ETV Bharat / bharat

31 ವರ್ಷ ಕ್ಲರ್ಕ್​, 52ನೇ ವಯಸ್ಸಿನಲ್ಲಿ ವಕೀಲ: ಕಾಸರಗೋಡಿನ ಈ ವ್ಯಕ್ತಿಯ ಸಾಧನೆ ಸಣ್ಣದಲ್ಲ! - Clerk Become Advocate

31 ವರ್ಷಗಳ ಕಾಲ ವಕೀಲರ ಬಳಿಕ ಕ್ಲರ್ಕ್​ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಇದೀಗ, ಅದೇ ಕೋರ್ಟ್​ನಲ್ಲಿ ವಕೀಲರಾಗಿ ಸೇವೆ ಆರಂಭಿಸಿದ್ದಾರೆ. ಇವರ ಸಾಧನೆಯ ಹಾದಿಯೇ ರೋಚಕ ಮತ್ತು ಅನುಕರಣೀಯ.

31 ವರ್ಷ ಕ್ಲರ್ಕ್​ ಉದ್ಯೋಗ, 52ನೇ ವಯಸ್ಸಿನಲ್ಲಿ ವಕೀಲ
ಅಪರೂಪದ ಸಾಧಕ ಈ ಕಾಸರಗೋಡಿನ ವ್ಯಕ್ತಿ (ETV Bharat)
author img

By ETV Bharat Karnataka Team

Published : Aug 22, 2024, 5:52 PM IST

ಕಾಸರಗೋಡು(ಕೇರಳ): ಮನುಷ್ಯನಿಗೆ ಹಟ ಮತ್ತು ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು. ಇದಕ್ಕೆ ವಯಸ್ಸು ಎಂಬುದು ಸವಾಲೇ ಅಲ್ಲ. ಇದನ್ನು ಕೇರಳದ ವ್ಯಕ್ತಿಯೊಬ್ಬ ಸಾಬೀತು ಮಾಡಿದ್ದಾರೆ. ತಾನು ಮಾಡುತ್ತಿದ್ದ ಗುಮಾಸ್ತ ಕೆಲಸವನ್ನು ಮೆಟ್ಟಿ ಇಂದು, ವಕೀಲರಾಗಿ ಗೌರವ ಸಂಪಾದನೆ ಮಾಡಿದ್ದಾರೆ. ಇದರ ಹಿಂದಿನ ಶ್ರಮ ಅಷ್ಟಿಷ್ಟಲ್ಲ ಎಂಬುದು ಮಾತ್ರ ವಿಶೇಷ.

ಕೇರಳದ ಗಡಿ ಜಿಲ್ಲೆಯಾದ ಕಾಸರಗೋಡಿನ ಕೊಸುಯಲ್ ಪಾಳ್ಯಂನ ಗಂಗಾಧರನ್​ ಎಂಬವರೇ ಈ ಸಾಧಕರು. ನ್ಯಾಯಾಲಯದಲ್ಲಿ ಗುಮಾಸ್ತ (ಕ್ಲರ್ಕ್​)ರಾಗಿ ಕೆಲಸ ಮಾಡುತ್ತಿದ್ದ ಇವರು, ಇದೀಗ ಅದೇ ನ್ಯಾಯಾಲಯದಲ್ಲಿ ವಕೀಲಿಕೆ ಆರಂಭಿಸಿದ್ದಾರೆ. ಅದೂ ತಮ್ಮ 52ನೇ ವಯಸ್ಸಿನಲ್ಲಿ!. ವಕೀಲರ ಕೇಸ್​ ಫೈಲ್​ಗಳನ್ನು ಸಾಗಿಸುತ್ತಿದ್ದ ವ್ಯಕ್ತಿ, ಈಗ ಅಂತಹ ಕೇಸ್​ಗಳನ್ನು ತಾವೇ ವಹಿಸಿಕೊಂಡು ವಾದಿಸುತ್ತಿದ್ದಾರೆ.

ಸಾಧಕನ ಹಾದಿ..: ಗಂಗಾಧರನ್ 1992ರಲ್ಲಿ ಇಲ್ಲಿನ ನ್ಯಾಯಾಲಯದಲ್ಲಿ ಕ್ಲರ್ಕ್ ಆಗಿ ಸೇವೆಗೆ ಸೇರಿದ್ದರು. ಅಂದಿನಿಂದ, ಅನೇಕ ವಕೀಲರ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಹಲವಾರು ವಕೀಲರ ಸಂಪರ್ಕದಿಂದ ತಾವೂ ಲಾಯರ್​ ಆಗಬೇಕು ಎಂಬ ಆಸೆ ಚಿಗುರೊಡೆದಿದೆ. ಇದನ್ನು ಸಾಕಾರ ಮಾಡಬೇಕು ಎಂದುಕೊಂಡು ಹಲವರ ಬಳಿ ಸಲಹೆಯನ್ನೂ ಪಡೆದಿದ್ದಾರೆ. ತಮ್ಮ ಚಿಕ್ಕ ವಯಸ್ಸಿನಲ್ಲಿ ಹಲವು ಕಾರಣಗಳಿಂದ ಓದಲು ಸಾಧ್ಯವಾಗಿರಲಿಲ್ಲ. ಆ ಆಸೆಯನ್ನು ಅವರು ಪೂರ್ತಿ ಮಾಡಿಕೊಳ್ಳಲು ಬಯಸಿದ್ದರು.

ಗುಮಾಸ್ತ ಕೆಸಲದಲ್ಲಿ ಇದ್ದುಕೊಂಡೇ 2019ರಲ್ಲಿ ಕಣ್ಣೂರು ವಿಶ್ವವಿದ್ಯಾಲಯದಿಂದ ಮಲಯಾಳಂನಲ್ಲಿ ಪದವಿ (ಬಿಎ) ಪೂರ್ಣಗೊಳಿಸಿದರು. ನಂತರ, 2020ರಲ್ಲಿ ಎಲ್‌ಎಲ್‌ಬಿ ಮಾಡಲು ಸುಳ್ಯದ ಕೆವಿಜಿ ಕಾನೂನು ಕಾಲೇಜು ಸೇರಿದರು. ಕಾಲೇಜು ಮತ್ತು ಕೋರ್ಟ್​ ದೂರವಿದ್ದರೂ, ಶಿಕ್ಷಣ ಪೂರೈಸಲು ಅವರು ಕಷ್ಟವಾದರೂ ದೂರ ಪ್ರಯಾಣ ಮಾಡುತ್ತಿದ್ದರು. ಕೊನೆಯಲ್ಲಿ ಗಂಗಾಧರನ್​ ಅವರು ಎಲ್​ಎಲ್​ಬಿ ಕೂಡ ಮುಗಿಸಿದ್ದಾರೆ. ಇತ್ತೀಚೆಗೆ ವಕೀಲರಾಗಿ ನೋಂದಾಯಿಸಿಕೊಂಡಿದ್ದಾರೆ. ಅವರು ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ನ್ಯಾಯಾಲಯದಲ್ಲೇ ಈಗ ವಕೀಲರಾಗಿ ಅಭ್ಯಾಸ ಆರಂಭಿಸಿದ್ದಾರೆ.

ಮೂರು ದಶಕಗಳ ಕಾಲ ವಕೀಲರ ಬಳಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದ ಗಂಗಾಧರ್​ ಈಗ ತಾವೇ ವಕೀಲರಾಗಿ ಗುರುತಿಸಿಕೊಂಡಿದ್ದು, ಅವರೊಂದಿಗೆ ಒಡನಾಟ ಹೊಂದಿದ್ದ ವಕೀಲರು ಅಚ್ಚರಿಯ ಜೊತೆಗೆ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನ ವ್ಯಕ್ತಿಯೊಬ್ಬರು ಕೂಡ ಇದೇ ರೀತಿ ಅದ್ಭುತ ಸಾಧನೆ ಮಾಡಿದ್ದರು. ಯಾವುದೋ ಪ್ರಕರಣದಲ್ಲಿ ಜೈಲು ಸೇರಿದ್ದರು. ಅಲ್ಲಿ ಅವರು ಸಮಯ ವ್ಯರ್ಥ ಮಾಡದೆ, ಶಿಲ್ಪಕಲೆಯನ್ನು ಅಭ್ಯಾಸ ಮಾಡಿದ್ದರು. ಇದೀಗ ಅವರು ಹೆಸರಾಂತ ಶಿಲ್ಪಿಯಾಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ: ಕಾಂಗ್ರೆಸ್​, ನ್ಯಾಷನಲ್​ ಕಾನ್ಫ್​ರೆನ್ಸ್​ ಮೈತ್ರಿ ಫಿಕ್ಸ್​ - JK Assembly Polls

ETV Bharat Logo

Copyright © 2024 Ushodaya Enterprises Pvt. Ltd., All Rights Reserved.