ಕೊಕ್ರಜಾರ್ (ಅಸ್ಸೋಂ): ಇಂದು ಶ್ರಾವಣ ಸೋಮವಾರವಾಗಿದ್ದು, ಶಿವನ ಭಕ್ತರು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ. ಭಕ್ತರ ಸಮೂಹವೊಂದು ಪೂಜೆ ಸಲ್ಲಿಸಿ ವಾಪಸ್ ತಮ್ಮ ವಾಹನದ ಬಳಿ ಬರುತ್ತಿದ್ದ ವೇಳೆ ಅನಿಯಂತ್ರಿತ ಟ್ರಕ್ವೊಂದು ಅವರ ಮೇಲೆ ಹರಿದ ಪರಿಣಾಮ ಸುಮಾರು ಐವರು ಸಾವನ್ನಪ್ಪಿದ್ದಾರೆ. ಈ ಸಂಭವಿಸಿದ ಅಪಘಾತದಲ್ಲಿ ಓರ್ವ ಗಾಯಗೊಂಡಿದ್ದಾರೆ. ಈ ಅಪಘಾತ ಕೋಕ್ರಜಾರ್ ಜಿಲ್ಲೆಯ ಗೊಸೈಗೊನ್‌ನಲ್ಲಿರುವ ಕಚುಗಾಂವ್ ಮಹಾಮಾಯಾ ದೇವಸ್ಥಾನದ ಮುಂಭಾಗದ ಎನ್‌ಎಚ್ -27 ರಲ್ಲಿ ಸಂಭವಿಸಿದೆ.
ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಭಕ್ತರು ತಮ್ಮ ವಾಹನದ ಕಡೆ ತೆರಳುತ್ತಿದ್ದ ವೇಳೆ ಟ್ರಕ್ ಡಿಕ್ಕಿ ಹರಿದು ಭಕ್ತರು ಸಾವನ್ನಪ್ಪಿದ್ದಾರೆ. ಮೃತರನ್ನು ಗೊಸೈಗೊನ್‌ನ ಹತಿಗಢ ಗ್ರಾಮದ ನಂ1 ನಿವಾಸಿಗಳಾದ ಸುಕ್ರಮನ್ ರಾಯ್ (20), ಜಾಯ್ ರಾಯ್ (11), ಬಪ್ಪಿ ಘೋಷ್ (21) ಮತ್ತು ಬಸುದೇವ್ ರಾಯ್ (22) ಎಂದು ಗುರುತಿಸಲಾಗಿದೆ. ನವ್ ಘೋಷ್ (26) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸಿದೇ ಸಾವನ್ನಪ್ಪಿದ್ದಾರೆ. ಗಾಯಾಳು ಬಿನೋನ್ ರಾಯ್ (22) ಎಂದು ಗುರುತಿಸಲಾಗಿದ್ದು, ಗಂಭೀರ ಗಾಯಗೊಂಡು ಕಚುಗಾಂವ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜಸ್ಥಾನ ಮೂಲದ ಟ್ರಕ್ ಆಗಿದ್ದು, ಚಾಲಕ ಮತ್ತು ಕ್ಲೀನರ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಓದಿ: ಶ್ರಾವಣ ಸೋಮವಾರ: ಶಿವನ ಪೂಜೆಗೆ ತೆರಳುತ್ತಿದ್ದ ಭಕ್ತರ ಮೇಲೆ ಹರಿದ ವಾಹನ, 9 ಯಾತ್ರಿಕರು ಸಾವು - ROAD ACCIDENT