ಹರ್ದೋಯಿ (ಉತ್ತರಪ್ರದೇಶ): ಭಿಕ್ಷೆ ಬೇಡಲು ಮನೆಗೆ ಬರುತ್ತಿದ್ದವನ ಜೊತೆ ಪತ್ನಿ ಓಡಿ ಹೋಗಿದ್ದಾಳೆ ಎಂದು ಪತಿ ಆರೋಪಿದ್ದ ಪ್ರಕರಣ ಸುಳ್ಳು ಮತ್ತು ಆಧಾರರಹಿತ ಎಂದು ಪೊಲೀಸರು ತಿಳಿಸಿದ್ದಾರೆ. 'ಪತಿಯ ಕಿರುಕುಳ, ಚಿತ್ರಹಿಂಸೆ ತಾಳಲಾರದೇ ಸಂಬಂಧಿಕರ ಮನೆಗೆ ಹೋಗಿದ್ದೆ' ಎಂದು ಪೊಲೀಸರ ಮುಂದೆ ಮಹಿಳೆ ಸ್ಪಷ್ಟಪಡಿಸಿದ್ದಾರೆ.
ಪತಿಯ ಕಿರುಕುಳ ತಾಳಲಾರದೇ ಸಂಬಂಧಿಕರ ಮನೆಗೆ ಹೋಗಿದ್ದೆ ಎಂದು ಮಹಿಳೆ ಹೇಳಿಕ ದಾಖಲಿಸಿದ್ದಾರೆ. ಆದ್ದರಿಂದ ಮಹಿಳೆ ಓಡಿ ಹೋಗಿದ್ದಾಳೆ ಎನ್ನುವುದು ಆಧಾರ ರಹಿತ ಮತ್ತು ಸುಳ್ಳು. ಈ ಕುರಿತು ತನಿಖೆ ಕೈಗೊಂಡಿರುವುದಾಗಿ ಹರ್ದೋಯಿ ಪೊಲೀಸರು ತಿಳಿಸಿದ್ದಾರೆ.
कतिपय सोशल मीडिया प्लेटफॉर्म पर थाना हरपालपुर क्षेत्रांतर्गत वायरल खबर के संबंध में- pic.twitter.com/NdqGApUmMI
— Hardoi Police (@hardoipolice) January 7, 2025
ಪ್ರಕರಣದ ವಿವರ: ರಾಜು ಎಂಬಾತ ನೀಡಿದ ದೂರಿನ ಪ್ರಕಾರ, ತಾವು ಹರ್ದೋಯಿ ನಗರದ ನಿವಾಸಿಯಾಗಿದ್ದು, ಪತ್ನಿ ಮತ್ತು 6 ಮಕ್ಕಳು ಇದ್ದಾರೆ. ನಾವು ವಾಸಿಸುವ ಓಣಿಯಲ್ಲಿ ನನ್ಹೆ ಪಂಡಿತ್ ಎಂದು ಗುರುತಿಸಲಾಗುವ ಭಿಕ್ಷುಕ ದಿನವೂ ಭಿಕ್ಷೆಗೆ ಬರುತ್ತಿದ್ದ. ಭಿಕ್ಷೆ ಪಡೆಯುವ ನೆಪದಲ್ಲಿ ಮನೆಯೊಡತಿಯನ್ನು ಪುಸಲಾಯಿಸಿದ್ದಾನೆ. ಜನವರಿ 3 ರಂದು ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಪತ್ನಿಯು ಬಟ್ಟೆ ಮತ್ತು ತರಕಾರಿ ಖರೀದಿಸಲು ಮಾರುಕಟ್ಟೆಗೆ ತೆರಳುವುದಾಗಿ ತನ್ನ ಮಗಳಿಗೆ ತಿಳಿಸಿದ್ದಳು. ಸಂಜೆಯಾದರೂ ಆಕೆ ಮನೆಗೆ ವಾಪಸ್ ಬರಲಿಲ್ಲ. ಆತಂಕದಲ್ಲಿ ನಾವು ಎಲ್ಲ ಕಡೆಯೂ ಹುಡುಕಾಡಿದೆವು. ಎಲ್ಲೂ ಪತ್ತೆಯಾಗದ ಕಾರಣ, ಭಿಕ್ಷುಕನ ಜೊತೆ ಹೋಗಿರುವ ಶಂಕೆಯ ಮೇಲೆ ದೂರು ನೀಡಿದ್ದಾಗಿ ಪತಿ ಹೇಳಿದ್ದರು.
ನನ್ನ ಪತ್ನಿ ಮತ್ತು ಭಿಕ್ಷುಕ ನನ್ಹೆ ಪಂಡಿತ್ ನಡುವೆ ಸಲುಗೆ ಬೆಳೆದಿತ್ತು. ಆತ ನಿತ್ಯವೂ ತಿರುಪೆಗಾಗಿ ಏರಿಯಾದಲ್ಲಿ ಬಂದಾಗ ಪತ್ನಿಯ ಜೊತೆಗೆ ಹರಟೆ ಹೊಡೆಯುತ್ತಿದ್ದ. ಪತ್ನಿಯೂ ಫೋನ್ನಲ್ಲಿ ಆತನೊಂದಿಗೆ ಮಾತನಾಡುತ್ತಿದ್ದಳು. ಎಮ್ಮೆ ಮಾರಾಟದಿಂದ ಬಂದ ಹಣವನ್ನೂ ಆಕೆ ತೆಗೆದುಕೊಂಡು ಹೋಗಿದ್ದಾಳೆ ಎಂದು ದೂರುದಾರ ರಾಜು ತನ್ನ ದೂರಿನಲ್ಲಿ ಆರೋಪಿಸಿದ್ದರು.
ಅಪಹರಣ ಕೇಸ್ ದಾಖಲು : ರಾಜು ನೀಡಿದ ದೂರಿನನ್ವಯ ಪೊಲೀಸರು ಭಿಕ್ಷುಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 87ರ ಪ್ರಕಾರ ಅಪಹರಣ ಕೇಸ್ ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ: ಅತ್ಯಾಚಾರ ಅಪರಾಧಿ ಆಸಾರಾಮ್ ಬಾಪುಗೆ ಸುಪ್ರೀಂ ಕೋರ್ಟ್ನಿಂದ ಮಧ್ಯಂತರ ಜಾಮೀನು