ಚೆನ್ನೈ(ತಮಿಳುನಾಡು): ದೂರಸಂಪರ್ಕ ಇಲಾಖೆಯ ಪ್ರಕಾರ ದೇಶಾದ್ಯಂತ ನಕಲಿ ದಾಖಲೆಗಳ ಆಧಾರದ ಮೇಲೆ ಸುಮಾರು 21 ಲಕ್ಷ ಸಿಮ್ ಕಾರ್ಡ್‌ಗಳನ್ನು ನೀಡಲಾಗಿದೆ. ಏರ್‌ಟೆಲ್, ಎಂಟಿಎನ್‌ಎಲ್, ಬಿಎಸ್‌ಎನ್‌ಎಲ್, ಜಿಯೋ ಮತ್ತು ವೊಡಾಫೋನ್‌ಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಕೆಲವು ಅನುಮಾನಾಸ್ಪದ ಸಂಖ್ಯೆಗಳ ಪಟ್ಟಿಯನ್ನು ಇಲಾಖೆ ಬಿಡುಗಡೆ ಮಾಡಿದೆ ಮತ್ತು ಅದರ ದಾಖಲೆಗಳನ್ನು ತಕ್ಷಣವೇ ಮರುಪರಿಶೀಲಿಸುವಂತೆ ಆದೇಶಿಸಿದೆ. ಸಿಮ್‌ಗಳು ಫೇಕ್ ಪ್ರೂಫ್ ಎಂದು ಕಂಡುಬಂದರೆ ಅವುಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಸಂಚಾರ ಸಾತಿ ಕಾರ್ಯಕ್ರಮದ ಅಡಿಯಲ್ಲಿ, ದೇಶಾದ್ಯಂತ 114 ಕೋಟಿ ಮೊಬೈಲ್ ಸಂಪರ್ಕಗಳನ್ನು DoT ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಇಂಟೆಲಿಜೆನ್ಸ್ ವಿಭಾಗ ವಿಶ್ಲೇಷಿಸಿದೆ. ಈ ಪೈಕಿ 21 ಲಕ್ಷ ಸಿಮ್ ಕಾರ್ಡ್‌ಗಳನ್ನು ಸಕ್ರಿಯಗೊಳಿಸಲು ಫೇಕ್ ಡಾಕುಮೆಂಟ್ ಸಲ್ಲಿಸಿರುವುದು ಪತ್ತೆಯಾಗಿದೆ. ಇವುಗಳಲ್ಲಿ ಹಲವು ಸಿಮ್‌ಗಳನ್ನು ಸೈಬರ್ ಅಪರಾಧಗಳಿಗೆ ಬಳಸಲಾಗುತ್ತಿದೆ ಎಂದು ಶಂಕಿಸಲಾಗಿದೆ. ಇವು ಸಾಬೀತಾದರೆ ಸಿಮ್ ಕಾರ್ಡ್ ರದ್ದಾಗಲಿದೆ ಎಂದು AI&DIU ಮಹಾನಿರ್ದೇಶಕ ಮುಖೇಶ್ ಮಂಗಲ್ ಬಹಿರಂಗಪಡಿಸಿದ್ದಾರೆ.
ಒಬ್ಬರಿಗೆ 9 ಸಿಮ್ ಕಾರ್ಡ್ ಮಿತಿ: ದೇಶಾದ್ಯಂತ, 1.92 ಕೋಟಿ ಜನರು ಒಂಬತ್ತು ಸಿಮ್ ಕಾರ್ಡ್‌ಗಳ ಮಿತಿಯನ್ನು ಮೀರಿ ಸಂಪರ್ಕಗಳನ್ನು ತೆಗೆದುಕೊಂಡಿದ್ದಾರೆ. ಈ ಸೇವಾ ಪೂರೈಕೆದಾರರಲ್ಲಿ ಹೆಚ್ಚಿನವರು ನೀಡಿರುವ ಡೇಟಾದಲ್ಲಿ ಹಲವು ದೋಷಗಳನ್ನು ಹೊಂದಿದ್ದಾರೆ. ಜನರ ಹೆಸರಲ್ಲಿ ಅವರ ಅರಿವಿಲ್ಲದೆ ತೆಗೆದುಕೊಳ್ಳುವ ಸಿಮ್ ಕಾರ್ಡ್‌ಗಳನ್ನು ಗುರುತಿಸಿ ರದ್ದುಪಡಿಸಲು ಸಂಚಾರ ಸಾತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ಈ ಸಂಖ್ಯೆಗಳ ತನಿಖೆ ಸೇರಿದಂತೆ ಇತರ ಕ್ರಮಗಳನ್ನು ಕೈಗೊಳ್ಳಲು ಸೇವಾ ಪೂರೈಕೆದಾರರಿಗೆ DoT ಈಗಾಗಲೇ ಗಡುವು ನಿಗದಿಪಡಿಸಿದೆ. ಇವುಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಸಂಖ್ಯೆಯ ಸಿಮ್ ಕಾರ್ಡ್‌ಗಳ ಸಂಪರ್ಕ ಕಡಿತಗೊಳ್ಳಬಹುದು ಎಂದು ಸರ್ಕಾರ ನಿರೀಕ್ಷಿಸುತ್ತದೆ. ಈ ಸಂಪೂರ್ಣ ಕಾರ್ಯಾಚರಣೆಯಲ್ಲಿ AI&DIU ಇತರ ಕಾನೂನು ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ. ಇದುವರೆಗೆ 1.8 ಲಕ್ಷ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದೆಡೆ, ಶೇ.90ರಷ್ಟು ಸೈಬರ್ ಅಪರಾಧಗಳು ನಕಲಿ ಸಿಮ್ ಕಾರ್ಡ್‌ಗಳ ಬಳಕೆಯನ್ನು ಒಳಗೊಂಡಿವೆ ಎಂದು ತಮಿಳುನಾಡು ಡಿಜಿಪಿ ಶಂಕರ್ ಜಿವಾಲ್ ಹೇಳಿದ್ದಾರೆ.
ಇದನ್ನೂ ಓದಿ: ಹಾವೇರಿ ಎಸಿ ಕಚೇರಿಯ ಪೀಠೋಪಕರಣ ಜಪ್ತಿ