ETV Bharat / bharat

ಚೆನ್ನೈನ 59 ಕೆರೆಗಳು ಸಂಪೂರ್ಣ ಭರ್ತಿ: ಅಂತರ್ಜಲ ಮಟ್ಟವೂ ಹೆಚ್ಚಳ

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಚೆನ್ನೈನ 59 ಕೆರೆಗಳು ಭರ್ತಿಯಾಗಿವೆ.

author img

By ETV Bharat Karnataka Team

Published : 5 hours ago

ಭರ್ತಿಯಾದ ಹೊಂಡ
ಭರ್ತಿಯಾದ ಹೊಂಡ (IANS)

ಚೆನ್ನೈ: ಇತ್ತೀಚೆಗೆ ಸುರಿದ ಉತ್ತಮ ಮಳೆಯಿಂದಾಗಿ ಚೆನ್ನೈ ನಗರದ 59 ಕೆರೆ, ಹೊಂಡಗಳು ಸಂಪೂರ್ಣವಾಗಿ ಭರ್ತಿಯಾಗಿದ್ದು, ಅಂತರ್ಜಲ ಮಟ್ಟವೂ ಗಣನೀಯವಾಗಿ ಹೆಚ್ಚಾಗಿದೆ ಎಂದು ಗ್ರೇಟರ್ ಚೆನ್ನೈ ಕಾರ್ಪೊರೇಷನ್ ತಿಳಿಸಿದೆ. ನಗರದಲ್ಲಿನ ಕೆರೆಗಳ ಪುನರುಜ್ಜೀವನಕ್ಕಾಗಿ ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಕೈಗೊಂಡ ಕ್ರಮಗಳಿಂದಾಗಿ ಈ ಕೆರೆಗಳ ನೀರು ಸಂಗ್ರಹಣಾ ಸಾಮರ್ಥ್ಯವೂ ಗಮನಾರ್ಹವಾಗಿ ಹೆಚ್ಚಾಗಿದೆ.

ಸಿಂಗಾರ ಚೆನ್ನೈ 2.0 ಮಿಷನ್ (ಹಂತ 2) 13.56 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಒಟ್ಟು 3,19,976 ಚದರ ಮೀಟರ್ ವಿಸ್ತೀರ್ಣದ 24 ಕೆರೆಗಳನ್ನು ಪುನರುಜ್ಜೀವನ ಮಾಡಲಾಗಿದೆ. ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ಅಟಲ್ ಮಿಷನ್ ಫಾರ್ ರಿಜುವೆನೇಷನ್ ಅಂಡ್ ಅರ್ಬನ್ ಟ್ರಾನ್ಸ್ ಫಾರ್ಮೇಶನ್ (ಅಮೃತ್) 2.0 ಯೋಜನೆಯಡಿ 14.48 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಐದು ಕೆರೆಗಳನ್ನು ಸ್ವಚ್ಛಗೊಳಿಸಿ ಪುನರುಜ್ಜೀವನಗೊಳಿಸಲಾಗಿದೆ.

ಅಮೃತ್ ಮತ್ತು ಸಿಂಗಾರ ಚೆನ್ನೈ 2.0 ಯೋಜನೆ ಮಾತ್ರವಲ್ಲದೆ, ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಈಗಾಗಲೇ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ನಿಧಿಯ ಬೆಂಬಲ ಬಳಸಿಕೊಂಡು ಅನೇಕ ಕೆರೆಗಳನ್ನು ಸ್ವಚ್ಛಗೊಳಿಸಿದೆ.

ಚೆನ್ನೈ ಮೂಲದ ಸೆಂಟರ್ ಫಾರ್ ಪಾಲಿಸಿ ಅಂಡ್ ಡೆವಲಪ್ ಮೆಂಟ್ ಸ್ಟಡೀಸ್ (ಸಿಪಿಡಿಎಸ್) ನಿರ್ದೇಶಕ ಸಿ.ರಾಜೀವ್ ಮಾತನಾಡಿ, ಗ್ರೇಟರ್ ಚೆನ್ನೈ ಕಾರ್ಪೊರೇಷನ್ ನಗರದಾದ್ಯಂತ ಹಲವಾರು ಕೊಳಗಳನ್ನು ಪುನಃಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ ಮತ್ತು ಇದು ಮಳೆಗಾಲದಲ್ಲಿ ಕೆರೆಗಳಲ್ಲಿ ಹೆಚ್ಚಿನ ನೀರು ಸಂಗ್ರಹವಾಗಲು ಅನುಕೂಲವಾಗಿದ್ದು, ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಿದರು. ಈಶಾನ್ಯ ಮಾನ್ಸೂನ್ ಆಗಮನದೊಂದಿಗೆ ಚೆನ್ನೈನಲ್ಲಿ ಭಾರಿ ಮಳೆಯಾಗಿದ್ದು, ಸುಮಾರು 59 ಕೆರೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿವೆ.

ತ್ಯಾಜ್ಯ ವಿಲೇವಾರಿಗೆ ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಕ್ರಮ: ಅಸಮರ್ಪಕ ಕಸ ಮತ್ತು ಇತರ ಘನತ್ಯಾಜ್ಯ ವಿಲೇವಾರಿ ತಡೆಗಟ್ಟುವ ನಿಟ್ಟಿನಲ್ಲಿ ದಂಡ ವಿಧಿಸಲು ಡಿಜಿಟಲ್ ಸಾಧನಗಳನ್ನು ಬಳಸುವ ಯೋಜನೆಯನ್ನು ಜಾರಿಗೊಳಿಸಿರುವ ಗ್ರೇಟರ್ ಚೆನ್ನೈ ಕಾರ್ಪೊರೇಷನ್ 70 ಪಾಯಿಂಟ್-ಆಫ್-ಸೇಲ್ ಸಾಧನಗಳನ್ನು ಸಕ್ರಿಯಗೊಳಿಸಿದೆ ಮತ್ತು ಅಲ್ಪಾವಧಿಯಲ್ಲಿ 289 ವ್ಯಕ್ತಿಗಳಿಂದ ದಂಡ ಸಂಗ್ರಹಿಸಿದೆ. ಅಸಮರ್ಪಕ ತ್ಯಾಜ್ಯ ವಿಲೇವಾರಿಗಾಗಿ ಒಟ್ಟಾರೆಯಾಗಿ 5 ಲಕ್ಷ ರೂ.ಗಳನ್ನು ದಂಡವಾಗಿ ಸಂಗ್ರಹಿಸಲಾಗಿದೆ ಎಂದು ಕಾರ್ಪೊರೇಶನ್​ನ ಆಯುಕ್ತರು ತಿಳಿಸಿದ್ದಾರೆ.

ತ್ಯಾಜ್ಯ ಎಸೆಯುವವರಿಗೆ ಈ ಹಿಂದೆ ವಿಧಿಸಲಾಗುತ್ತಿದ್ದ ದಂಡವನ್ನು 500 ರೂ.ಗಳಿಂದ 5,000 ರೂ.ಗೆ ಹೆಚ್ಚಿಸಲಾಗಿದೆ. ಖಾಸಗಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಸುಡುವವರಿಗೆ ವಿಧಿಸಲಾಗುತ್ತಿದ್ದ ದಂಡವನ್ನು ಕ್ರಮವಾಗಿ 500 ಮತ್ತು 1,000 ರೂ.ಗಳಿಂದ 5,000 ರೂ.ಗೆ ಪರಿಷ್ಕರಿಸಲಾಗಿದೆ.

ಇದನ್ನೂ ಓದಿ: ದೆಹಲಿಯ ಸಿಆರ್​ಪಿಎಫ್​ ಶಾಲೆಯ ಬಳಿ ಭಾರಿ ಸ್ಫೋಟ: ಜೀವಹಾನಿ ಇಲ್ಲ, ಪೊಲೀಸರಿಂದ ತೀವ್ರ ತನಿಖೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.