ETV Bharat / bharat

ನೇಪಾಳ ಗಡಿ ಮೂಲಕ ಭಾರತದೊಳಕ್ಕೆ ಅಕ್ರಮವಾಗಿ ನುಸುಳಿದ ಇಬ್ಬರು ಚೀನಿಯರ ಬಂಧನ - chinese citizens arrest - CHINESE CITIZENS ARREST

ನೇಪಾಳದ ಮೂಲಕ ಭಾರತದ ಗಡಿಯೊಳಕ್ಕೆ ಅಕ್ರಮವಾಗಿ ನುಸುಳಿ ಬಂದ ಇಬ್ಬರು ಚೀನಿ ನಾಗರಿಕರನ್ನು ಭದ್ರತಾ ಪಡೆಗಳು ಬಂಧಿಸಿವೆ.

ಇಬ್ಬರು ಚೀನೀಯರ ಬಂಧನ
ಇಬ್ಬರು ಚೀನೀಯರ ಬಂಧನ
author img

By ETV Bharat Karnataka Team

Published : Mar 27, 2024, 4:18 PM IST

ಸಿದ್ಧಾರ್ಥನಗರ (ಉತ್ತರಪ್ರದೇಶ): ಅರುಣಾಚಲಪ್ರದೇಶ ಕುರಿತು ನೆರೆಯ ರಾಷ್ಟ್ರ ಚೀನಾ ಮತ್ತು ಕೇಂದ್ರ ಸರ್ಕಾರ ಮಧ್ಯೆ ತೀವ್ರ ವಾಕ್ಸಮರ ನಡೆದಿರುವ ವೇಳೆಯೇ ಇಬ್ಬರು ಚೀನಿ ಪ್ರಜೆಗಳು ಅಕ್ರಮವಾಗಿ ಭಾರತ ಪ್ರವೇಶಿಸಿದ್ದು, ಅವರನ್ನು ಉತ್ತರಪ್ರದೇಶದಲ್ಲಿ ಮಂಗಳವಾರ ಬಂಧಿಸಲಾಗಿದೆ.

ಭಾರತ- ನೇಪಾಳ ಗಡಿಯಲ್ಲಿ ಭದ್ರತಾ ಪಡೆಗಳು ಗಸ್ತು ಕಾಯುತ್ತಿದ್ದ ವೇಳೆ ಚೀನಾದ ಓರ್ವ ಪುರುಷ ಮತ್ತು ಓರ್ವ ಮಹಿಳಾ ಪ್ರಜೆ ಗಡಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿಯೇ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇಬ್ಬರೂ ಅಕ್ರಮವಾಗಿ ಭಾರತದ ಗಡಿ ಪ್ರವೇಶಿಸಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯಾವ ಕಾರಣಕ್ಕಾಗಿ ಭಾರತದ ಗಡಿ ಪ್ರವೇಶಿಸಿದ್ದಾರ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಖಲೆ ರಹಿತ ಪ್ರವೇಶ: ಮಾರ್ಚ್ 26 ರಂದು ಓರ್ವ ಮಹಿಳೆ ಮತ್ತು ಪುರುಷ ಚೀನಿ ನಾಗರಿಕರು ಭಾರತದ ಗಡಿಯೊಳಗೆ ಬಂದಾಗ ಸ್ಥಳೀಯ ಪೊಲೀಸರು ಮತ್ತು ಎಸ್‌ಎಸ್‌ಬಿ ತಂಡ ಜಂಟಿಯಾಗಿ ಅವರನ್ನು ಬಂಧಿಸಿದೆ. ವಿಚಾರಣೆ ನಡೆಸಿದಾಗ ಅವರು ತಾವು ಚೀನಿಯರು ಎಂದು ತಿಳಿಸಿದ್ದಾರೆ. ಭಾರತದೊಳಕ್ಕೆ ಪ್ರವೇಶಿಸಲು ಸೂಕ್ತ ದಾಖಲೆ ಕೇಳಿದಾಗ ಅವರು ತಬ್ಬಿಬ್ಬಾಗಿದ್ದಾರೆ. ಅಕ್ರಮವಾಗಿ ಅವರು ಗಡಿ ಪ್ರವೇಶಿಸಿದ್ದರಿಂದ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೇಪಾಳದ ಮೂಲಕ ಇಬ್ಬರೂ ಯಾವುದೇ ದಾಖಲೆಗಳಿಲ್ಲದೇ ಭಾರತದ ಗಡಿ ಪ್ರವೇಶಿಸಲು ಮುಂದಾಗಿದ್ದರು ಎಂಬುದನ್ನು ಅವರು ತನಿಖೆಯಲ್ಲಿ ತಿಳಿಸಿದ್ದಾರೆ. ಅಕ್ರಮವಾಗಿ ಭಾರತ ಪ್ರವೇಶಿಸಿದ ಹಿಂದಿನ ಉದ್ದೇಶವೇನು ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಬಂಧಿತರು ತಮ್ಮ ಹೆಸರನ್ನು ಝೌ ಪುಲಿನ್ ಮತ್ತು ಯುವಾನ್ ಎಂದು ತಿಳಿಸಿದ್ದಾರೆ. ಇಬ್ಬರಿಂದ ಎರಡು ಚೈನೀಸ್ ಪಾಸ್‌ಪೋರ್ಟ್‌, 1 ನೇಪಾಳ ಪ್ರವಾಸಿ ವೀಸಾ, 2 ಮೊಬೈಲ್ ಫೋನ್‌ಗಳು, 2 ನೇಪಾಳಿ ಮತ್ತು 2 ಚೈನೀಸ್ ಸಿಮ್‌ಗಳು, 2 ಸಣ್ಣ ಬ್ಯಾಗ್‌ಗಳು ಮತ್ತು ಒಟ್ಟು 9 ಇತರ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾ- ಭಾರತ ಫೈಟ್​: ಅರುಣಾಚಲ ಪ್ರದೇಶದ ಕುರಿತಂತೆ ಚೀನಾ ಮತ್ತು ಭಾರತ ವಾಕ್ಸಮರ ನಡೆಸುತ್ತಿವೆ. 'ಝಂಗ್ನಾನ್' (ಅರುಣಾಚಲಕ್ಕೆ ಚೀನಾ ಇಟ್ಟಿರುವ ಹೆಸರು) ಚೀನಾದ ಪ್ರದೇಶವಾಗಿದೆ. ಭಾರತ ಅದನ್ನು 1987 ರಲ್ಲಿ ಅಕ್ರಮವಾಗಿ ವಶಪಡಿಸಿಕೊಂಡಿದೆ. ಅದನ್ನು ಅರುಣಾಚಲ ಪ್ರದೇಶ ಎಂದು ಕರೆಯುವುದೂ ಅಕ್ರಮ. ಈ ಪ್ರದೇಶದಲ್ಲಿ ಭಾರತ ಕಾನೂನುಬಾಹಿರವಾಗಿ ಹಕ್ಕುಸ್ಥಾಪನೆ ಮಾಡುತ್ತಿದೆ ಎಂದು ಚೀನಾ ವಾದಿಸುತ್ತಿದೆ.

ಇದಕ್ಕೆ ಭಾರತದ ಸರ್ಕಾರ ಖಡಕ್​ ತಿರುಗೇಟು ನೀಡುತ್ತಿದ್ದು, ಅರುಣಾಚಲಪ್ರದೇಶದ ವಿಚಾರದಲ್ಲಿ ಚೀನಾವು ಆಧಾರರಹಿತ ವಾದಗಳನ್ನು ಮಾಡುತ್ತಲೇ ಬರುತ್ತಿದೆ. ಅದರ ವಾದಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಇದನ್ನೂ ಓದಿ: ಅರುಣಾಚಲ ಪ್ರದೇಶದ ಬಗ್ಗೆ ಚೀನಾ ಮತ್ತೆ ಕ್ಯಾತೆ; ಭಾರತದಿಂದ ಸ್ಪಷ್ಟ ಸಂದೇಶ ರವಾನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.