ETV Bharat / bharat

ದಂಡಿ ಸತ್ಯಾಗ್ರಹಕ್ಕೆ 94 ವರ್ಷ: ಬ್ರಿಟಿಷರ ಉಪ್ಪು ನೀತಿ ವಿರೋಧಿಸಿ ಹೊಸ ಇತಿಹಾಸಕ್ಕೆ ಕಾರಣವಾದ ಚಳುವಳಿ - India Resilience Against Injustice

ಉಪ್ಪಿನ ಉತ್ಪಾದನೆಯಲ್ಲಿ ಬ್ರಿಟಿಷರ ಏಕಸ್ವಾಮ್ಯ ವಿರೋಧಿಸಿ ಗಾಂಧೀಜಿ ಅವರ ಅಹಿಂಸಾತ್ಮಕ ಪ್ರತಿಭಟನೆ ಚಳುವಳಿವಾಘಿ ಮಾರ್ಪಟ್ಟು ಸ್ವಾತಂತ್ರ್ಯ ಭಾರತದ ಹೋರಾಟದಲ್ಲಿ ಪ್ರಮುಖ ಘಟ್ಟವಾಗಿ ರೂಪುಗೊಂಡಿತು.

94 years-of-dandi-march-protest-that-symbolised-india-resilience-against-injustice

author img

By ETV Bharat Karnataka Team

Published : Mar 12, 2024, 1:30 PM IST

ಹೈದರಾಬಾದ್​: ದಂಡಿ ಮೆರವಣಿಗೆ ಉಪ್ಪಿನ ಸತ್ಯಾಗ್ರಹ ಎಂದು ಜನಜನಿತವಾಗಿದೆ. ಇದು ಭಾರತದ ಇತಿಹಾಸ ಪುಟದಲ್ಲಿ ಅನ್ಯಾಯದ ವಿರುದ್ಧ ಹೋರಾಟ ಮತ್ತು ಹೊಸ ಇತಿಹಾಸಕ್ಕೆ ತಿರುವ ನೀಡುವ ಘಟನೆಯಾಗಿದೆ. ಉಪ್ಪಿನ ಮೇಲೆ ಬ್ರಿಟಿಷರ ಏಕಸ್ವಾಮ್ಯದ ವಿರುದ್ಧವಾಗಿ 1930 ಮಾರ್ಚ್​ 12ರಂದು ಮಹಾತ್ಮ ಗಾಂಧಿಜೀ ಅವರ ನೇತೃತ್ವದಲ್ಲಿ ಈ ಅಹಿಂಸಾ ಹೋರಾಟವನ್ನು ಕೈಗೊಳ್ಳಲಾಗಿತ್ತು.

ದಂಡಿ ಮೆರವಣಿಗೆಯಲ್ಲಿ ಆಗಿದ್ದೇನು?

ಗಂಗಾನದಿ ತೀರದಲ್ಲಿದ್ದ ಸಬರಮತಿ ಆಶ್ರಮದಿಂದ ದಂಡಿ ಬಂದರಿನವರೆಗೆ 241 ಮೈಲಿಗಳ ಉದ್ದ 78 ಮೆರವಣಿಗೆಯ ನೇತೃತ್ವವನ್ನು ಮಹಾತ್ಮ ಗಾಂಧೀಜಿ ವಹಿಸಿದರು. ಉಪ್ಪು ಉತ್ಪಾದನೆಯಲ್ಲಿ ಬ್ರಿಟಿಷರ ಏಕಸ್ವಾಮ್ಯವನ್ನು ವಿರೋಧಿಸಿ ಸತ್ಯಾಗ್ರಹದ ವೇಳೆ ಸಮುದ್ರದ ನೀರಿನಿಂದ ಉಪ್ಪನ್ನು ತಯಾರಿಸಿದ್ದರು.

ಈ ಮೆರವಣಿಗೆ ಕೈಗೊಳ್ಳುವ ಮುನ್ನ ಮಹಾತ್ಮ ಗಾಂಧಿ ಅವರು ಬ್ರಿಟಿಷ್​ ವೈಸ್​ರಾಯ್​ ಲಾರ್ಡ್​ ಇರ್ವಿನ್​ ಅವರಿಗೆ ಪತ್ರ ಬರೆದು, ವಸಾಹತುಶಾಹಿ ನೀತಿಯ ವಿರುದ್ಧ ಮತ್ತೊಮ್ಮೆ ಪರಿಶೀಲಿಸುವಂತೆ ಒತ್ತಾಯಿಸಿದ್ದರು. ಅವರ ಪತ್ರದ ಸಾರಾಂಶ ಹೀಗಿದೆ. 'ನನ್ನ ಪತ್ರ ನಿಮ್ಮ ಹೃದಯದಲ್ಲಿ ಯಾವುದೇ ಬದಲಾವಣೆ ಮೂಡಿಸದೆ ಹೋದಲ್ಲಿ, ಈ ತಿಂಗಳ 11ನೇ ದಿನ, ಉಪ್ಪಿನ ಕಾನೂನನ್ನು ವಿರೋಧಿಸಿ, ನಾನು ನನ್ನ ಸಹ ಕಾರ್ಯಕರ್ತರೊಂದಿಗೆ ಆಶ್ರಮದಿಂದ ಮೆರವಣಿಗೆ ನಡೆಸುವುದಾಗಿ ತಿಳಿಸಿದ್ದರು'.

ಮಹಾತ್ಮಗಾಂಧಿ ದಂಡಿ ಮೆರವಣಿಗೆ ಕೈಗೊಳ್ಳಲು ಕಾರಣವೇನು?

ಬ್ರಿಟಿಷ್​​ ರಾಜ್​ ಭಾರತದಲ್ಲಿ ಉಪ್ಪಿನ ಉತ್ಪಾದನೆಯಲ್ಲಿ ಏಕಸ್ವಾಮ್ಯವನ್ನು ಹೊಂದಿತು. ಪರಿಣಾಮ ಭಾರತೀಯರು ಸರ್ಕಾರದ ಅನುಮತಿ ಇಲ್ಲದೇ, ಉಪ್ಪನ್ನು ಉತ್ಪಾದಿಸಲು ಅಥವಾ ಮಾರಾಟ ಮಾಡಲು ಸಾಧ್ಯವಿರಲಿಲ್ಲ. ವ್ಯಕ್ತಿಯ ದೈನಂದಿನ ಆಹಾರಕ್ಕೆ ಉಪ್ಪು ಅಗತ್ಯ ಆಹಾರವಾಗಿದ್ದು, ಇದರ ಮೇಲಿನ ನಿಷೇಧವೂ ಅವಿವೇಕ ಮತ್ತು ದಮನಕಾರಿ ನೀತಿಯಾಗಿತ್ತು.

ಉಪ್ಪಿನ ಕಾನೂನು ದೇಶದೆಲ್ಲೆಡೆ ಪರಿಣಾಮವನ್ನು ಬೀರಿತ್ತು. ಬ್ರಿಟಿಷ್​ ರಾಜ್​ ದಮನಕಾರಿ ವ್ಯವಸ್ಥೆ ಬಗ್ಗೆ ಗಾಂಧಿ ಅವರಿಗೆ ಅರಿವಿತ್ತು. ಇದಕ್ಕೆ ಉಪ್ಪಿನ ಕಾನೂನು ಸ್ಪಷ್ಟ ಉದಾಹರಣೆಯಾಗಿತ್ತು. ಬ್ರಿಟಿಷ್​ ರಾಜ್​ ದಮಕಾರಿ ಆಡಳಿತದ ಬಗ್ಗೆ ಸತ್ಯಾಗ್ರಹದ ಮೂಲಕ ಜನರಲ್ಲಿ ಅರಿವು ಮೂಡಿಸಲು ಗಾಂಧೀಜಿ ಯೋಜಿಸಿದರು. ಈ ನೀತಿ ವಿರುದ್ಧ ಜನರನ್ನು ಎಚ್ಚರಿಸಲು ಸತ್ಯಾಗ್ರಹಕ್ಕೆ ಮುಂದಾಗಿದ್ದರು.

ಇದನ್ನೂ ಓದಿ: ಮನುಕುಲಕ್ಕೆ ಗಾಂಧಿ ನೀಡಿದ ಕೊಡುಗೆ ಸತ್ಯಾಗ್ರಹ ಹಾಗೂ ಅಹಿಂಸೆ!

ಗಾಂಧೀಜಿ ಅವರ ಅಹಿಂಸಾ ಸತ್ಯಾಗ್ರಹ ಮಾದರಿಯಲ್ಲಿ ಈ ಉಪ್ಪಿನ ಮೆರವಣಿಗೆ ನಡೆಸಲಾಯಿತು. ಸಬರಮತಿ ಆಶ್ರಮದಿಂದ ದಂಡಿವರೆಗೆ ಈ ಮೆರವಣಿಗೆ ಸಾಗಿತ್ತು. ಎಲ್ಲರ ಮೇಲೆ ಪರಿಣಾಮ ಬೀರುವ ಈ ನೀತಿ ವಿರುದ್ಧ ಹೋರಾಟಕ್ಕೆ ಪ್ರತಿಯೊಬ್ಬರು ಸಾಥ್ ನೀಡಿದರು. ಸರ್ಕಾರದ ಉಪ್ಪಿನ ಕಾನೂನಿನ ವಿರುದ್ಧ ಮೆರವಣಿಗೆ ಸಾಮಾನ್ಯ ಪ್ರತಿಭಟನೆಯಾಗದೆ, ಸ್ವರಾಜ್ಯದ ಗುರಿ ಸಾಧನೆಗೆ ಜನರನ್ನು ಒಟ್ಟುಗೂಡಿಸುವ ಮಾರ್ಗವಾಯಿತು.

ಮೆರವಣಿಗೆಯಲ್ಲಿ ಏನಾಯಿತು: ಗುಜರಾತ್​ನಲ್ಲಿ ಮೆರವಣಿಗೆ ಸಾಗಿದಂತೆ ಮುಂಬೈನಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ ನೇತೃತ್ವದಲ್ಲಿ ಗೃಹಿಣಿಯರ ಗುಂಪು ಕೂಡ ಇದಕ್ಕೆ ಬೆಂಬಲ ನೀಡಿತ್ತು. ಈ ಮೂಲಕ ಗಾಂಧೀಜಿ ಅವರ ದಂಡಿ ಮೆರವಣಿಗೆ ವಿಸ್ತಾರ ಕಾಣುವುದರ ಜೊತೆಗೆ ಚಳುವಳಿಯಾಗಿ ಮಾರ್ಪಟ್ಟಿತ್ತು. ಪೊಲೀಸರ ವಿರೋಧ ಸೇರಿದಂತೆ ಕೆಲವು ಅಡೆತಡೆಗಳ ಹೊರತಾಗಿ ಮೆರವಣಿಗೆ ಒಗ್ಗಟ್ಟಿನಿಂದ ಸಾಗಿತ್ತು.

ದಂಡಿ ಮೆರವಣಿಗೆ ಕೇವಲ ಹೋರಾಟದ ಸೂಚಕವಾಗಿರದೆ, ಇದು ಬದಲಾವಣೆಗೆ ಕಾರಣವಾಯಿತು. ಇದು ಅಸಹಕಾರ ಚಳುವಳಿಗೆ ದಾರಿ ಮಾಡಿಕೊಟ್ಟಿತು. ಭಾರತದಲ್ಲಿನ ಬ್ರಿಟಿಷ್​ ಆಡಳಿತದ ವಿರುದ್ಧ ಸಾರ್ವಜನಿಕರ ವ್ಯಾಪಾಕ ಬೆಂಬಲದ ಜೊತೆಗೆ ಅಂತರಾಷ್ಟ್ರೀಯ ಮಾಧ್ಯಮಗಳ ಗಮನಸೆಳೆಯಿತು. 1930ರ ಏಪ್ರಿಲ್​ 6ರಂದು ಉಪ್ಪನ್ನು ತೆಗೆದುಕೊಳ್ಳುವ ಗಾಂಧೀಜಿ ಅವರ ಈ ಹೋರಾಟ ದೇಶದ ಚಳುವಳಿಯಾಗಿ ರೂಪುಗೊಂಡಿತು. ಜೊತೆಗೆ ಹೋರಾಟದಲ್ಲಿ ಸಾಮೂಹಿಕ ಭಾಗಿತ್ವವೂ ಏಕತೆಯನ್ನು ರೂಪಿಸಿತು.

ಈ ಮೆರವಣಿಗೆ ಜಾತಿ, ಧರ್ಮ ಮತ್ತು ಪ್ರದೇಶವನ್ನು ದಾಟಿ ಭೌಗೋಳಿಕ ಮತ್ತು ಸಾಮಾಜಿಕ ಗಡಿಗಳನ್ನು ಮೀರಿತು. ಗಾಂಧೀಜಿ ಅವರ ಅಹಿಂಸಾತ್ಮಕ ಹೋರಾಟದ ಮಾದರಿಯು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆಳವಾಗಿ ಪ್ರತಿಧ್ವನಿಸಿತು.

ಇದನ್ನೂ ಓದಿ: ಅಹಿಂಸೆ ರಾಷ್ಟ್ರಪಿತನ ಮೂಲ ಮಂತ್ರ... ಅಂದಂತೆ ನಡೆದುಕೊಂಡಿದ್ದು ಅವರ ಹೆಗ್ಗಳಿಕೆ!

ಮೆರವಣಿಗೆ ಬಳಿಕ ಆಗಿದ್ದೇನು? ದಂಡಿ ಸತ್ಯಾಗ್ರಹವು ಬ್ರಿಟಿಷ್ ಆಳ್ವಿಕೆಯನ್ನು ಎದುರಿಸಲು ಭಾರತೀಯರಲ್ಲಿ ಆತ್ಮವಿಶ್ವಾಸ ಮೂಡಿಸಿತು. ಈ ಒಗ್ಗಟ್ಟಿನ ಮಂತ್ರವೂ ವಿವಿಧ ಸಮುದಾಯವನ್ನು ಪ್ರೇರೇಪಿಸಿತು. ಗಾಂಧಿ ಅವರ ಈ ಹೊಸ ಮಾದರಿ ಹೋರಾಟ ವಸಾಹತುಶಾಹಿ ವಿರುದ್ಧ ಮಾತ್ರ ಸವಾಲು ಮೂಡಿಸದೇ ಜಗತ್ತಿನೆಲ್ಲಡೆ ಭವಿಷ್ಯದ ಅನೇಕ ಚಳುವಳಿಗೆ ದಾರಿ ಮಾಡಿಕೊಟ್ಟಿತು.

ಗಾಂಧಿ ಅವರ ಉಪ್ಪಿನ ಸತ್ಯಾಗ್ರಹವೂ ದೇಶದಲ್ಲೆಡೆ ಇದೇ ರೀತಿಯ ಚಳುವಳಿಗೆ ಪ್ರೇರಣೆಯಾಯಿತು. ಉಪ್ಪಿನ ಕಾನೂನಿನ ವಿರುದ್ಧ ತಮಿಳುನಾಡು, ಬಂಗಾಳ, ಆಂಧ್ರ ಮತ್ತಿತ್ತರ ಕಡೆಯೂ ಚಳುವಳಿ ಆರಂಭವಾಯಿತು. ಉಪ್ಪು ನೀತಿ ಉ್ಲಂಘಿಸಿದ ಗಾಂಧೀಜಿ ಅವರನ್ನು ಬಂಧಿಸಲು ಕೂಡ ಸರ್ಕಾರ ನಿರಾಕರಿಸಿತು. ಇಂತಹ ಚಳುವಳಿ ಸರ್ಕಾರದಲ್ಲೂ ಭಯ ಮೂಡಿಸಿತು.

1930ರ ಏಪ್ರಿಲ್​ 14ರಂದು ಕಾಂಗ್ರೆಸ್​ ನಾಯಕ ಜವಹರ್​ ಲಾಲ್ ನೆಹರೂ​​ ಅವರ ಬಂಧನವೂ ದೇಶದೆಲ್ಲೆಡೆ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಗೆ ಕಾರಣವಾಯಿತು. ಏಪ್ರಿಲ್​ 15, 1930ರಲ್ಲಿ ಪೇಶ್ವಾರ್​​ನಲ್ಲಿ ಬೃಹತ್​​ ಪ್ರತಿಭಟನೆ ನಡೆಸಲಾಯಿತು. 1930ರ ಮೇ 4ರಂದು ಮಧ್ಯರಾತ್ರಿ ಗಾಂಧೀಜಿ ಅವರನ್ನು ಬಂಧಿಸಲಾಯಿತು. ಗಾಂಧೀಜಿ ಅವರ ಬಂಧನ ವಿಚಾರ ಸಾವಿರಾರು ಜನರಲ್ಲಿ ಪ್ರತಿಭಟನೆಗೆ ಕಾರಣವಾಯಿತು.

ವರ್ಷದ ಬಳಿಕ 1931ರಲ್ಲಿ ಗಾಂಧಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಬಳಿಕ ಗಾಂಧೀಜಿ ಮತ್ತು ಲಾರ್ಡ್​ ಇರ್ವಿನ್​ ಮಧ್ಯೆ ಮಾತುಕತೆ ನಡೆಯಿತು. ಪರಿಣಾಮವಾಗಿ 1931 ಮಾರ್ಚ್​ 5ರಂದು ಗಾಂಧೀಜಿ-ಇರ್ವಿನ್​ ಒಪ್ಪಂದಕ್ಕೆ ಲಂಡನ್​ನಲ್ಲಿ ಸಹಿ ಹಾಕಲಾಯಿತು. ಎರಡನೇ ದುಂಡು ಮೇಜಿನ ಸಭೆಯಲ್ಲಿ ಗಾಂಧೀಜಿ ಹಾಜರಿಗೆ ಕಾರಣವಾಯಿತು.

ಇದನ್ನೂ ಓದಿ: ಚಂಪಾರಣ್​ನಲ್ಲಿ 'ಅಹಿಂಸಾ ದೇವಿ'ಯೊಂದಿಗೆ ಗಾಂಧಿ ಮುಖಾಮುಖಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.