ETV Bharat / bharat

ದೇಶದ 13 ರಾಜ್ಯಗಳಲ್ಲಿ 51,656 ಅಟ್ರಾಸಿಟಿ ಕೇಸ್​​ ದಾಖಲು: ಈ ರಾಜ್ಯದಲ್ಲಿ ಅತಿಹೆಚ್ಚು - atrocity cases in india

author img

By PTI

Published : 3 hours ago

ಎಸ್​​ಸಿ- ಎಸ್​​ಟಿ ಜಾತಿಗಳನ್ನು ನಿಂದಿಸಿದ ಆರೋಪದ ಮೇಲೆ ದೇಶದಲ್ಲಿ ದಾಖಲಾದ ಕೇಸ್​ಗಳ ವರದಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದರಲ್ಲಿ 13 ರಾಜ್ಯಗಳಲ್ಲಿ ಅತಿಹೆಚ್ಚು ನಿಂದನೆ ಪ್ರಕರಣಗಳು ದಾಖಲಾಗಿದ್ದು ಗಮನಾರ್ಹ.

ಅಟ್ರಾಸಿಟಿ ಕೇಸ್​​ ದಾಖಲು
ಅಟ್ರಾಸಿಟಿ ಕೇಸ್​​ ದಾಖಲು (ETV Bharat)

ನವದೆಹಲಿ: ಜಾತಿನಿಂದನೆ ಪ್ರಕರಣಗಳ ಪೈಕಿ ದೇಶದ 13 ರಾಜ್ಯಗಳಲ್ಲಿ ಅತಿಹೆಚ್ಚು ಆರೋಪಗಳು ಕೇಳಿಬಂದಿವೆ. 2022 ರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶೇಕಡಾ 98 ರಷ್ಟು ಕೇಸ್​ಗಳು ಈ ರಾಜ್ಯಗಳಲ್ಲಿ ದಾಖಲಾಗಿವೆ ಎಂದು ಕೇಂದ್ರ ಸರ್ಕಾರ ವರದಿಯಲ್ಲಿ ತಿಳಿಸಿದೆ.

ಪರಿಶಿಷ್ಟ ಜಾತಿಗಳ (ಎಸ್​ಸಿ) ನಿಂದನೆಯ ಮೇಲೆ ಶೇಕಡಾ 97.7ರಷ್ಟು ಕೇಸ್​​ಗಳು ದಾಖಲಾಗಿವೆ. ಈ ಪೈಕಿ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಅಪರಾಧಗಳು ನಮೂದಾಗಿವೆ. ಅದೇ ರೀತಿ ಪರಿಶಿಷ್ಟ ಪಂಗಡಗಳ (ಎಸ್‌ಟಿ) ದೌರ್ಜನ್ಯಗಳ ಮೇಲೆ 13 ರಾಜ್ಯಗಳಲ್ಲಿ ಶೇಕಡಾ 98.91 ರಷ್ಟು ಕೇಸ್​ ದಾಖಲಾಗಿವೆ. ಈ ಪೈಕಿ ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾದಲ್ಲಿ ಅತಿಹೆಚ್ಚು ಕೇಸ್​ ನಮೂದಾಗಿವೆ.

ಎಸ್​​ಸಿ ನಿಂದನೆ ಕೇಸ್​​ (ರಾಜ್ಯವಾರು): 2022 ರಲ್ಲಿ ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ನಿಂದಿಸಿ ದಾಖಲಾದ ಒಟ್ಟು ಪ್ರಕರಣಗಳು 51,656. ಇದರಲ್ಲಿ ಉತ್ತರ ಪ್ರದೇಶದಲ್ಲಿ ಶೇಕಡಾ 23.78 ರಷ್ಟು ಅಂದರೆ, 12,287 ಪ್ರಕರಣಗಳು ನಮೂದಾಗಿವೆ. ನಂತರ ರಾಜಸ್ಥಾನದಲ್ಲಿ 8,651 (ಶೇ.16.75), ಮಧ್ಯಪ್ರದೇಶದಲ್ಲಿ 7,732 (ಶೇ.14.97), ಬಿಹಾರದಲ್ಲಿ 6,799 (ಶೇ.13.16), ಒಡಿಶಾದಲ್ಲಿ 3,576 (ಶೇ.6.93), ಮಹಾರಾಷ್ಟ್ರದಲ್ಲಿ 2,706 (ಶೇ.5.24) ಕೇಸ್​ ದಾಖಲಾಗಿವೆ. ಅಂದರೆ, ಆರು ರಾಜ್ಯಗಳಲ್ಲಿ ದಾಖಲಾದ ಒಟ್ಟು ಪ್ರಕರಣಗಳು ಶೇಕಡಾ 81 ರಷ್ಟಿವೆ.

ಎಸ್​​ಟಿ ನಿಂದನೆ ಕೇಸ್​​ (ರಾಜ್ಯವಾರು): ಎಸ್​​ಟಿಗಳ ಮೇಲೆ ನಡೆದ ದೌರ್ಜನ್ಯದಲ್ಲಿ 13 ರಾಜ್ಯಗಳಲ್ಲಿ ಒಟ್ಟು 9,735 ಕೇಸ್​​ಗಳು ದಾಖಲಾಗಿವೆ. ಈ ಪೈಕಿ ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು 2,979 (ಶೇ. 30.61) ಕೇಸ್​​ಗಳು ವರದಿಯಾಗಿವೆ. ಬಳಿಕ ರಾಜಸ್ಥಾನದಲ್ಲಿ 2,498 (ಶೇ.25.66), ಒಡಿಶಾದಲ್ಲಿ 773 (ಶೇ.7.94), ಮಹಾರಾಷ್ಟ್ರದಲ್ಲಿ 691 (ಶೇ. 7.10) ಮತ್ತು ಆಂಧ್ರಪ್ರದೇಶದಲ್ಲಿ 499 (ಶೇ.5.13) ಕೇಸ್​​ಗಳು ದಾಖಲಾಗಿವೆ.

ಎಸ್‌ಸಿ ನಿಂದನೆ ಸಂಬಂಧಿತ ಪ್ರಕರಣಗಳಲ್ಲಿ ಶೇಕಡಾ 60.38 ರಷ್ಟು ಚಾರ್ಜ್​ಶೀಟ್‌ ಸಲ್ಲಿಕೆಯಾಗಿದ್ದರೆ, ಶೇಕಡಾ 14.78 ರಷ್ಟು ಸುಳ್ಳು ಅಥವಾ ಸಾಕ್ಷ್ಯಾಧಾರಗಳ ಕೊರತೆಯಂತಹ ಖುಲಾಸೆ ಮಾಡಲಾಗಿದೆ. ಎಸ್‌ಟಿ ನಿಂದನೆ ಸಂಬಂಧಿತ ಪ್ರಕರಣಗಳಲ್ಲಿ ಶೇಕಡಾ 63.32 ರಷ್ಟು ಚಾರ್ಜ್​ಶೀಟ್‌ ಸಲ್ಲಿಸಿದ್ದರೆ, ಶೇಕಡಾ 14.71 ರಷ್ಟು ಕೇಸ್​​ಗಳು ಚುಕ್ತಾ ಆಗಿವೆ. ಎಸ್‌ಸಿ ಮತ್ತು ಎಸ್‌ಟಿಗಳ ವಿರುದ್ಧದ ನಿಂದನೆಯ ದೂರುಗಳ ನೋಂದಣಿಗಾಗಿ ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್, ಕೇರಳ ಮತ್ತು ಮಧ್ಯಪ್ರದೇಶದಲ್ಲಿ ವಿಶೇಷ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ.

ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ: ಪ್ರಧಾನಿ ಮೋದಿಗೆ ಪತ್ರ ಬರೆದ ಮಾಜಿ ಸಿಎಂ ಜಗನ್, ಕೋರಿದ್ದೇನು? - Jagan writes to PM Modi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.