ETV Bharat / bharat

ತಮಿಳುನಾಡು ನಕಲಿ ಮದ್ಯ ದುರಂತ: ಗಂಡಂದಿರನ್ನು ಕಳೆದುಕೊಂಡ 44 ಮಹಿಳೆಯರು! - Tamil Nadu Hooch Tragedy

ನಕಲಿ ಮದ್ಯ ದುರಂತ ದೇಶಾದ್ಯಂತ ಆತಂಕ ಸೃಷ್ಟಿಸಿದ್ದು, ಈವರೆಗೆ 58 ಜನರು ಸಾವನ್ನಪ್ಪಿದ್ದಾರೆ. 156 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

Tamil Nadu Hooch Tragedy
ತಮಿಳುನಾಡು ನಕಲಿ ಮದ್ಯ ದುರಂತ, ಮಹಿಳೆಯರ ಕಣ್ಣೀರು (ETV Bharat)
author img

By ETV Bharat Karnataka Team

Published : Jun 25, 2024, 12:58 PM IST

ಕಲ್ಲಕುರಿಚಿ (ತಮಿಳುನಾಡು): ಕಲ್ಲಕುರಿಚಿ ಜಿಲ್ಲೆಯ ಕರುಣಾಪುರಂನಲ್ಲಿ ನಕಲಿ ಮದ್ಯ ಸೇವಿಸಿದ 221 ಮಂದಿಯನ್ನು ಕಲ್ಲಕುರಿಚಿ, ಸೇಲಂ, ವಿಲ್ಲುಪುರಂ, ಮತ್ತು ಪುದುಚೇರಿ ಜಿಪ್ಮರ್ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಮೆಥನಾಲ್ ಮಿಶ್ರಿತ ಮದ್ಯ ಸೇವಿಸಿದ ಪರಿಣಾಮ, ಸೋಮವಾರ (ಜೂ.24) ಮಧ್ಯಾಹ್ನದವರೆಗೆ ಕಣ್ಣು ಉರಿ, ಮೂರ್ಛೆ, ಹೊಟ್ಟೆನೋವು, ಬೇದಿ, ವಾಂತಿ ಸೇರಿ ನಾನಾ ಕಾರಣಗಳಿಂದ ಒಟ್ಟು 58 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 156 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಕಲಿ ಮದ್ಯ ದುರಂತದ ನಂತರ ತಮಿಳುನಾಡು ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಈ ಬಗ್ಗೆ ಕೂಲಂಕಶವಾಗಿ ವರದಿ ಪಡೆಯುತ್ತಿದೆ. ದುರಂತದಲ್ಲಿ ಕರುಣಾಪುರಂ, ಮಾಧವಚೇರಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 44 ಮಹಿಳೆಯರು ತಮ್ಮ ಗಂಡಂದಿರನ್ನು ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ. ಈ ಪೈಕಿ 40 ವರ್ಷದೊಳಗಿನ 20 ಮಹಿಳೆಯರು ಮತ್ತು 40 ವರ್ಷ ಮೇಲ್ಪಟ್ಟ 24 ಮಹಿಳೆಯರಿದ್ದಾರೆ. ಈ ದುರಂತದಲ್ಲಿ ಒಟ್ಟು 44 ಮಹಿಳೆಯರು ತಮ್ಮ ಸಂಗಾತಿಯನ್ನು ಕಳೆದುಕೊಂಡಿದ್ದು, ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ, ಪತಿಯನ್ನು ಕಳೆದುಕೊಂಡ 12 ಮಂದಿಗೆ ವಿವಿಧ ವೃತ್ತಿಯ ತರಬೇತಿ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಲ್ಲಕುರಿಚಿಯ ಕರುಣಾಪುರಂನಲ್ಲಿ 11 ತಿಂಗಳ ಮಗುವಿನ ತಾಯಿ ಕೂಡ ತನ್ನ ಪತಿಯನ್ನು ಕಳೆದುಕೊಂಡಿದ್ದು, ದುಃಖದ ವಾತಾವರಣ ನಿರ್ಮಾಣ ಆಗಿದೆ. ಇನ್ನು, ದುರ್ಘಟನೆಯಲ್ಲಿ ಸಾವನ್ನಪ್ಪಿದ ರಮಣ್ ಎಂಬುವರ 2ನೇ ಪತ್ನಿ ಸದ್ಯ 2 ತಿಂಗಳ ಗರ್ಭಿಣಿ. ಜತೆಗೆ, 6 ವರ್ಷದ ಮಗಳಿದ್ದಾಳೆ.

ಇದನ್ನೂ ಓದಿ: ತಮಿಳುನಾಡು ನಕಲಿ ಮದ್ಯ ದುರಂತ; ಮೂವರು ಮಾರಾಟಗಾರರ ವಿರುದ್ಧ ಕೊಲೆ ಕೇಸ್​ ದಾಖಲು - hooch drank case

ಜೂನ್ 24ರ ಮಧ್ಯಾಹ್ನದ ವೇಳೆಗೆ ಕೋಟೈಮೇಡು, ಸಿರುವಂಗೂರ್, ವಣ್ಣಂಜೂರ್, ಶೇಷಸಮುದ್ರಂ, ಇಳಂತೈ, ಕಲ್ಲಕುರಿಚಿ ಪಟ್ಟಣ, ಮಾಧವಚೇರಿ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಗ್ರಾಮಗಳ ಜನರು ಚಿಕಿತ್ಸೆಗಾಗಿ ಕಲ್ಲಕುರಿಚಿ, ಸೇಲಂ, ವಿಲ್ಲುಪುರಂ, ಪುದುಚೇರಿ ಜಿಪ್ಮರ್ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದಾರೆ. ಮೆಥನಾಲ್ ಮಿಶ್ರಿತ ಮದ್ಯ ಸೇವಿಸಿದ ಪರಿಣಾಮ, ಈವರೆಗೆ ಒಟ್ಟು 58 ಮಂದಿ ಕೊನೆಯುಸಿರೆಳೆದಿದ್ದು, 156 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.

ಇದನ್ನೂ ಓದಿ: ಕುಡಿವ ನೀರಿನ ಸಮಸ್ಯೆ: ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ದೆಹಲಿ ಸಚಿವೆ ಅತಿಶಿ ಆಸ್ಪತ್ರೆಗೆ ದಾಖಲು - MINISTER ATISHI

ಇತ್ತೀಚೆಗೆ ಈ ದುರಂತದ ಬಗ್ಗೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಪ್ರತಿಕ್ರಿಯಿಸಿ, ಸಂತಾಪ ಸೂಚಿಸಿದ್ದರು. ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.