಮತಗಳಿಸಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಶೇಖ್​​ ರಿಯಾಜ್​ ಅಹ್ಮದ್ ಅವರಿಗೆ​​ 4,087 ಮತಗಳು ಬಿದ್ದಿವೆ.

ಮುಸ್ಲಿಂ ಪ್ರಾಬಲ್ಯವಿರುವ ಈ ಕ್ಷೇತ್ರವನ್ನು 2014ರಲ್ಲಿ ಬಿಜೆಪಿ ಗೆದ್ದಿತ್ತು. ಇದೀಗ ಎಎಪಿ ತನ್ನ ತೆಕ್ಕೆಗೆ ಪಡೆದಿದೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್​​ ಅಭ್ಯರ್ಥಿ ವಾನಿ ಅವರನ್ನು ಸೋಲಿಸಿ ಬಿಜೆಪಿಯ ಶಕ್ತಿ ರಾಹ್​ ಪರಿಹರ್​​ ಗೆಲುವು ಕಂಡಿದ್ದರು.

2013ರಲ್ಲಿ ಎಎಪಿ ಸೇರಿದ್ದ ಮಲ್ಲಿಕ್​, ಕಹರ ಕ್ಷೇತ್ರದಿಂದ ಜಿಲ್ಲಾ ಅಭಿವೃದ್ದಿ ಮಂಡಳಿ (ಡಿಡಿಸಿ) ಕೌನ್ಸಿಲರ್​ ಆಗಿ ಆಯ್ಕೆಯಾಗಿದ್ದರು. ಮಲ್ಲಿಕ್​ ಗೆಲುವನ್ನು ಪಕ್ಷದ ಮುಖ್ಯಸ್ಥರಾಗಿರುವ ಅರವಿಂದ್​ ಕೇಜ್ರಿವಾಲ್​ ಸ್ವಾಗತಿಸಿ, ಶುಭ ಕೋರಿದ್ದಾರೆ.

ಈ ಕುರಿತು 'ಎಕ್ಸ್'​ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಕೇಜ್ರಿವಾಲ್​, 'ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಅಭೂತಪೂರ್ವ ಗೆಲುವು ಕಂಡಿರುವ ಎಎಪಿಯ ದೋಡಾ ಅಭ್ಯರ್ಥಿ ಮೆಹ್​ರಾಜ್​ ಮಲ್ಲಿಕ್​ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು' ಎಂದು ತಿಳಿಸಿದ್ದಾರೆ.

ನ್ಯಾಷನಲ್​ ಕಾನ್ಫರೆನ್​​-ಕಾಂಗ್ರೆಸ್​ ಮೈತ್ರಿಕೂಟ ಸರಳ ಬಹುಮತ ಪಡೆಯುವ ಮೂಲಕ ಸರ್ಕಾರ ರಚಿಸಲು ಸಜ್ಜಾಗಿವೆ.(ಐಎಎನ್​ಎಸ್​)

ಇದನ್ನೂ ಓದಿ: ಕುಟುಂಬ ರಾಜಕಾರಣದ ಟೀಕೆಯ ಮಧ್ಯೆ ಜಮ್ಮು ಕಾಶ್ಮೀರದಲ್ಲಿ ಗೆದ್ದ ನ್ಯಾಷನಲ್​ ಕಾನ್ಫರೆನ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.