ಚಾರ್ಲಾ (ಛತ್ತೀಸ್ ಗಢ): ಛತ್ತೀಸ್ ಗಢದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಬಸ್ತಾರ್ ಫೈಟರ್ಸ್ ಪಡೆಯಲ್ಲಿ ಸೋಮವಾರ ಮತ್ತೆ 9 ಮಂದಿ ತೃತೀಯಲಿಂಗಿಗಳನ್ನು ನೇಮಕ ಮಾಡಲಾಗಿದೆ. ಕಳೆದ ವರ್ಷ ಅವರನ್ನು ಆಯ್ಕೆ ಮಾಡಿ ವಿವಿಧ ವಿಭಾಗಗಳಲ್ಲಿ ತರಬೇತಿ ನೀಡಲಾಗಿದೆ.
ಕೇಂದ್ರ ಅರೆಸೇನಾ ಪಡೆಗಳೊಂದಿಗೆ ಮಾವೋವಾದಿ ವಿರೋಧಿ ಕಾರ್ಯಾಚರಣೆಗೆ ಹೆಚ್ಚಿನ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಮಾವೋವಾದಿ ಪೀಡಿತ ಪ್ರದೇಶವಾಗಿರುವ ಬಸ್ತಾರ್ ವ್ಯಾಪ್ತಿಯ ಕಂಕೇರ್ ಜಿಲ್ಲೆಯಲ್ಲಿ ಅವರು ಕರ್ತವ್ಯ ನಿರ್ವಹಿಸಲಿದ್ದಾರೆ. 2021 ರಲ್ಲಿ ಬಸ್ತಾರ್ ಫೈಟರ್ಸ್ ಪ್ಲಟೂನ್ ಅನ್ನು 2,100 ಸ್ಥಳೀಯ ಯುವಕರೊಂದಿಗೆ ರಚಿಸಲಾಯಿತು.
ಬಸ್ತಾರ್, ದಾಂತೇವಾಡ, ಕಂಕೇರ್, ಬಿಜಾಪುರ, ನಾರಾಯಣಪುರ, ಸುಕ್ಮಾ ಮತ್ತು ಕೊಂಡಗಾಂವ್ ಜಿಲ್ಲೆಗಳಲ್ಲಿ ಕೇಂದ್ರ ಪಡೆಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಈಗಾಗಲೇ 90 ಮಹಿಳೆಯರು ಮತ್ತು 13 ತೃತೀಯಲಿಂಗಿಗಳಿದ್ದರೆ, ಇತ್ತೀಚೆಗೆ 9 ತೃತೀಯಲಿಂಗಿಗಳು ಕರ್ತವ್ಯಕ್ಕೆ ಸೇರಿದ್ದಾರೆ.
ಓದಿ: ಬಾಂಗ್ಲಾ ಬಿಕ್ಕಟ್ಟು: ಬ್ರಿಟನ್ನ ಆಶ್ರಯ ಸಿಗುವವರೆಗೆ ಭಾರತದಲ್ಲಿ ಶೇಖ್ ಹಸೀನಾ? - Bangladesh PM Sheikh Hasina