ETV Bharat / bharat

2010ರ RRB ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಮಂಡಳಿಯ ಮಾಜಿ ಅಧ್ಯಕ್ಷ ಸೇರಿ 10 ಜನರಿಗೆ ಜೈಲು ಶಿಕ್ಷೆ - ಜೈಲು ಶಿಕ್ಷೆ

2010ರಲ್ಲಿ ನಡೆದ ರೈಲ್ವೆ ನೇಮಕಾತಿ ಮಂಡಳಿ ನೇಮಕಾತಿಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ 10 ಮಂದಿಗೆ ಶಿಕ್ಷೆ ವಿಧಿಸಲಾಗಿದೆ.

RRB ex-chairman convicted for 2010 Railways recruitment exam paper leak, gets five years in prison

author img

By PTI

Published : Jan 31, 2024, 2:15 PM IST

ನವದೆಹಲಿ: 2010ರಲ್ಲಿ 1,936 ಸಹಾಯಕ ಸ್ಟೇಷನ್ ಮಾಸ್ಟರ್ ಮತ್ತು ಸಹಾಯಕ ಲೋಕೋ ಪೈಲಟ್ ಹುದ್ದೆಗಳ ನೇಮಕಾತಿಗಾಗಿ ನಡೆದ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ರೈಲ್ವೆ ನೇಮಕಾತಿ ಮಂಡಳಿಯ ಮುಂಬಯಿ ಅಧ್ಯಕ್ಷ ಸತ್ಯೇಂದ್ರ ಮೋಹನ್ ಶರ್ಮಾ ಮತ್ತು ಇತರ 9 ಮಂದಿಗೆ ಹೈದರಾಬಾದ್​​ನ ಸಿಬಿಐ ವಿಶೇಷ ನ್ಯಾಯಾಲಯವು ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಅಸ್ಸಾನ್-ಮಂಗಳೂರು ರೈಲು ಅಭಿವೃದ್ಧಿ ನಿಗಮದ ಮಾಜಿ ಸಿಇಒ ಎ.ಕೆ.ಜಗನ್ನಾಧಮ್ ಕೂಡ ಶಿಕ್ಷೆಗೊಳಗಾದವರಲ್ಲಿ ಸೇರಿದ್ದಾರೆ. ನ್ಯಾಯಾಲಯವು ಶರ್ಮಾಗೆ 1.75 ಲಕ್ಷ ರೂ ಮತ್ತು ಜಗನ್ನಾಧಂ ಅವರಿಗೆ 1.31 ಲಕ್ಷ ರೂ ದಂಡ ವಿಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲಾ 10 ಅಪರಾಧಿಗಳಿಗೆ ಒಟ್ಟು 7.87 ಲಕ್ಷ ರೂ. ದಂಡ ವಿಧಿಸಲಾಗಿದೆ.

2010ರ ಜೂನ್ 15ರಂದು ರೈಲ್ವೆ ನೇಮಕಾತಿ ಮಂಡಳಿ ನಡೆಸಬೇಕಿದ್ದ 1,936 ಸಹಾಯಕ ಲೋಕೋ ಪೈಲಟ್ ಮತ್ತು ಸಹಾಯಕ ಸ್ಟೇಷನ್ ಮಾಸ್ಟರ್ ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು. ಶರ್ಮಾ ಮತ್ತು ಜಗನ್ನಾಧಮ್ 2010 ರಲ್ಲಿ ಇತರ ಆರೋಪಿಗಳೊಂದಿಗೆ ಸೇರಿ 3.50 ಲಕ್ಷದಿಂದ 4.00 ಲಕ್ಷ ರೂ.ಗಳವರೆಗೆ ಹಣ ಪಡೆದು ಏಜೆಂಟರ ಮೂಲಕ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಲು ಪಿತೂರಿ ನಡೆಸಿದ್ದರು ಎಂದು ಆರೋಪಿಸಲಾಗಿದೆ.

"ಈ ಪಿತೂರಿಯ ಭಾಗವಾಗಿ ಆರೋಪಿಗಳಾದ ಜಗನ್ನಾಧಮ್ ಶರೀನ್ ಕುಮಾರ್, ಪಿ. ಅಶೋಕ್ ಕುಮಾರ್; ಜಗನ್ನಾಧಮ್ ರಮೇಶ್, ಜಗನ್ನಾಧಮ್ ತಿರುಪತಯ್ಯ, ಮಂದಾರಮ ಶೇಷು ನಾರಾಯಣ ಮೂರ್ತಿ, ವಿವೇಕ್ ಭಾರದ್ವಾಜ್, ಸೃಜನ್ ಜಗನ್ನಾಥ್ ಮತ್ತು ಏಜೆಂಟರಾಗಿ ನೇಮಕಗೊಂಡ ಶ್ರೀರಾಮ ವಿಜಯ್ ಶಂಕರ್ ಅವರನ್ನು ನ್ಯಾಯಾಲಯ ಅಪರಾಧಿಗಳೆಂದು ತೀರ್ಪು ನೀಡಿದೆ. ಏಜೆಂಟರು ದೇಶಾದ್ಯಂತ ಹಲವಾರು ಆಕಾಂಕ್ಷಿಗಳನ್ನು ಸಂಪರ್ಕಿಸಿ ಸುಮಾರು 193 ಆಕಾಂಕ್ಷಿಗಳಿಂದ 5,000 ರಿಂದ 1,50,000 ರೂಪಾಯಿ ಪಡೆದು ಅವರಿಂದ ಮೂಲ ಅರ್ಹತಾ ಪ್ರಮಾಣಪತ್ರಗಳನ್ನು ಸಂಗ್ರಹಿಸಿದ್ದಾರೆ" ಎಂದು ಸಿಬಿಐ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪರೀಕ್ಷಾ ಆಕಾಂಕ್ಷಿಗಳನ್ನು ಗೋವಾ, ಸೋಲಾಪುರ ಮತ್ತು ನಾಗ್ಪುರಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅವರಿಗೆ ಸೋರಿಕೆ ಮಾಡಲಾದ ಪರೀಕ್ಷಾ ಪ್ರಶ್ನೆಪತ್ರಿಕೆಗಳ ಬಗ್ಗೆ ತರಬೇತಿ ನೀಡಲಾಗಿತ್ತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

"ಸಿಬಿಐ ಆರೋಪಿಗಳ ಅಧಿಕೃತ ಮತ್ತು ಇತರ ನಿವಾಸಗಳಲ್ಲಿ ಶೋಧ ನಡೆಸಿತ್ತು. ತನಿಖೆಯಲ್ಲಿ ಸುಮಾರು 36.90 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿತ್ತು ಮತ್ತು ತನಿಖೆಯ ಸಮಯದಲ್ಲಿ, 15 ಆರೋಪಿಗಳನ್ನು ಬಂಧಿಸಲಾಗಿತ್ತು. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು" ಎಂದು ವಕ್ತಾರರು ತಿಳಿಸಿದ್ದಾರೆ.

ದೂರು ದಾಖಲಿಸಿಕೊಂಡ ಮೂರು ತಿಂಗಳೊಳಗೆ ಅಂದರೆ ಸೆಪ್ಟೆಂಬರ್ 13, 2010ರಂದು ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿತ್ತು. ವಿಚಾರಣೆಯ ನಂತರ ನ್ಯಾಯಾಲಯವು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ ಶಿಕ್ಷೆ ವಿಧಿಸಿದೆ. ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಲಾಗಿದ್ದು, ಒಬ್ಬ ಆರೋಪಿ ಮೃತಪಟ್ಟಿದ್ದರಿಂದ ಅವರ ವಿರುದ್ಧದ ವಿಚಾರಣೆ ಕೈಬಿಡಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಶ್ರೀರಾಮ ಮಂದಿರ ನಿರ್ಮಿಸುವ ಶತಮಾನಗಳ ಕನಸು ನನಸಾಗಿದೆ: ರಾಷ್ಟ್ರಪತಿ ಮುರ್ಮು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.