ETV Bharat / bharat

ಮತ್ತೆ 24 ವಿಮಾನಗಳಿಗೆ ಬಾಂಬ್​ ಬೆದರಿಕೆ: ಎರಡು ದಿನದಲ್ಲಿ 90 ಫ್ಲೈಟ್​ಗಳಿಗೆ ಭೀತಿ - HOCKS BOMB THREATS

ಅಂತಾರಾಷ್ಟ್ರೀಯ ವಿಮಾನಗಳಿಗೆ ಬೆದರಿಕೆ ಕರೆಗಳ ಸರಣಿ ಮುಂದುವರಿದಿದೆ. ಭಾನುವಾರ 24 ವಿಮಾನಗಳಿಗೆ ಹುಸಿ ಬಾಂಬ್​ ಕರೆ ಮಾಡಲಾಗಿದೆ ಎಂದು ವರದಿಯಾಗಿದೆ.

ವಿಮಾನಗಳಿಗೆ ಬಾಂಬ್​ ಬೆದರಿಕೆ
ವಿಮಾನಗಳಿಗೆ ಬಾಂಬ್​ ಬೆದರಿಕೆ (ETV Bharat)
author img

By PTI

Published : Oct 20, 2024, 8:58 PM IST

ಮುಂಬೈ/ನವದೆಹಲಿ: ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಬಾಂಬ್​ ಬೆದರಿಕೆ ಕರೆಗಳು ಮುಂದುವರಿದಿವೆ. ಭಾನುವಾರ ಮತ್ತೆ 24 ವಿಮಾನಗಳಿಗೆ ಬೆದರಿಕೆ ಬಂದಿವೆ. ಇದರಿಂದ, ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದು, ಹಲವಾರು ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿದೆ. ಇದಕ್ಕೆ ಏರ್​​ಲೈನ್ಸ್​ಗಳು ವಿಷಾದ ವ್ಯಕ್ತಪಡಿಸಿವೆ.

ಇಂಡಿಗೋ, ವಿಸ್ತಾರ, ಆಕಾಶ್ ಏರ್, ಏರ್ ಇಂಡಿಯಾ ಏರ್‌ಲೈನ್ಸ್​ಗಳ ಅಂತಾರಾಷ್ಟ್ರೀಯ ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ. ಅದರಲ್ಲಿ ಇಂಡಿಗೋ, ವಿಸ್ತಾರ ಮತ್ತು ಏರ್ ಇಂಡಿಯಾದ ತಲಾ ಆರು ವಿಮಾನಗಳಿಗೆ ಬೆದರಿಕೆ ಬಂದಿದೆ. ಇಲ್ಲಿಯವರೆಗೆ, 90ಕ್ಕೂ ಹೆಚ್ಚು ವಿಮಾನಗಳಿಗೆ ಇಂಥಹದ್ದೇ ಸಂದೇಶಗಳು ಬಂದಿವೆ. ಅವುಗಳಲ್ಲಿ ಹೆಚ್ಚಿನವು ಹುಸಿಯಾಗಿವೆ.

ಯಾವೆಲ್ಲಾ ವಿಮಾನಗಳಿಗೆ ಬೆದರಿಕೆ: ಈ ಬಗ್ಗೆ ಇಂಡಿಗೋ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದ್ದು, ಜೆಡ್ಡಾದಿಂದ ಮುಂಬೈಗೆ ಸಂಪರ್ಕ ಕಲ್ಪಿಸುವ 6E 58, 6E87 (ಕೋಝಿಕೋಡ್‌ನಿಂದ ದಮ್ಮಾಮ್), 6E11 (ದೆಹಲಿಯಿಂದ ಇಸ್ತಾನ್‌ಬುಲ್), 6E17 (ಮುಂಬೈನಿಂದ ಇಸ್ತಾನ್‌ಬುಲ್), 6E133 (ಪುಣೆಯಿಂದ ಜೋಧ್​ಪುರ), 6E112 (ಗೋವಾದಿಂದ ಅಹಮದಾಬಾದ್)ಗೆ ಸಂಪರ್ಕಿಸುವ ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿತ್ತು.

ಇನ್ನು, ವಿಸ್ತಾರ ಸಂಸ್ಥೆಯ ಹೇಳಿಕೆಯಂತೆ, UK25 (ದೆಹಲಿಯಿಂದ ಫ್ರಾಂಕ್‌ಫರ್ಟ್), UK106 (ಸಿಂಗಪುರದಿಂದ ಮುಂಬೈ), UK146 (ಬಾಲಿಯಿಂದ ದೆಹಲಿ), UK116 (ಸಿಂಗಪುರದಿಂದ ದೆಹಲಿ), UK110 (ಸಿಂಗಪುರದಿಂದ ಪುಣೆ) ಮತ್ತು UK107 (ಮುಂಬೈನಿಂದ ಸಿಂಗಾಪುರ) ಸೇರಿ ಆರು ವಿಮಾನಗಳಿಗೆ ಬೆದರಿಕೆ ಬಂದಿವೆ ಎಂದಿದೆ.

ಆಕಾಶ ಏರ್ ವಿಮಾನಗಳಿಗೂ ಬೆದರಿಕೆ ಸಂದೇಶ ಬಂದಿದ್ದು, QP 1102 (ಅಹಮದಾಬಾದ್‌ನಿಂದ ಮುಂಬೈ), QP 1378 (ದೆಹಲಿಯಿಂದ ಗೋವಾ), QP 1385 (ಮುಂಬೈನಿಂದ ಬಾಗ್ಡೋಗ್ರಾ), QP 1406 (ದೆಹಲಿಯಿಂದ ಹೈದರಾಬಾದ್), QP 1519 (ಕೊಚ್ಚಿಯಿಂದ ಮುಂಬೈ) ಮತ್ತು QP 1526 (ಲಕ್ನೋದಿಂದ ಮುಂಬೈಗೆ) ತೆರಳುವ ವಿಮಾನಗಳಲ್ಲಿ ವ್ಯತ್ಯಯ ಉಂಟಾಗಿತ್ತು.

ವ್ಯತ್ಯಯಕ್ಕಾಗಿ ವಿಷಾದ: "ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ವಿಮಾನಯಾನ ಸಂಸ್ಥೆ ವಿಷಾದ ವ್ಯಕ್ತಪಡಿಸಿದೆ. ಇಂತಹ ಅಪಾಯಕಾರಿ ಸಂದರ್ಭಗಳಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ನಮ್ಮ ಆದ್ಯತೆಯಾಗಿದೆ. ಮಾರ್ಗಸೂಚಿಗಳ ಪ್ರಕಾರ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ" ಎಂದು ಸಂಸ್ಥೆಗಳು ತಿಳಿಸಿವೆ.

ನಿರಂತರ ಬಾಂಬ್ ಬೆದರಿಕೆಗಳ ಹಿನ್ನೆಲೆಯಲ್ಲಿ, ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​​​ಸೆಕ್ಯುರಿಟಿ (ಬಿಸಿಎಎಸ್) ಶನಿವಾರ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿತು. ಕೇಂದ್ರ ವಿಮಾನಯಾನ ಸಚಿವಾಲಯವು ಹುಸಿ ಬಾಂಬ್ ಬೆದರಿಕೆಗಳನ್ನು ತಡೆಗಟ್ಟಲು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತರಲು ಯೋಜಿಸಿದೆ. ಕೃತ್ಯದಲ್ಲಿ ಭಾಗಿಯಾದ ಆರೋಪಿಗಳನ್ನು ನೋ-ಫ್ಲೈ ಲಿಸ್ಟ್​​ಗೆ ಸೇರಿಸಲು ಸೂಚಿಸಿದೆ.

ಇದನ್ನೂ ಓದಿ; ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಸಂದೇಶ: ಏರ್​ಪೋರ್ಟ್​ನಲ್ಲಿ ಭದ್ರತೆ ಹೆಚ್ಚಳ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.